ಬೆಳಗಾವಿ: ಆನ್​ಲೈನ್​ ವಂಚಕರಿಗೆ ಶಾಕ್; ಗೋಲ್ಡ್ ಅವರ್ ಅಸ್ತ್ರ ಪ್ರಯೋಗಿಸಿದ ಪೊಲೀಸರು | CEN police detained 2 crore rupees and alert the people about online cheating in belagavi


ಬೆಳಗಾವಿ: ಆನ್​ಲೈನ್​ ವಂಚಕರಿಗೆ ಶಾಕ್; ಗೋಲ್ಡ್ ಅವರ್ ಅಸ್ತ್ರ ಪ್ರಯೋಗಿಸಿದ ಪೊಲೀಸರು

ಬೆಳಗಾವಿ ಸಿಇಎನ್ ಪೊಲೀಸರ ಭರ್ಜರಿ ಕಾರ್ಯಾಚರಣೆ

ಬೆಳಗಾವಿ: ಕಳೆದೊಂದು ವರ್ಷದ ಅವಧಿಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗಿವೆ. ಇದನ್ನು ಗಮನಿಸಿ ಅಲರ್ಟ್ ಆದ ಸಿಇಎನ್ ಪೊಲೀಸರು ಆನ್​ಲೈನ್​ ವಂಚಕರ ವಿರುದ್ಧ ಗೋಲ್ಡ್ ಅವರ್ ಅಸ್ತ್ರ ಪ್ರಯೋಗ ಮಾಡಿದ್ದರು. ಸೈಬರ್ ವಂಚನೆಯಲ್ಲಿ ಬ್ಯಾಂಕ್ ಖಾತೆಯಿಂದ ಹಣ ಕಳೆದುಕೊಂಡವರಿಗೆ 2 ಕೋಟಿ 33 ಲಕ್ಷ ರೂಪಾಯಿ ಫ್ರೀಜ್ ಮಾಡಿದ್ದಾರೆ. ಆ ಮೂಲಕ ನೊಂದವರಿಗೆ ಹಣ ಮರು ಸಂದಾಯ ಕಾರ್ಯವನ್ನು ಬೆಳಗಾವಿ ಸಿಇಎನ್ ಪೊಲೀಸರ ತಂಡ ಮಾಡುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ. ಅಷ್ಟಕ್ಕೂ ಎನಿದು ಗೋಲ್ಡ್ ಅವರ್ ಅಸ್ತ್ರ? ಈ ವರದಿ ಓದಿ.

ಬೆಳಗಾವಿಯಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ದೇಶ, ವಿದೇಶದ ಯಾವುದೋ ಮೂಲೆಯಲ್ಲಿ ಕುಳಿತು ಅಮಾಯಕರಿಗೆ ಟೋಪಿ ಹಾಕುತ್ತಿರುವ ವಂಚಕರ ಸಂಖ್ಯೆ ಹೆಚ್ಚಾಗಿದೆ. ಪ್ರತಿ ದಿನವು ಆನ್‌ಲೈನ್​ನಲ್ಲಿ ಮೋಸಕ್ಕೊಳಗಾಗಿ ಜನ ಹಣ ಕಳೆದುಕೊಳ್ಳುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಕೇವಲ ಬೆಳಗಾವಿ ಪೊಲೀಸ್ ಕಮೀಷನರ್ ಕಚೇರಿ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಲ್ಲಿ 1309 ಸೈಬರ್ ವಂಚನೆ ದೂರುಗಳು ದಾಖಲಾಗಿವೆ.

ಬೆಳಗಾವಿ ಸಿಇಎನ್ ಪೊಲೀಸರ ಭರ್ಜರಿ ಕಾರ್ಯಾಚರಣೆ
ಒಂದು ವರ್ಷದಲ್ಲಿ ಅಮಾಯಕ ಜನರು 2 ಕೋಟಿ 45 ಲಕ್ಷ 37 ಸಾವಿರ ರೂಪಾಯಿ ಹಣವನ್ನು ಆನ್​ಲೈನ್​ನಲ್ಲಿ ವಂಚನೆಗೊಳಗಾಗಿ ಕಳೆದುಕೊಂಡಿದ್ದರು. ಬೆಳಗಾವಿ ಸಿಇಎನ್ ಇನ್ಸ್​ಪೆಕ್ಟರ್​ ಬಿ.ಆರ್.ಗಡ್ಡೇಕರ ತಂಡ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಈವರೆಗೂ ವಂಚನೆಯಾದ ಹಣದಲ್ಲಿ 2 ಕೋಟಿ 39 ಲಕ್ಷ 9 ಸಾವಿರ ರೂಪಾಯಿ ಹಣವನ್ನು ಫ್ರೀಜ್ ಮಾಡಿಸಿದ್ದಾರೆ. ಇದರಲ್ಲಿ ಈಗಾಗಲೇ ನೂರಾರು ಜನರಿಗೆ 88 ಲಕ್ಷ ರೂಪಾಯಿ ಹಣವನ್ನು ಮರಳಿ ಅವರ ಖಾತೆಗೆ ಜಮಾ ಆಗುವಂತೆ ಮಾಡಿದ್ದಾರೆ. ಇನ್ನುಳಿದ 1 ಕೋಟಿ 44 ಲಕ್ಷ 99 ಸಾವಿರ ಹಣವನ್ನು ಕಾನೂನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನೊಂದವರ ಕೈಗೆ ಮತ್ತೆ ಸೇರಲಿದೆ. ಆ ಮೂಲಕ ಬೆಳಗಾವಿ ಸಿಇಎನ್ ಪೊಲೀಸರು ಸೈಬರ್ ಹಣ ವಂಚಕರ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಜನರೂ ಸಹ ಎಚ್ಚರದಿಂದ ಇರಲು‌ ಪೊಲೀಸರು ಮನವಿ ಮಾಡಿದ್ದಾರೆ.

ಇದನ್ನೂ ಓದಿ:
ಡ್ಯಾನ್ಸ್​ ಬಾರ್​​ಗಳಿಗೆ ಲೈಸೆನ್ಸ್​ ಕೊಡಿಸುವುದಾಗಿ ಗೃಹ ಸಚಿವರ ಹೆಸರಲ್ಲಿ ವಂಚನೆ; ಆರೋಪಿ ಸಿಸಿಬಿ ವಶಕ್ಕೆ

ಒಂದು ವರ್ಷದಲ್ಲಿ 80ಕ್ಕೂ ಹೆಚ್ಚು ಆನ್​ಲೈನ್​ ವಂಚನೆ ಪ್ರಕರಣ ಪತ್ತೆ; ಬೆಳಗಾವಿ ಜನತೆಗೆ ಎಚ್ಚರಿಸಿದ ಪೊಲೀಸರು

 

TV9 Kannada


Leave a Reply

Your email address will not be published. Required fields are marked *