ಧಾರವಾಡ: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕು ವ್ಯಾಪಕವಾಗ್ತಿದೆ. ಆದ್ರೆ ಕಲವು ಜನರು ಎಷ್ಟೇ ಹೇಳಿದ್ರು ನಿಯಮಗಳ ಪಾಲನೆ ಮಾಡದೇ, ಸುಖಾಸುಮ್ಮನೆ ರಸ್ತೆಗಳಲ್ಲಿ ಓಡಾಡುತ್ತಾ ನಿರ್ಲಕ್ಷ್ಯ ವಹಿಸಿರೋದು ಕಂಡುಬರ್ತಿದೆ. ಹೀಗಾಗಿ ಧಾರವಾಡ ಜಿಲ್ಲಾಡಳಿತ, ಬೇಕಾಬಿಟ್ಟಿ ಓಡಾಡುವವರಿಗೆ ಶಾಕ್ ಕೊಟ್ಟಿದೆ.

ಹೌದು. ಬೈಕ್, ಕಾರ್​ಗಳನ್ನ ಸೀಜ್ ಮಾಡಿದ್ರು ಜನರು ಓಡಾಡುತ್ತಿರೋ ಹಿನ್ನೆಲೆ ಕಳೆದ ವರ್ಷ ಮಾಡಿದ್ದ ಪ್ಲಾನ್ ಮತ್ತೆ ವಾಸ್ತವಕ್ಕೆ ತರಲಾಗಿದೆ. ಕಳೆದ ಬಾರಿಯಂತೆ ಜಿಲ್ಲಾಡಳಿತ, ಹೆಚ್ಚು ಜನಸಂದಣಿ ಇರುವ ಪ್ರಮುಖ ಏರಿಯಾಗಳನ್ನ ಸೀಲ್​​ಡೌನ್ ಮಾಡಿದೆ. ನಗರದ 10ಕ್ಕೂ ಹೆಚ್ಚು ಒಳರಸ್ತೆಗಳು ಸೀಲ್​ಡೌನ್​​ ಆಗಿವೆ.

ತೇಜಸ್ವಿ ನಗರ, ಸರಸ್ವತಪುರ, ಶಿವಾನಂದ ನಗರ ರೈಲ್ವೆ ನಿಲ್ದಾಣ ಸೇರಿ ಹಲವು ರಸ್ತೆಗಳ ಮಾರ್ಗಗಳನ್ನ ಕ್ಲೋಸ್ ಮಾಡಲಾಗಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಈ ಪ್ಲಾನ್ ನಿಂದಾಗಿ ಜನರ ಓಡಾಟ ತಪ್ಪುತ್ತಾ ಅಂತ ಕಾದುನೋಡಬೇಕು.

 

The post ಬೇಕಾಬಿಟ್ಟಿ ಓಡಾಡುವವರಿಗೆ ಶಾಕ್ ಕೊಟ್ಟ ಧಾರವಾಡ ಜಿಲ್ಲಾಡಳಿತ appeared first on News First Kannada.

Source: newsfirstlive.com

Source link