ಹುಬ್ಬಳ್ಳಿ: ಮದುವೆಯಾದ ದಿನವೇ ವರ ಸಾವನ್ನಪ್ಪಿದ ದಾರುಣ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಕಲಘಟಗಿ ತಾಲೂಕಿನ ತಬಕದಹೊನ್ನಳ್ಳಿ ಗ್ರಾಮದ ಶಶಿಕುಮಾರ್ ಪಟ್ಟಣಶೆಟ್ಟಿ ಮೃತ ದುರ್ದೈವಿ.

ನಿನ್ನೆ ಬೆಳಗ್ಗೆಯಷ್ಟೆ ಶಶಿಕುಮಾರ್ ಅವರ ವಿವಾಹವಾಗಿತ್ತು. ಬಳಿಕ ಅವರು ತಮ್ಮ  ಮಾವನ ಮನೆಗೆ ತೆರಳಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಶಶಿಕುಮಾರ್ ಪ್ರಾಣಬಿಟ್ಟಿದ್ದಾರೆ. ಸಾವಿಗೆ ನಿಖರ ಕಾರಣ ಏನೆಂದು ತಿಳಿದುಬಂದಿಲ್ಲ. ಸಡನ್ ಆಗಿ ಸಾವಿಗೀಡಾಗಿದ್ದರಿಂದ ಹೃದಯಾಘಾತವಾಗಿರಬಹುದು ಎಂದು ಶಂಕಿಸಲಾಗಿದೆ.

ನಿನ್ನೆ ಬೆಳಗ್ಗೆಯಿಂದ ಖುಷಿ ಖುಷಿಯಿಂದ ಇದ್ದ ಕುಟುಂಬಸ್ಥರು ಮದುಮಗನ ಸಾವಿನಿಂದಾಗಿ ಆಘಾತಕ್ಕೋಳಗಾಗಿದ್ದು, ಶೋಕದಲ್ಲಿ ಮುಳುಗಿದ್ದಾರೆ.

The post ಬೆಳಗ್ಗೆ ಮದುವೆ, ರಾತ್ರಿ ಇದ್ದಕ್ಕಿದ್ದಂತೆ ಮದುಮಗನ ಸಾವು appeared first on News First Kannada.

Source: newsfirstlive.com

Source link