ಬೆಳಗಾವಿ ಜಿಲ್ಲಾಸ್ಪತ್ರೆ ವಾರ್ಡ್‌ನ ಗೇಟ್‌ಗೆ ಬೀಗ ಹಾಕಿ ಹೋಗಿದ್ದ ಸಿಬ್ಬಂದಿ, ಅನಿರೀಕ್ಷಿತವಾಗಿ ಜಡ್ಜ್ ಬಂದಿದ್ದು ಗಮನಿಸಿ ಓಡೋಡಿ ಬಂದು ಬೀಗ ಒಡೆದರು! | High court Judges Visit Belagavi district hospital and worns officials


ಬೆಳಗಾವಿ ಜಿಲ್ಲಾಸ್ಪತ್ರೆ ವಾರ್ಡ್‌ನ ಗೇಟ್‌ಗೆ ಬೀಗ ಹಾಕಿ ಹೋಗಿದ್ದ ಸಿಬ್ಬಂದಿ, ಅನಿರೀಕ್ಷಿತವಾಗಿ ಜಡ್ಜ್ ಬಂದಿದ್ದು ಗಮನಿಸಿ ಓಡೋಡಿ ಬಂದು ಬೀಗ ಒಡೆದರು!

ಅನಿರೀಕ್ಷಿತವಾಗಿ ಜಡ್ಜ್ ಬಂದಿದ್ದು ಗಮನಿಸಿ ಓಡೋಡಿ ಬಂದು ಬೀಗ ಒಡೆದರು

ಹೈಕೋರ್ಟ್ ಜಡ್ಜ್ ಬಿ.ವೀರಪ್ಪ, ರೋಗಿಗಳ ಆರೋಗ್ಯ ವಿಚಾರಿಸಿ ಚಿಕಿತ್ಸೆ ಕುರಿತು ಮಾಹಿತಿ ಪಡೆದಿದ್ದಾರೆ. ಹಾಗೂ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಮತ್ತು ಅಸ್ವಚ್ಛತೆ ಕಂಡು ನ್ಯಾ.ಬಿ.ವೀರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ: ಬೆಳಗಾವಿ ಜಿಲ್ಲಾಸ್ಪತ್ರೆಗೆ ಹೈಕೋರ್ಟ್ ಜಡ್ಜ್, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ವೀರಪ್ಪ ದಿಢೀರ್ ಭೇಟಿ ನೀಡಿದ್ದು ವಾರ್ಡ್‌ನ ಗೇಟ್‌ಗೆ ಬೀಗ ಹಾಕಿಕೊಂಡು ಹೋಗಿದ್ದ ಸಿಬ್ಬಂದಿ ಜಡ್ಜ್ ಬಂದಿದ್ದನ್ನ ಗಮನಿಸಿ ತರಾತುರಿಯಲ್ಲಿ ಬೀಗ ಒಡೆದ ಘಟನೆ ನಡೆದಿದೆ.

ಹೈಕೋರ್ಟ್ ಜಡ್ಜ್ ಬಿ.ವೀರಪ್ಪ, ರೋಗಿಗಳ ಆರೋಗ್ಯ ವಿಚಾರಿಸಿ ಚಿಕಿತ್ಸೆ ಕುರಿತು ಮಾಹಿತಿ ಪಡೆದಿದ್ದಾರೆ. ಹಾಗೂ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಮತ್ತು ಅಸ್ವಚ್ಛತೆ ಕಂಡು ನ್ಯಾ.ಬಿ.ವೀರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೂಡಲೇ ಸರ್ಕ್ಯೂಟ್ ಹೌಸ್‌ಗೆ ಬಂದು ಭೇಟಿಯಾಗುವಂತೆ ಡಿಸಿಗೆ ಸೂಚನೆ ನೀಡಿದ್ದಾರೆ. ಇನ್ನು ನ್ಯಾಯಾಧೀಶರು ರೋಗಿಗಳ ಸಂಬಂಧಿಕರಿಂದಲೂ ಮಾಹಿತಿ ಪಡೆದಿದ್ದಾರೆ. ರೋಗಿಗಳ ಸಂಬಂಧಿಕರಿಗೆ ವಿಶ್ರಾಂತಿ ಕೊಠಡಿ ವ್ಯವಸ್ಥೆ ಮಾಡಲು ಸೂಚನೆ ನೀಡಿದ್ದಾರೆ. ಹಾಗೂ ಕೂಡಲೇ ಆಸ್ಪತ್ರೆಯಲ್ಲಿನ ಶೌಚಾಲಯ ಅವ್ಯವಸ್ಥೆ ಸರಿಮಾಡಲು ಸೂಚಿಸಿದ್ದಾರೆ.

Judges Visit Belagavi district hospital 1

ಹೈಕೋರ್ಟ್ ಜಡ್ಜ್ ಬಿ.ವೀರಪ್ಪ, ರೋಗಿಗಳ ಆರೋಗ್ಯ ವಿಚಾರಿಸಿದ್ರು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *