ಬೆಂಗಳೂರು: ನಗರದಲ್ಲಿ ಚಿರತೆಗಳು ಕರುಗಳ ಮೇಲೆ ದಾಳಿ ನಡೆಸಿದ್ದು, ಇದನ್ನ ಕಂಡು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಬೆಂಗಳೂರಿನ ತಾವರೆಕೆರೆ ಹೋಬಳಿಯ ದೊಡ್ಡೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಕಳೆದ ರಾತ್ರಿ ಎರಡು‌ ಚಿರತೆಗಳು ಗ್ರಾಮಕ್ಕೆ ಬಂದಿದ್ದು, ಬಸವರಾಜ್ ಎಂಬುವವರಿಗೆ ಸೇರಿದ ಎರಡು ಕರುಗಳನ್ನ ಕೊಂದುಹಾಕಿವೆ. ಈ ಘಟನೆಯಿಂದ ಗ್ರಾಮದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.

ಈ ಬಗ್ಗೆ ಮಾಹಿತಿ ನೀಡಲು ಅರಣ್ಯ ‌ಇಲಾಖೆ ಸಿಬ್ಬಂದಿಗೆ ಕಾಲ್ ಮಾಡಿದ್ರೆ, ಸಿಎಂ ಪ್ರೋಗ್ರಾಂ ಇದೆ.. ಸ್ಥಳಕ್ಕೆ ಬರೋಕೆ ಅಗಲ್ಲ‌ ಅಂತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸದ್ಯ ಚಿರತೆ ದಾಳಿಯಿಂದ ದೊಡ್ಡೇರಿ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.

The post ಬೆಳ್ಳಂಬೆಳಗ್ಗೆ ಬೆಂಗಳೂರು ನಿವಾಸಿಗಳಿಗೆ ಶಾಕ್.. 2 ಕರುಗಳನ್ನು‌ ತಿಂದು ಹೋದ ಚಿರತೆಗಳು appeared first on News First Kannada.

Source: newsfirstlive.com

Source link