ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಮನಗಂಡು ತರೀಕೆರೆ ಪುರಸಭೆ ಮತ್ತು ಪೊಲೀಸರು ಕಾರ್ಯಾಚರಣೆಗಿಳಿದಿದ್ದು, ಬೇಕಾಬಿಟ್ಟಿ ರಸ್ತೆಗಿಳಿಯುವವರನ್ನು ಹಿಡಿದು ಕ್ವಾರಂಟೈನ್‍ಗೆ ಒಳಪಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ನಿಯಂತ್ರಣಕ್ಕೆ ಬರದೆ ಇರುವ ನಿಟ್ಟಿನಲ್ಲಿ ಈಗಾಗಲೇ ಲಾಕ್‍ಡೌನ್ ಜಾರಿಯಲ್ಲಿದೆ. ಆದರೂ ಕೂಡ ಜನ ಸುಖಾಸುಮ್ಮನೆ ರಸ್ತೆಗಿಳಿಯುತ್ತಿದ್ದಾರೆ. ಇದನ್ನು ನಿಯಂತ್ರಿಸಲು ತರೀಕೆರೆ ಪಟ್ಟಣದಲ್ಲಿ ಖಡಕ್ ರೂಲ್ಸ್ ಜಾರಿ ಮಾಡಿದ್ದು, ಸುಖಾಸುಮ್ಮನೆ ರಸ್ತೆಗೆ ಬರುವವರನ್ನು ಮತ್ತು ಹೆಚ್ಚು ಓಡಾಟ ಮಾಡಿದವರನ್ನು ಹಿಡಿದು ಕ್ವಾರಂಟೈನ್ ಕೇಂದ್ರಕ್ಕೆ ಸೇರಿಸುವ ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ. ಇದಕ್ಕಾಗಿ ಪಿಪಿಇ ಕಿಟ್ ಧರಿಸಿಕೊಂಡು ಜನರನ್ನು ಹಿಡಿಯಲು ಪುರಸಭೆ ಸಿಬ್ಬಂದಿ ಸಜ್ಜಾಗಿದ್ದಾರೆ.

ತರೀಕೆರೆ ಪುರಸಭೆ ಮತ್ತು ಪೊಲೀಸರಿಂದ ಜಂಟಿ ಕಾರ್ಯಾಚರಣೆ ಆರಂಭವಾಗಿದ್ದು, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಇದರಿಂದ ಹೆದರುತ್ತಿರುವ ಜನ ಅಂಬುಲೆನ್ಸ್, ಪಿಪಿಇ ಕಿಟ್ ಧರಿಸಿರೋ ಸಿಬ್ಬಂದಿ ನೋಡಿ ಪರಾರಿಯಾಗುತ್ತಿದ್ದಾರೆ.

The post ಬೇಕಾಬಿಟ್ಟಿ ರಸ್ತೆಗಿಳಿದವರಿಗೆ ಕ್ವಾರಂಟೈನ್ ಶಿಕ್ಷೆ appeared first on Public TV.

Source: publictv.in

Source link