ಬೆಸ್ಟ್​ ಪ್ಲೇಯರ್​ನ ಸಾಮರ್ಥ್ಯ ಕಡೆಗಣಿಸಿದ್ರಾ ಕೊಹ್ಲಿ..? ಅಶ್ವಿನ್​​ರಲ್ಲಿ ರೋಹಿತ್ ಕಂಡಿದ್ದೇನು..?

4 ವರ್ಷಗಳ ಬಳಿಕ ವೈಟ್​ಬಾಲ್​​ ಕ್ರಿಕೆಟ್​ಗೆ ಕಮ್​​ಬ್ಯಾಕ್ ಮಾಡಿರುವ ಅಶ್ವಿನ್, ತಮ್ಮ ಅತ್ಯುತ್ತಮ ಪ್ರದರ್ಶನದಿಂದ ತಾನೊಬ್ಬ ಕ್ಲಾಸ್ ಪ್ಲೇಯರ್ ಎನಿಸಿದ್ದಾರೆ. ಆದ್ರೆ ಈ ಟೀಮ್ ಪ್ಲೇಯರ್​​ನನ್ನ ವಿರಾಟ್​ ಕೊಹ್ಲಿಯೆಂಬ ಶ್ರೇಷ್ಠ ನಾಯಕ, ಅರಿಯುವಲ್ಲಿ ವಿಫಲರಾಗಿದ್ದರಾ..? ಅಥವಾ ತಮ್ಮ ವೈಯಕ್ತಿಕ ವಿಚಾರದಿಂದ ಅಶ್ವಿನ್​ರನ್ನ ಕಡೆಗಣಿಸಿದ್ದರಾ..?

ಅಶ್ವಿನ್ ಯಾವಾಗಲೂ ಕ್ಯಾಪ್ಟನ್​ನ ಅಟ್ಯಾಕಿಂಗ್ ಆಪ್ಷನ್ ಆಗಿದ್ದಾರೆ. ನೀವು ಅಶ್ವಿನ್​ಗೆ ತಂಡದಲ್ಲಿ ಅವಕಾಶ ನೀಡಿದಾಗಲೆಲ್ಲ, ಮಿಡಲ್ ಓವರ್​ಗಳಲ್ಲಿ ವಿಕೆಟ್ ತೆಗೆದಿದ್ದಾರೆ. ನಾವು ಅಶ್ವಿನ್ ಮಧ್ಯಮ ಓವರ್​ಗಳಲ್ಲಿ ಎಷ್ಟು ಮುಖ್ಯ ಎಂಬುವುದು ಅರ್ಥಮಾಡಿಕೊಂಡಿದ್ದೇವೆ.

ರೋಹಿತ್ ಶರ್ಮಾ, ​ನಾಯಕ

ಕೇಳಿದ್ರಲ್ಲ, ರೋಹಿತ್ ಶರ್ಮಾರ ಈ ಒಂದು ಮಾತು. ಸ್ವತಃ ರೋಹಿತ್, ನಾಯಕನ ಆಯ್ಕೆ ಅಶ್ವಿನ್ ಅಂತಿದ್ದಾರೆ. ಆದ್ರೆ ಈ ಟೀಮ್​ ಪ್ಲೇಯರ್​ ವಿಚಾರದಲ್ಲಿ, 2 ತಿಂಗಳ ಹಿಂದೆ ನಡೆದಿದ್ದೆ ಬೇರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಯಲ್ಲಿ​ ಬೆಂಚ್​ಗೆ ಸಿಮೀತವಾಗಿದ್ದರು. ಕೊಹ್ಲಿಯ ಈ ನಡೆಗೆ ಸ್ವತಃ ಮಾಜಿ ಕ್ರಿಕೆಟಿಗರೇ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ಕೊಹ್ಲಿ, ತಂಡಕ್ಕೆ ಫಿಟ್ ಆಗೋ ಆಟಗಾರರಿಗೆ ಮಾತ್ರವೇ ಚಾನ್ಸ್​ ನೀಡಲಾಗುತ್ತೆ ಎಂದಿದ್ದರು.

ಆದ್ರೀಗ ಟೀಮ್ ಇಂಡಿಯಾದ ಟಿ20 ನಾಯಕ ರೋಹಿತ್ ಶರ್ಮಾ, ಆರ್​.ಅಶ್ವಿನ್ ಬೇಕು ಅಂತಾರೆ..! ಆದ್ರೆ ಏಕದಿನ ಹಾಗೂ ಟೆಸ್ಟ್​ ತಂಡದ ನಾಯಕ ವಿರಾಟ್, ಫಿಂಗರ್ ಸ್ಪಿನ್ನರ್​​​​​​​ ಬಗ್ಗೆ ಅಷ್ಟೋಂದು ಆಸಕ್ತಿ ತೋರುತ್ತಿಲ್ಲ. ಇಬ್ಬರ ನಾಯಕರು, ವಿಭಿನ್ನ ನಿಲುವುಗಳನ್ನ ಹೊಂದಿದ್ದಾರೆ. ಒಬ್ಬರು ಅಶ್ವಿನ್​ರನ್ನ ಬ್ಯಾಕ್ ಮಾಡುತ್ತಿದ್ದರೆ, ಮತ್ತೊಬ್ಬರು ಅಶ್ವಿನ್​​ರನ್ನ ಡ್ರಾಪ್ ಮಾಡೋದ್ರಲ್ಲೇ ಬ್ಯುಸಿಯಾಗಿದ್ದರು.

ಅದ್ಬುತ ಲಯದಲ್ಲಿದ್ದ ಅಶ್ವಿನ್​​ ಬೆಂಚ್ ಕಾಯಿಸಿದ್ದೇಕೆ..?​​
ಇಂಥದ್ದೊಂದು ಪ್ರಶ್ನೆಗೆ ಕಾರಣ, ವಿರಾಟ್​ ಕೊಹ್ಲಿ ನಿಲುವು.. ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಅಶ್ವಿನ್, ವಿಕೆಟ್ ಟೇಕರ್​ ಅನ್ನೋದನ್ನ ಫ್ರೂವ್ ಮಾಡಿದ್ದರು. ಅಷ್ಟೇ ಅಲ್ಲ.! ಸರಣಿ ಆರಂಭಕ್ಕೂ ಮುನ್ನ ಕೌಂಟಿಯಲ್ಲಿ ಸರ್ರೆ ಪರ ಆಡಿದ್ದ ಅಶ್ವಿನ್, ಆ ಪಂದ್ಯದಲ್ಲೂ ಒಟ್ಟು 6 ವಿಕೆಟ್ ಉರುಳಿಸಿ ಮ್ಯಾಚ್​ ವಿನ್ನರ್ ಎನಿಸಿದ್ದರು. ಇದಾದ ಬಳಿಕ ಟಿ-ಟ್ವೆಂಟಿ ವಿಶ್ವಕಪ್​​ನಲ್ಲೂ ಅಶ್ವಿನ್​, ಕೊಹ್ಲಿಯ ಅವಕೃಪೆಗೆ ಒಳಗಾಗಿದ್ದರು. ಆದ್ರೀಗ ಕಿವೀಸ್ ಟಿ20 ಸರಣಿಯ ಪ್ರದರ್ಶನದೊಂದಿಗೆ ಅಶ್ವಿನ್​, ತಾನೇಕೆ ತಂಡದಲ್ಲಿ ಇರಬೇಕೆಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಅಶ್ವಿನ್ ತಂಡಕ್ಕೆ ಯಾಕೆ ಬೇಕು..?

ಅಶ್ವಿನ್ ಮೂರು ಫಾರ್ಮೆಟ್​ನಲ್ಲೂ ವಿಕೆಟ್​ ತೆಗೆಯಬಲ್ಲ ಸ್ಪಿನ್ನರ್ ಆಗಿದ್ದಾರೆ. ಎಲ್ಲಾ ಫಾರ್ಮೆಟ್​​ ಆಡಿರುವ ಅಶ್ವಿನ್ ಅನುಭವ, ತಂಡಕ್ಕೆ ನೆರವಾಗಲಿದೆ. ಜೊತೆಗೆ ಯುವ ಸ್ಪಿನ್ನರ್​ಗಳಿಗೆ ಆನ್​ಫೀಲ್ಡ್​ನಲ್ಲಿ ಮಾರ್ಗದರ್ಶಕರಾಗಿ ಸಲಹೆ ನೀಡಬಲ್ಲರು. ಇದಕ್ಕೆಲ್ಲಾ ಮಿಗಿಲಾಗಿ ತಂಡದ ನಾಯಕನಿಗೆ ಅಶ್ವಿನ್ ಉಪಸ್ಥಿತಿ, ಮತ್ತಷ್ಟು ಉಪಯುಕ್ತವಾಗಬಹುದು.

ಇಷ್ಟೆಲ್ಲಾ ಕ್ವಾಲಿಟಿ ಹೊಂದಿರುವ ಅಶ್ವಿನ್​ರನ್ನ ಕೊಹ್ಲಿ, ಸರಿಯಾಗಿ ಬಳಸಿಕೊಳ್ಳುವುದರಲ್ಲಿ ವಿಫಲರಾಗಿದ್ದಾರೆ. ಆದ್ರೀಗ ಇದೇ ಅನುಭವಿ ಟಿ-ಟ್ವೆಂಟಿ ಫಾರ್ಮೆಟ್​ಗೆ ಕಮ್​ಬ್ಯಾಕ್ ಮಾಡಿ ತೋರುತ್ತಿರುವ ಪ್ರದರ್ಶನ, ವಿರಾಟ್​ ಕೊಹ್ಲಿ ಹಾಗೂ ಆತನ ನಾಯಕತ್ವದ ನಡೆಯನ್ನೇ ಪ್ರಶ್ನೆ ಮಾಡುವಂತೆ ಮಾಡುತ್ತಿದೆ.

The post ಬೆಸ್ಟ್​ ಪ್ಲೇಯರ್​ನ ಸಾಮರ್ಥ್ಯ ಕಡೆಗಣಿಸಿದ್ರಾ ಕೊಹ್ಲಿ..? ಅಶ್ವಿನ್​​ರಲ್ಲಿ ರೋಹಿತ್ ಕಂಡಿದ್ದೇನು..? appeared first on News First Kannada.

News First Live Kannada

Leave a comment

Your email address will not be published. Required fields are marked *