ಬೆಳ್ಳಂ ಬೆಳಿಗ್ಗೆ ಲಾಡ್ಜ್​ಗಳ ಮುಂದೆ ಕ್ಯೂ ನಿಂತ ಕಾಲೇಜು ಸ್ಟೂಡೆಂಟ್ಸ್​-ಕಾರಣವೇನು..?


ಬಳ್ಳಾರಿ: ಜಿಲ್ಲೆಯಲ್ಲಿ ಕೋವಿಡ್​ ಉಲ್ಬಣ ಹಿನ್ನೆಲೆ ಜಿಲ್ಲಾಧಿಕಾರಿ ದಿಢೀರ್​ ಕಾಲೇಜು ಹಾಸ್ಟೆಲ್​ಗಳ ಬಂದ್​ ಆದೇಶ ಪರಿಣಾಮ ಸಾಕಷ್ಟು ವಿದ್ಯಾರ್ಥಿಗಳು ನಗರದ ಲಾಡ್ಜ್​ಗಳ ಮೊರೆ ಹೋಗಿದ್ದಾರೆ.

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್​ ಅಬ್ಬರ ಹೆಚ್ಚಾಗುತ್ತಿದೆ. ಇದರ ಹಿನ್ನೆಲೆ ಜಿಲ್ಲಾಧಿಕಾರಿ ಎಲ್ಲ ಕಾಲೇಜಿನ ಹಾಸ್ಟೆಲ್​ಗಳನ್ನು ಬಂದ್​​ ಮಾಡುವಂತೆ ಆದೇಶ ನೀಡಿದ್ದಾರೆ. ಆದೇಶದ ಬೆನ್ನಲ್ಲೇ ಸಿಬ್ಬಂದಿ ವಿದ್ಯಾರ್ಥಿಗಳನ್ನು ಹೊರಹಾಕಿದ್ದು ದಾರಿಕಾಣದ ವಿದ್ಯಾರ್ಥಿಗಳು ವಾಸ್ತವ್ಯಕ್ಕೆ ಲಾಡ್ಜ್​ಗಳ ಮೊರೆ ಹೋಗಿದ್ದಾರೆ. ಇಲ್ಲಿ ಕೂಡ ಸಾಕಷ್ಟು ಜನ ಬಂದಿದ್ದರಿಂದ ವಿದ್ಯಾರ್ಥಿಗಳು ಪಾಳಿಯಲ್ಲಿ ನಿಂತು ಕಾಯ್ದಿದ್ದಾರೆ.

ಇನ್ನು ಘಟನೆ ಕುರಿತು ಆರೋಗ್ಯ ಸಚಿವ ಕೆ.ಸುಧಾಕರ್​ ಪ್ರತಿಕ್ರಿಯಿಸಿದ್ದು ಮುಖ್ಯಮಂತ್ರಿಗಳು ಆಯಾ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಈ ಕ್ರಮ ಕೈಗೊಳ್ಳಲು ಅಧಿಕಾರ ನೀಡಿದ್ದಾರೆ. ಬಹುಶಃ ವಿದ್ಯಾರ್ಥಿಗಳು ಇರುವ ವಸತಿ ಶಾಲೆಯಲ್ಲಿ ಹೆಚ್ಚಿನ ಸೊಂಕಿತರು ಕಂಡು ಬಂದಿರಬಹುದು. ಹೀಗಾಗಿ ಈ ಕ್ರಮ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ತರಿಸಿಕೊಂಡು ವಿಚಾರಿಸುತ್ತೇನೆ ಎಂದಿದ್ದಾರೆ.

News First Live Kannada


Leave a Reply

Your email address will not be published. Required fields are marked *