ಬೆಂಗಳೂರು: ರಾಮಮೂರ್ತಿ ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಲಾಕ್ ಡೌನ್ ಸಮಯದಲ್ಲಿ ಕಳ್ಳತನ ಮಾಡುತ್ತಿದ್ದ 6 ಜನ ಆರೋಪಿಗಳನ್ನ ಬಂಧಿಸಿದ್ದಾರೆ.

ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದ ನೇಪಾಳ ಮೂಲದ ಆರೋಪಿಗಳಾದ ರಾಜೇಶ್, ಸಚಿನ್ ಕುಮಾರ್, ಮುಖೇಶ್ ಖಡ್ಕಾ , ಕರಣ್ ಕಡಕ್, ರಾಜು ಸಿಂಗ್, ಎಗ್ಗಿ ರಾಜ್ ಖಡಕ್ ಬಂಧಿತ ಆರೋಪಿಗಳು. ಬಂಧಿತರಿಂದ ಸುಮಾರು 17 ಲಕ್ಷ ಬೆಲೆ ಬಾಳುವ 300 ಗ್ರಾಂ ಚಿನ್ನ ಮತ್ತು 200 ಗ್ರಾಂ ತೂಕದ ಬೆಳ್ಳಿ ಆಭರಣಗಳನ್ನ ವಶಕ್ಕೆ ಪಡೆಯಲಾಗಿದೆ.

ರಾಮಮೂರ್ತಿ ನಗರ ಠಾಣೆ ವ್ಯಾಪ್ತಿಯಲ್ಲಿ 5 ಕಡೆ ಕಳ್ಳತನ ಮಾಡಿದ್ದ ಆರೋಪಿಗಳು.. ರಾಜರಾಜೇಶ್ವರಿನಗರ ಪೊಲೀಸ್ ವ್ಯಾಪ್ತಿಯಲ್ಲಿ 1 ಕಡೆ ತಮ್ಮ ಕೈಚಳಕ ತೋರಿಸಿದ್ದರು. ಅಪಾರ್ಟ್ಮೆಂಟ್ ಗಳಲ್ಲಿ ಬೆಳಗ್ಗೆ ಸೆಕ್ಯೂರಿಟಿ ಕೆಲಸ ರಾತ್ರಿ ವೇಳೆಯಲ್ಲಿ ಕಳ್ಳತನ ಮಾಡ್ತಿದ್ದರು ಎನ್ನಲಾಗಿದೆ. ಕೆಲಸಕ್ಕೆ ಹೋಗುವ ಮತ್ತು ಬರುವ ಸಮಯದಲ್ಲಿ ಕಳ್ಳತನಕ್ಕೆ ಸ್ಕೆಚ್ ಹಾಕಿ ಲಾಕ್ ಅಗಿದ್ದ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದರು ಎನ್ನಲಾಗಿದೆ.

The post ಬೆಳಗ್ಗೆ ಸೆಕ್ಯೂರಿಟಿ ಕೆಲಸ.. ರಾತ್ರಿ ಕಳ್ಳತನ: ಸಿಕ್ಕಿಬಿದ್ರು ಖತರ್ನಾಕ್ ಕಳ್ಳರು appeared first on News First Kannada.

Source: newsfirstlive.com

Source link