ಬೆಳಗಾವಿಯಲ್ಲಿ ಇನ್ನೂ ಆರದ ಭೂ ಸ್ವಾಧೀನ ಬೆಂಕಿ; ವಿರೋಧದ ನಡುವೆ ರಸ್ತೆ ಕಾಮಗಾರಿಗೆ ಮುಂದಾದ ಜಿಲ್ಲಾಡಳಿತ | Belagavi district administration again plans to restart nh4 bypass road construction after protests


ಬೆಳಗಾವಿಯಲ್ಲಿ ಇನ್ನೂ ಆರದ ಭೂ ಸ್ವಾಧೀನ ಬೆಂಕಿ; ವಿರೋಧದ ನಡುವೆ ರಸ್ತೆ ಕಾಮಗಾರಿಗೆ ಮುಂದಾದ ಜಿಲ್ಲಾಡಳಿತ

ಬೆಳಗಾವಿ ಡಿಸಿ ಎಂ.ಜಿ.ಹಿರೇಮಠ ನೇತೃತ್ವದಲ್ಲಿ ನಡೆದ ಸಭೆ ವಿಫಲ

ಬೆಳಗಾವಿ: ಎನ್​ಹೆಚ್ 4ರ ಬೈಪಾಸ್ ರಸ್ತೆ ವಿಚಾರವಾಗಿ ನಿನ್ನೆ (ನವೆಂಬರ್ 11) ಬೆಳಗಾವಿಯಲ್ಲಿ  ದೊಡ್ಡ ಸಮರವೇ ನಡೆದಿತ್ತು. ಸದ್ಯ ಪ್ರತಿಭಟನೆ ಕಾವು ಹೆಚ್ಚಾದ ಹಿನ್ನೆಲೆ ಬೆಳಗಾವಿ ಡಿಸಿ ಎಂ.ಜಿ.ಹಿರೇಮಠ ನೇತೃತ್ವದಲ್ಲಿ ಸಭೆ ನಡೆಸಿ ರೈತರ ಮನವೊಲಿಸುವ ಪ್ರಯತ್ನ ನಡೆದಿತ್ತು. ಆದ್ರೆ ಅದು ವಿಫಲವಾಗಿದೆ. ನಿನ್ನೆ ಅಷ್ಟೆಲ್ಲಾ ಭಯಾನಕ ಘಟನೆಗಳು ನಡೆದಿದ್ದರೂ ಇಂದು ಮತ್ತೆ ಕಾಮಗಾರಿ ಆರಂಭಿಸಲು ಜಿಲ್ಲಾಡಳಿ ಮುಂದಾಗಿದೆ.

ಮಚ್ಚೆ-ಹಲಗಾ ಗ್ರಾಮದಲ್ಲಿ ಯಾವುದೇ ಕಾರಣಕ್ಕೂ ಬೈಪಾಸ್ ರಸ್ತೆ ಮಾಡಬಾರದು. ರೈತರಿಗೆ ಆಧಾರವಾಗಿದ್ದ ಭೂಮಿಗೆ ಬೆಂಕಿ ಇಡ್ತೀರಾ ಅಂತ, ಅನ್ನದಾತರು ಪೊಲೀಸರು ಮತ್ತು ಜಿಲ್ಲಾಡಳಿತ ವಿರುದ್ಧವೇ ಪ್ರತಿಭಟನೆ ನಡೆಸಿದ್ದರು. ರೈತರ ಪ್ರತಿಭಟನೆ ಕಾವು ಜೋರಾಗ್ತಿದ್ದಂತೆ, ಖುದ್ದು ಜಿಲ್ಲಾಧಿಕಾರಿ ಎಂಜಿ ಹಿರೇಮಠ, ಸಂಧಾನ ಸಭೆಗೆ ಮುಂದಾದ್ರು. ಸಭೆಯಲ್ಲಿ ಜಿಲ್ಲಾಧಿಕಾರಿಗಳು ಕಾಮಾಗಾರಿ ತಡೆಯುವುದನ್ನ ಬಿಟ್ಟು ಬೇರೆ ಏನಾದ್ರು ಹೇಳಿ ಅಂತ ರೈತರಿಗೆ ಹೇಳಿದ್ರು. ಆಗ ರೈತರು ಡಿಸಿ ಜೊತೆ ವಾಗ್ವಾದ ಮಾಡಿದ್ರು. ಡಿಸಿ ಮಾತಿಗೆ ಸೊಪ್ಪು ಹಾಕದೇ ಇಂದು ಪ್ರೊಟೆಸ್ಟ್ ಮಾಡೇ ಮಾಡ್ತಿವಿ ಅಂತ ಎಚ್ಚರಿಕೆ ಕೊಟ್ರು.

ನಂತ್ರ ಸಭೆ ಬಳಿಕ ಮಾತನಾಡಿದ ಡಿಸಿ ಎಂಜಿ ಹಿರೇಮಠ, ನಿಯಮದಂತೆ ವರ್ಕ್ ಆರ್ಡರ್ ಹಿಡಿದು ಕೆಲಸ ಮಾಡ್ತಿದ್ದೇವೆ. 9.5 ಕಿಲೋ ಮೀಟರ್ ಮಾರ್ಕಿಂಗ್ ಕೆಲಸ ಆಗಿದೆ. ಮೇಲಾಗಿ ಈ ಹಿಂದೆ ರೈತರಿಗೆ ಪರಿಹಾರ ನೀಡಿ, ಭೂ ಸ್ವಾಧೀನ ಮಾಡಲಾಗಿತ್ತು. ಈ ಬಾರಿ ರೈತರು ಹೆಚ್ಚಿನ ಪರಿಹಾರ ಕೇಳಿದ್ರೆ ಚರ್ಚೆ ಮಾಡಿ, ನಿರ್ಧಾರಕ್ಕೆ ಬರ್ತೆವೆ ಆದ್ರೆ ಕಾಮಾಗಾರಿ ಮಾತ್ರ ನಿಲ್ಲಿಸಲ್ಲ ಎಂದು ಎಂಜಿ ಹಿರೇಮಠ ನಿನ್ನೆ ತಿಳಿಸಿದ್ದರು. ಅದರಂತೆ ಇಂದು ಕಾಮಗಾರಿ ಆರಂಭಿಸಲು ಜಿಲ್ಲಾಡಳಿತ ಮುಂದಾಗಿದೆ.

ನಿನ್ನೆ ಪ್ರತಿಭಟನಾನಿರತ ರೈತರ‌ನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದೇ ವೇಳೆ ರೈತ ಆಕಾಶ್ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಹೀಗಾಗಿ ನಿನ್ನೆ ಕಾಮಗಾರಿ ತಾತ್ಕಾಲಿವಾಗಿ ಸ್ಥಗಿತ ಮಾಡಲಾಗಿತ್ತು. ಬಳಿಕ ಸಂಜೆ ಧರಣಿನಿರತ ರೈತರ ಜತೆ ಸಭೆ ನಡೆಸಲಾಗಿತ್ತು. ರೈತರ ಜೊತೆ ಜಿಲ್ಲಾಧಿಕಾರಿ ನಡೆಸಿದ ಸಭೆ ಫಲಪ್ರದವಾಗಿಲ್ಲ. ಆದರೂ ಇಂದು ಕಾಮಗಾರಿ ಆರಂಭಿಸಲು ಡಿಸಿ ನಿರ್ಧಾರ ಮಾಡಿದ್ದಾರೆ. ಈಗಾಗಲೇ 825 ರೈತರಿಗೆ 27 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ. ಉಳಿದ 155 ರೈತರಿಗೆ ಪರಿಹಾರ ನೀಡಬೇಕಿದೆ. ಪರಿಹಾರ ಪಡೆಯುವುದಕ್ಕೆ ಕೆಲವರು ನಿರಾಕರಿಸಿದ್ದಾರೆ. ಇನ್ನೂ ಕೆಲವರಿಂದ ಹೆಚ್ಚು ಪರಿಹಾರ ಬೇಕೆಂದು ಡಿಮ್ಯಾಂಡ್ ಇದೆ.

ಇದನ್ನೂ ಓದಿ: ರೈತರು, ಮಹಿಳೆಯರ ಮೇಲೆ ಪೊಲೀಸರ ದಬ್ಬಾಳಿಕೆ; ಧರಣಿ ವೇಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಜಮೀನು ಮಾಲೀಕ

TV9 Kannada


Leave a Reply

Your email address will not be published. Required fields are marked *