ಬಳ್ಳಾರಿ: ರಾಮದುರ್ಗ ತಾಲೂಕಿನಲ್ಲಿ ಚುಚ್ಚುಮದ್ದು ಪಡೆದ ನಂತರ ನಿಗೂಢವಾಗಿ ಅಸ್ವಸ್ಥಗೊಂಡಿದ್ದ ಮಕ್ಕಳ ಸಾವಿನ ಸಂಖ್ಯೆ 3ಕ್ಕೆ ಏರಿಕೆ ಆಗಿದೆ. ನಿನ್ನೆ ಸಂಜೆ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಚೇತನಾ ಎನ್ನುವ ಮಗು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ ಎಂದು ನ್ಯೂಸ್ಫಸ್ಟ್ಗೆ ಬೆಳಗಾವಿ ಆರ್ಸಿಹೆಚ್ಒ (ಜಿಲ್ಲಾ ಲಸಿಕಾಕರಣ ಅನುಷ್ಠಾನ ಅಧಿಕಾರಿ) ಈಶ್ವರ ಗಡಾದ್ ಹೇಳಿದ್ದಾರೆ. ಬೋಚಬಾಳ ಗ್ರಾಮದಲ್ಲಿ ಇಬ್ಬರು ಮಕ್ಕಳು, ಮಲ್ಲಾಪೂರ ಗ್ರಾಮದಲ್ಲಿ ಒಂದು ಮಗು ಸಾವನ್ನಪ್ಪಿದೆ.
ಈ ಬಗ್ಗೆ ನ್ಯೂಸ್ಫಸ್ಟ್ ಜೊತೆ ಮಾತನಾಡಿರುವ ಈಶ್ವರ ಗಡಾದ್, ಜನವರಿ 10 ರಂದು ಆರೋಗ್ಯ ಕಾರ್ಯಕರ್ತೆ ಒಬ್ಬರು ಚುಚ್ಚುಮದ್ದು ಹಾಕಲು ವಯಲ್ ತೆಗೆದುಕೊಂಡು ಹೋಗಿದ್ದರು. ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ವಯಲ್ ತೆಗೆದುಕೊಂಡು ಹೋಗಿದ್ದರು. ಅದರಂತೆ ಜನವರಿ 11ರಂದು ಮಲ್ಲಾಪೂರ ಗ್ರಾಮದಲ್ಲಿ ಲಸಿಕೆ ವಿತರಣೆ ಮಾಡಿದ್ದಳು. ಮಲ್ಲಾಪೂರದಲ್ಲಿ ಚುಚ್ಚುಮದ್ದು ಪಡೆದ ಚೇತನಾ ಪೂಜಾರಿ (17ತಿಂಗಳು) ಅದೇ ದಿನ ಸಾವನ್ನಪ್ಪಿದ್ದಳು.
ಇದು ಗೊತ್ತಿದ್ದೂ ಜನವರಿ 12 ರಂದು ಬೋಚಬಾಳ ಗ್ರಾಮದಲ್ಲಿ ಅದೇ ವೈಯಲ್ನಿಂದ 21 ಮಕ್ಕಳಿಗೆ ಚುಚ್ಚುಮದ್ದು ನೀಡಲಾಗಿದೆ. ಚುಚ್ಚುಮದ್ದು ಪಡೆದ 4 ಮಕ್ಕಳು ಅಸ್ವಸ್ಥರಾಗಿದ್ದು, ಜನವರಿ 13 ರಂದು ಪವಿತ್ರಾ (13 ತಿಂಗಳು) ಸಾವನ್ನಪ್ಪಿದೆ. ಜನವರಿ 16 ರಂದು ಬಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಧು (13 ತಿಂಗಳು) ಸಾವನ್ನಪಿದೆ ಎಂದು ಈಶ್ವರ್ ಗಡಾದ್ ತಿಳಿಸಿದ್ದಾರೆ.