ಕೇದಾರನಾಥ: ಇಂದು ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಹಿಮಾಲಯದ ಕೇದಾರನಾಥ ಜ್ಯೊತಿರ್ಲಿಂಗ ದೇವಾಲಯದ ಬಾಗಿಲನ್ನು ತೆರೆಯಲಾಗಿದೆ. ವೀರಶೈವ ಪಂಚಾಚಾರ್ಯ ಕೇದಾರ ಜಗದ್ಗುರು  ಭೀಮಾಶಂಕರ ಶಿವಾಚಾರ್ಯ ಹಾಗೂ ಕೇದಾರನಾಥ ದೇವಾಲಯದ ಪ್ರಧಾನ ಅರ್ಚಕ ವಾಗೀಶ್ ಲಿಂಗಾಚಾರ್ಯ ಅವರು ಇಂದು ಬ್ರಾಹ್ಮೀ ಮುಹೂರ್ತದಲ್ಲಿ ದೇವಾಲಯದ ಬಾಗಿಲು ತೆಗೆದು ಧಾರ್ಮಿಕ ವಿಧಿಯನ್ನು ನೆರವೇರಿಸಿದ್ದಾರೆ.

ಭಸ್ಮದಿಂದ ಮುಚ್ಚಲಾಗಿದ್ದ ಕೇದಾರನಾಥ ಶಿವಲಿಂಗವನ್ನು ರುದ್ರಾಭಿಷೇಕದ ಮೂಲಕ ಧ್ಯಾನಾವಸ್ಥೆಯಿಂದ ಜಾಗೃತಗೊಳಿಸುವ ವಿಧಿ ಹಾಗೂ ದೀಪಾವಳಿಯ ದಿನ ಹಚ್ಚಲಾಗಿದ್ದ ಅಖಂಡ ದೀಪದ ದರ್ಶನ ಮಾಡಲಾಯಿತು ಎಂದು ಪ್ರಧಾನ ಅರ್ಚಕ ವಾಗೀಶ್ ಲಿಂಗಾಚಾರ್ಯ ಅವರು ತಿಳಿಸಿದ್ದಾರೆ. ಇದೇ ವೇಳೆ BSF ಭದ್ರತೆಯೊಂದಿಗೆ ಕೇದಾರನಾಥ ಉತ್ಸವಮೂರ್ತಿಯನ್ನು ಉತ್ತರಾಖಂಡದ ಉಕ್ಕಿಮಠ್​​ನಿಂದ ಕೇದಾರನಾಥ ದೇವಾಲಯಕ್ಕೆ ತರಲಾಗಿದೆ.

ಉತ್ತರಾಖಂಡ ಸರ್ಕಾರದ ಆದೇಶದಂತೆ ಸದ್ಯಕ್ಕೆ ಭಕ್ತರ ಪ್ರವೇಶವನ್ನು ನಿಷೇಧಿಸಲಾಗಿದ್ಥು ಮಹಾಮಾರಿ ಕೊರೊನಾ ನಿವಾರಣೆಗಾಗಿ ಕೇದಾರನಾಥ ತ್ರಿಕಾಲದಲ್ಲಿಯೂ ವಿಶೇಷ ಪೂಜೆ ನಡೆಸಲಾಗುವುದೆಂದು ಪ್ರಧಾನ ಅರ್ಚಕ ವಾಗೀಶ್ ಲಿಂಗಾಚಾರ್ಯ ನ್ಯೂಸ್​​​ಫಸ್ಟ್​​ಗೆ ತಿಳಿಸಿದ್ದಾರೆ.

The post ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಕೇದಾರನಾಥ ದೇವಾಲಯದ ಬಾಗಿಲು ಓಪನ್ appeared first on News First Kannada.

Source: newsfirstlive.com

Source link