ಬೆಳ್ಳಂದೂರು ಜಮೀನು ಡಿನೋಟಿಫಿಕೇಷನ್ ಕೇಸ್: ನನಗೆ ವಯಸ್ಸಾಯ್ತು, ಆರೋಗ್ಯವೂ ಸರಿಯಿಲ್ಲ ಎಂದು ವಿಚಾರಣೆಗೆ ಹಾಜರಾಗಲು ವಿನಾಯಿತಿ ಕೇಳಿದ ಬಿ.ಎಸ್. ಯಡಿಯೂರಪ್ಪ | Bellandur Land denotification case BS Yediyurappa appeals exemption from attendance due to illness


ಬೆಳ್ಳಂದೂರು ಜಮೀನು ಡಿನೋಟಿಫಿಕೇಷನ್ ಕೇಸ್: ನನಗೆ ವಯಸ್ಸಾಯ್ತು, ಆರೋಗ್ಯವೂ ಸರಿಯಿಲ್ಲ ಎಂದು ವಿಚಾರಣೆಗೆ ಹಾಜರಾಗಲು ವಿನಾಯಿತಿ ಕೇಳಿದ ಬಿ.ಎಸ್. ಯಡಿಯೂರಪ್ಪ

ಬಿ ಎಸ್ ಯಡಿಯೂರಪ್ಪ

ಬಿ.ಎಸ್‌. ಯಡಿಯೂರಪ್ಪ ಕೆಮ್ಮು, ನೆಗಡಿ ಜ್ವರದಿಂದ ಬಳಲುತ್ತಿದ್ದಾರೆಂದು ಅರ್ಜಿ ಸಲ್ಲಿಸಿದ್ದಾರೆ. ಯಡಿಯೂರಪ್ಪಗೆ 79 ವರ್ಷ ಆಗಿದೆ, ಡಯಾಬಿಟಿಸ್ ಇದೆ. ಬೈಲಾಟರಲ್ ನ್ಯುಮೊನೈಟಿಸ್‌ನಿಂದಾಗ ವೈದ್ಯರ ಆರೈಕೆಯಲ್ಲಿದ್ದಾರೆ. ವೈದ್ಯರು ಮುಂದಿನ 10 ದಿನ ಬೆಡ್ ರೆಸ್ಟ್ ಗೆ ಸೂಚಿಸಿದ್ದಾರೆ. ಹೀಗಾಗಿ ಹಾಜರಾತಿಯಿಂದ ವಿನಾಯಿತಿ ನೀಡಲು ಬಿಎಸ್ವೈ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ.

ಬೆಂಗಳೂರು: ಬೆಳ್ಳಂದೂರು ಬಳಿಯ ಜಮೀನು ಡಿನೋಟಿಫಿಕೇಷನ್ ಕೇಸ್ಗೆ ಸಂಬಂಧಿಸಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ(BS Yediyurappa) ಸಮನ್ಸ್ ಹಿನ್ನೆಲೆ ಅನಾರೋಗ್ಯ ಕಾರಣಕ್ಕೆ ಹಾಜರಾತಿಯಿಂದ‌ ವಿನಾಯಿತಿ ನೀಡುವಂತೆ ಬಿಎಸ್ವೈ ಮನವಿ ಸಲ್ಲಿಸಿದ್ದಾರೆ.

ಬಿ.ಎಸ್‌. ಯಡಿಯೂರಪ್ಪ ಕೆಮ್ಮು, ನೆಗಡಿ ಜ್ವರದಿಂದ ಬಳಲುತ್ತಿದ್ದಾರೆಂದು ಅರ್ಜಿ ಸಲ್ಲಿಸಿದ್ದಾರೆ. ಯಡಿಯೂರಪ್ಪಗೆ 79 ವರ್ಷ ಆಗಿದೆ, ಡಯಾಬಿಟಿಸ್ ಇದೆ. ಬೈಲಾಟರಲ್ ನ್ಯುಮೊನೈಟಿಸ್‌ನಿಂದಾಗ ವೈದ್ಯರ ಆರೈಕೆಯಲ್ಲಿದ್ದಾರೆ. ವೈದ್ಯರು ಮುಂದಿನ 10 ದಿನ ಬೆಡ್ ರೆಸ್ಟ್ ಗೆ ಸೂಚಿಸಿದ್ದಾರೆ. ಹೀಗಾಗಿ ಹಾಜರಾತಿಯಿಂದ ವಿನಾಯಿತಿ ನೀಡಲು ಬಿಎಸ್ವೈ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಇಂದು ವಿನಾಯಿತಿ ನೀಡಿ ಜೂ.17ಕ್ಕೆ ಹಾಜರಾಗಲು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸೂಚನೆ ನೀಡಿದೆ. ವಾಸುದೇವರೆಡ್ಡಿ ಎಂಬುವರು ಖಾಸಗಿ ದೂರು ದಾಖಲಿಸಿದ್ದರು. 2000-01 ರಲ್ಲಿ ಐಟಿ ಪಾರ್ಕ್‌ಗೆಂದು ಕೆಐಎಡಿಬಿ ಭೂಸ್ವಾಧೀನ ಪ್ರಕರಣದಲ್ಲಿ, ಬೆಳ್ಳಂದೂರು, ದೇವರಬೀಸನಹಳ್ಳಿಯಲ್ಲಿ ಭೂಸ್ವಾಧೀನ ಕೇಸ್ ಬಗ್ಗೆ ದೂರು ಸಲ್ಲಿಸಲಾಗಿತ್ತು.

TV9 Kannada


Leave a Reply

Your email address will not be published. Required fields are marked *