ಬೆಳಗಿನ ಜಾವ 5 ಗಂಟೆಗೆ ರಾಯಚೂರು ಬಳಿ ಎಮ್ಮೆಗೆ ಢಿಕ್ಕಿ ಹೊಡೆದ ಖಾಸಗಿ ಬಸ್, ಐವರು ಪ್ರಯಾಣಿಕರಿಗೆ ಗಂಭೀರ ಗಾಯ | Five seriously injured after a private bus hits a buffalo at 5 am Thursday near Raichurಬಸ್ಸು ಎಮ್ಮೆಗೆ ಎಷ್ಟು ಜೋರಾಗಿ ಗುದ್ದಿದೆಯೆಂದರೆ ಅದು ಸ್ಥಳದಲ್ಲೇ ಕೊನೆಯುಸಿರೆಳೆದಿದೆ ಮತ್ತು ವಾಹನ ಪಲ್ಟಿಯಾಗಿಬಿಟ್ಟಿದೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಬಸ್ಸಲ್ಲಿದ್ದ ಐವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ

TV9kannada Web Team


| Edited By: Arun Belly

May 12, 2022 | 10:46 PM
ರಾಯಚೂರು: ಬೆಳಗಿನ ಜಾವ 5 ಗಂಟೆಗೆ ಎಮ್ಮೆಯೊಂದು ಬಸ್ಸಿಗೆ ಅಡ್ಡಬಂದು ಅಪಘಾತಕ್ಕೆ ಕಾರಣವಾಗುವುದು ಸಾಧ್ಯವೇ? ರಾಯಚೂರಿಗೆ ಹತ್ತಿರದ ಕರ್ನಾಟ-ತೆಲಂಗಾಣ (Karnataka-Telangana) ಗಡಿಭಾಗದ ಊರಾಗಿರುವ ಮಾಗನೂರು (Maganur) ಬಳಿ ಗುರುವಾರ ಬೆಳಗ್ಗೆ ಸಂಭವಿಸಿದ್ದು ಅದೇ. ಬಸ್ಸಿನ ಸ್ಥಿತಿ ನೋಡಿದರೆ ಭೀಕರ ಅಪಘಾತವೇ ಜರುಗಿದೆ ಅನಿಸದಿರದು. ಬಸ್ಸು ಎಮ್ಮೆಗೆ ಎಷ್ಟು ಜೋರಾಗಿ ಗುದ್ದಿದೆಯೆಂದರೆ ಅದು ಸ್ಥಳದಲ್ಲೇ ಕೊನೆಯುಸಿರೆಳೆದಿದೆ ಮತ್ತು ವಾಹನ ಪಲ್ಟಿಯಾಗಿಬಿಟ್ಟಿದೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಬಸ್ಸಲ್ಲಿದ್ದ ಐವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಮತ್ತು ಅವರನ್ನು ರಾಯಚೂರಿನ ರಿಮ್ಸ್ (RIMS) ಆಸ್ಪತ್ರೆಗೆ ದಾಖಲಿಸಲಾಗಿದೆ.

ಎಮ್ಮೆ ಬಸ್ಸಿಗೆ ಅಡ್ಡಬಂದ ಸಂಗತಿ ಯಾಕೆ ಆಶ್ಚರ್ಯ ಮೂಡಿಸುತ್ತದೆ ಅಂದರೆ, ಸಾಮಾನ್ಯವಾಗಿ ಗ್ರಾಮೀಣ ಭಾಗಗಳಲ್ಲಿ ರೈತಾಪಿ ಜನ ಹೊತ್ತು ಮೂಡಿದ ನಂತರ ಅಂದರೆ ಸೂರ್ಯ ಮೂಡಿದ ಬಳಿಕ ತಮ್ಮ ದನಕರುಗಳನ್ನು ಜಮೀನುಗಳ ಕಡೆ ತೆಗೆದುಕೊಂಡು ಹೋಗುತ್ತಾರೆ.

ಅಪಘಾತಕ್ಕೀಡಾದ ಖಾಸಗಿ ಬಸ್ಸು ಹುಬ್ಬಳ್ಳಿಯಿಂದ ಹೈದರಾಬಾದ್ ಗೆ ಹೊರಟಿತ್ತು. ಗಾಯಗೊಂಡಿರುವವರೆಲ್ಲ ಹೈದರಾಬಾದ್ ನವರೆಂದು ತಿಳಿದು ಬಂದಿದೆ ಮಾರಾಯ್ರೇ. ಮೂಲಗಳ ಪ್ರಕಾರ ಅವರು ಕ್ಯಾನ್ಸರ್ ರೋಗಕ್ಕೆ ನಾಟಿ ಔಷಧಿ ನೀಡುವ ಆಯುರ್ವೇದ ವೈದ್ಯರಲ್ಲಿಗೆ ಬಂದಿದ್ದರು.

ತೆಲಂಗಾಣದ ಮಾಗನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

TV9 Kannada


Leave a Reply

Your email address will not be published. Required fields are marked *