ಧಾರವಾಡ: ಪಾಲಿಕೆ ಚುನಾವಣೆ ಹಿನ್ನೆಲೆ ಬೆಳ್ಳಂ ಬೆಳಗ್ಗೆ ನಗರದ ರೌಡಿಗಳಿಗೆ ಹುಬ್ಬಳ್ಳಿ-ಧಾರವಾಡ ಪೊಲೀಸರು ಶಾಕ್​ ನೀಡಿದ್ದಾರೆ.

ಅಪರಾಧ ಕೃತ್ಯಗಳನ್ನು ಮತ್ತು ರೌಡಿ ಚಟುವಟಿಕೆಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿರುವ ನಗರ ಪೊಲೀಸರು ಇಂದು ಮುಂಜಾನೆ ನಗರದ 1,300 ಕ್ಕೂ ಹೆಚ್ಚು ರೌಡಿಗಳ ಮನೆ ಮೇಲೆ ದಾಳಿ ಮಾಡಿದ್ದಾರೆ.

ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ರೌಡಿ ಶೀಟರ್​​ಗಳು ಚುನಾವಣೆಗೆ ಸ್ಪರ್ಧೆ ಮಾಡಲು ತಯಾರಿ ಬೆನ್ನಲ್ಲೇ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಲಾಭುರಾಮ್ ಸೂಚನೆಯಂತೆ ದಾಳಿ ಮಾಡಿದ್ದಾರೆ. ಕೊಲೆ, ಗ್ಯಾಂಬ್ಲಿಂಗ್ ಸೇರಿದಂತೆ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ ರೌಡಿಗಳನ್ನು ಗಡಿಪಾರು ಮಾಡಲಿದ್ದಾರೆ ಎಂದು ಹೇಳಲಾಗ್ತಿದೆ.

ದಾಳಿ ವೇಳೆ 5ಕ್ಕೂ ಹೆಚ್ಚು ರೌಡಿಗಳು 30ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿರುವದು ಕಂಡು ಬಂದಿದ್ದು, ಪಾಲಿಕೆ ಚುನಾವಣೆಗೂ ರೌಡಿಗಳು ತಯಾರಿ ಮಾಡಿಕೊಳ್ತಿದ್ದರು ಎನ್ನಲಾಗಿದೆ.

The post ಬೆಳ್ಳಂಬೆಳಗ್ಗೆ ಹುಬ್ಬಳ್ಳಿ, ಧಾರವಾಡ ರೌಡಿಗಳಿಗೆ ಶಾಕ್ ಕೊಟ್ಟ ಪೊಲೀಸ್​​​ -ಗಡಿಪಾರು ಸಾಧ್ಯತೆ appeared first on News First Kannada.

Source: newsfirstlive.com

Source link