ಬೆಳಿಗ್ಗೆ ಮಗ, ಸಂಜೆ ತಾಯಿ ಸಾವು

ಕೊಪ್ಪಳ: ಅನಾರೋಗ್ಯಕ್ಕೀಡಾಗಿ ಸಾವನ್ನಪ್ಪಿದ ಮಗನ ಅಂತ್ಯಕ್ರಿಯೆ ಮುಗಿಸಿ ಬರುವ ಹೊತ್ತಿಗೆ ತಾಯಿಯೂ ಕೂಡ ಹೃದಯಾಘಾತವಾಗಿ ಸಾವನ್ನಪಿದ ಹೃದಯವಿದ್ರಾವಕ ಘಟನೆ ಜಿಲ್ಲೆಯ ಹಿರೇಸಿಂದೋಗಿಯಲ್ಲಿ ಸಂಭವಿಸಿದೆ.

ದಯಾನಂದ(50), ತಾಯಿ ಶೀಲಮ್ಮ (75)ಸಾವನ್ನಪಿದ್ದ ದುರ್ದೈವಿಗಳು. ಮೃತ ಮಗ ದಯಾನಂದ ಇತ್ತೀಚಿಗೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದರು. ಮಗನ ಶವ ಸಂಸ್ಕಾರ ಮುಗಿಸಿ ತಾಯಿ ಶೀಲಮ್ಮ ಮನೆಗೆ ವಾಪಾಸಾಗಿದ್ದರು. ಕೆಲ ಹೊತ್ತಿನ ಬಳಿಕ ಹೃದಯಾಘಾತ ಸಂಭವಿಸಿ ಕಾಲನ ಕರೆಗೆ ಓಗೊಟ್ಟು ಮಗನ ಜೊತೆ ಹೆಜ್ಜೆ ಹಾಕಿದ್ದಾರೆ. ಆ ಮೂಲಕ ಸಾವಿನಲ್ಲೂ ತಾಯಿ ಮಗ ಒಂದಾಗಿದ್ದಾರೆ. ಇನ್ನು ಇವರ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನು ಓದಿ:ಇಂಧನ ಕೊರತೆಯಿಂದ ಪವರ್​ ಸ್ಟೇಷನ್ಸ್ ಬಂದ್.. ಸಂಪೂರ್ಣ ಕತ್ತಲಲ್ಲಿ ಮುಳುಗಿದ ಲೆಬನಾನ್

News First Live Kannada

Leave a comment

Your email address will not be published. Required fields are marked *