ಬೆಳಗಿನ ಉಪಾಹಾರಕ್ಕೆ ಹೆಚ್ಚು ಆದ್ಯತೆಯ ರೈಸ್ ಪಾಕವಿಧಾನ ಇದಾಗಿದೆ. ಏನು ತಿಂಡಿ ಮಾಡುವುದು ಎಂದು ಯೋಚಿಸುತ್ತಾ ಕುಳಿತುಕೊಳ್ಳುವ ಬದಲಾಗಿ ನೀವು ಮನೆಯಲ್ಲಿಯೇ ಹೋಟೆಲ್ ಟೆಸ್ಟ್ ಕೊಡುವ ರೀತಿಯಲ್ಲಿ ಸರಳವಾಗಿ ರುಚಿಯಾದ ಬಿಸಿ ಬೇಳೆ ಬಾತ್ ಮಾಡಲು ಇಲ್ಲಿದೆ ಮಾಡುವ ವಿಧಾನ…

ಬೇಕಾಗುವ ಸಾಮಗ್ರಿಗಳು:

* ಟೊಮೆಟೊ _ 3
* ತೊಗರಿಬೇಳೆ- 1/2 ಕಪ್
* ಬಿಸಿಬೇಳೆ ಬಾತ್ ಮಸಾಲ – 5 ಚಮಚ
* ಸಾಸಿವೆ
* ಚಕ್ಕೆ – 2
* ಲವಂಗ- 4
* ನಕ್ಷತ್ರಮೊಗ್ಗು- 2
* ಗೋಡಂಬಿ – 5ರಿಂದ 6
* ಕೆಂಪು ಮೆಣಸು- 3
* ಇಂಗು ಚಿಟಿಕೆಯಷ್ಟು
* ಅರಿಶಿಣ – ಆರ್ಧ ಟೀ ಸ್ಪೂನ್
* ತೆಂಗಿನಕಾಯಿ – ಅರ್ಧ ಕಪ್
* ಬೆಲ್ಲ- ಅಗತ್ಯಕ್ಕೆ ತಕ್ಕಷ್ಟು
* ಉಪ್ಪು ರುಚಿಗೆ ತಕ್ಕಷ್ಟು
* ಕ್ಯಾರೆಟ್, ಬೀನ್ಸ್, ಆಲೂಗಡ್ಡೆ
* ಕಡಲೆಕಾಯಿ- ಸ್ವಲ್ಪ
* ಹುಣಸೆಹಣ್ಣಿನ ರಸ
* ಈರುಳ್ಳಿ- 2
* ಅಕ್ಕಿ – 2 ಕಪ್
* ಗರಂ ಮಸಾಲ
* ಅಕ್ಕಿ – 1 ಕಪ್

ಮಾಡುವ ವಿಧಾನ:

* ಕುಕ್ಕರ್ ಪಾತ್ರೆಯನ್ನು ತೆಗೆದುಕೊಂಡು ಸ್ವಲ್ಪ ಎಣ್ಣೆಯನ್ನು ಹಾಕಿ ಬಿಸಿ ಮಾಡಿ ಸಾಸಿವೆ, ಒಣಮೆಣಸಿನ ಕಾಯಿ, ಗೋಡಂಬಿ, ಕರಿಬೇವಿನ ಎಲೆ, ಕೆಂಪು ಮೆಣಸು, ಲವಂಗ, ನಕ್ಷತ್ರಮೊಗ್ಗು ಮತ್ತು ಗರಂ ಮಸಾಲ ಸೇರಿಸಿ 2-3 ನಿಮಿಷಗಳ ಕಾಲ ಹುರಿಯಿರಿ.

* ಟೊಮೆಟೊ, ಅರಿಶಿಣ, ಇರುಳ್ಳಿ, ಇಂಗು ಮತ್ತು ಹೆಚ್ಚಿಕೊಂಡ ತರಕಾರಿಗಳನ್ನು ಕುಕ್ಕರ್‍ಗೆ ಸೇರಿಸಿ 2-3 ನಿಮಿಷ ಫ್ರೈ ಮಾಡಬೇಕು.

* ನಂತರ ಒಣ ತೆಂಗಿನ ತುರಿ ಮತ್ತು ಬಿಸಿಬೇಳೆ ಬಾತ್ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣಗೊಳಿಸಿ ಬೇಯಿಸಬೇಕು.

* ಅಕ್ಕಿಯನ್ನು ತೊಳೆದು ಕುಕ್ಕರ್ ಪಾತ್ರೆಗೆ ಹಾಕಬೇಕು. ಒಂದು ಕಪ್ ಅಕ್ಕಿಗೆ ಮೂರು ಕಪ್ ನೀರನ್ನು ಸೇರಿಸಿ. ಮಿಶ್ರಣಕ್ಕೆ ಚಿಟಕೆ ಬೆಲ್ಲ, ಹುಳಿರಸ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.- ಬಳಿಕ ಕುಕ್ಕರ್ ಮುಚ್ಚಳವನ್ನು ಮುಚ್ಚಿ ಬೇಯಿಸಬೇಕು.

* ಕುಕ್ಕರ್ ಅನ್ನು 3-4 ಸೀಟಿ ಕೂಗಿಸಿ, ಮಿಶ್ರಣವನ್ನು ಮೃದುವಾಗಿ ಬೇಯಸಿಕೊಳ್ಳಿ. ಉಗಿ ಇಳಿದ ಬಳಿಕ, ಮುಚ್ಚಳವನ್ನು ತೆರೆದು, ಚೆನ್ನಾಗಿ ತಿರುವಿ.- ಬಿಸಿ ಬಿಸಿಯಾದ ಬಿಸಿಬೇಳೆ ಬಾತ್ ಅನ್ನು ಚಿಪ್ಸ್, ಬೂಂದಿ ಕಾಳು ಜೊತೆಗೆ ಸವಿಯಲು ಸಿದ್ಧವಾಗುತ್ತದೆ.

The post ಬೆಳಗ್ಗಿನ ಟಿಫಿನ್‌ಗೆ ಮಾಡಿ ಬಿಸಿ ಬೇಳೆ ಬಾತ್ appeared first on Public TV.

Source: publictv.in

Source link