ಬೆಳ್ಳಂಬೆಳಗ್ಗೆ ಸಿದ್ದರಾಮಯ್ಯ, ಡಿಕೆಎಸ್​ ನಿವಾಸಕ್ಕೆ ಕನ್ನಡ ಪರ ಸಂಘಟನೆಗಳು ಮುತ್ತಿಗೆ..!


ಬೆಂಗಳೂರು: ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮನೆಗೆ ಕನ್ನಡ ಪರ ಸಂಘಟನೆಗಳು ಮುತ್ತಿಗೆ ಹಾಕಿವೆ.

ಗೋವಾ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮಹಾದಾಯಿ ಯೋಜನೆ ಮೂಲಕ ಗೋವಾಗೆ ನೀರು ಹರಿಸುವ ಪ್ರಸ್ತಾಪ ಇದೆ. ಗೋವಾದ ಜನರಿಗೆ ಕಾಂಗ್ರೆಸ್ ಈ ಭರವಸೆಯನ್ನ ನೀಡಿದೆ. ಇದಕ್ಕೆ ನಮ್ಮ ರಾಜ್ಯದ ಕಾಂಗ್ರೆಸ್​ ನಾಯಕರು ವಿರೋಧ ವ್ಯಕ್ತಪಡಿಸಿಲ್ಲ, ಬದಲಾಗಿ ಅಲ್ಲಿಗೆ ಹೋಗಿ, ಕಾಂಗ್ರೆಸ್​ ಪರ ಪ್ರಚಾರ ಮಾಡಿ ಬಂದಿದ್ದಾರೆ ಎಂದು ಆರೋಪಿಸಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಮುತ್ತಿಗೆ ಹಾಕಿದ್ದಾರೆ.

ಕನ್ನಡಪರ ಸಂಘಟನೆಯ ರವಿಶೆಟ್ಟಿ ಮಾತನಾಡಿ.. ಇವತ್ತು ಕಾಂಗ್ರೆಸ್ ಪಕ್ಷ ಇಬ್ಬಗೆ ನೀತಿ ಪಾಲಿಸುತ್ತಿದೆ. ಮಹಾರಾಷ್ಟ್ರ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಕರ್ನಾಟಕಕ್ಕೆ ಹನಿ ನೀರು ಬಿಡಲ್ಲ ಎಂದು ಉಲ್ಲೇಖ ಮಾಡಿದೆ. ಇಲ್ಲಿ ಸಿದ್ದರಾಮಯ್ಯ, ಡಿಕೆಎಸ್​ ನೀರಿಗಾಗಿ ಹೈಟೆಕ್ ಮೇಕೆದಾಟು ಪಾದಯಾತ್ರೆ ಮಾಡ್ತಾರೆ. ಗೋವಾ, ಕರ್ನಾಟಕದಲ್ಲಿ ಬೇರೆ ಬೇರೆ ಕಾಂಗ್ರೆಸಾ? ವೋಟಿಗಾಗಿ ಬೇರೆ, ಬೇರೆ ನೀತಿ ಅನುಸರಿತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೇಕೆದಾಟು, ಮಹಾದಾಯಿ ವಿಚಾರದಲ್ಲಿ ಮಾತನಾಡುವ ನೈತಿಕತೆ ಕಳೆದುಕೊಂಡಿದ್ದೀರಿ. ನೀವು ಯಾವ್ ಕಾರ್ಯಕ್ರಮಕ್ಕೆ ಹೋದರೂ ಕಪ್ಪುಬಟ್ಟೆ ಧರಿಸಿ ಧರಣಿ ಮುಂದುವರಿಸುತ್ತೇವೆ ಎಂದು ಎಚ್ಚರಿಕೆಯನ್ನ ನೀಡಿದ್ದಾರೆ.

News First Live Kannada


Leave a Reply

Your email address will not be published.