ಬೆಂಗಳೂರು: ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಇಂದು ದಿಢೀರನೆ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ತಮ್ಮ ಆಪ್ತರೊಂದಿಗೆ ಬೆಳಗ್ಗೆ 5:30ರ ವಿಮಾನದಲ್ಲಿ ವಿಜಯೇಂದ್ರ ದೆಹಲಿಗೆ ಹೋಗಿದ್ದಾರೆ ಅಂತ ತಿಳಿದುಬಂದಿದೆ . ಅವರ ಈ ದೆಹಲಿ ಭೇಟಿ ತೀವ್ರ ಕುತೂಹಲ ಕೆರಳಿಸಿದೆ.

ಇತ್ತೀಚೆಗಷ್ಟೇ ಸಚಿವ ಸಿ.ಪಿ ಯೋಗೇಶ್ವರ್​ ದೆಹಲಿಗೆ ಹೋಗಿ ಬಂದ ಬೆನ್ನಲ್ಲೇ ಸಿಎಂ ಬದಲಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿತ್ತು. ಇದು ಕೆಲ ದಿನಗಳ ಕಾಲ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೂ ಗ್ರಾಸವಾಗಿತ್ತು.

 

The post ಬೆಳ್ಳಂಬೆಳಗ್ಗೆ ದಿಢೀರ್ ದೆಹಲಿಗೆ ಹೊರಟ ಬಿ.ವೈ ವಿಜಯೇಂದ್ರ appeared first on News First Kannada.

Source: newsfirstlive.com

Source link