ಬೇಕೆಂದೇ ಕೊವಿಡ್ ಸೋಂಕು ತಗುಲಿಸಿಕೊಂಡಿದ್ದ ಜೆಕ್ ಗಣರಾಜ್ಯದ ಜಾನಪದ ಗಾಯಕಿ ಸಾವು | Deliberate Coronavirus Infected Folk Singer of Czesh Republic Hana Horka Died


ಬೇಕೆಂದೇ ಕೊವಿಡ್ ಸೋಂಕು ತಗುಲಿಸಿಕೊಂಡಿದ್ದ ಜೆಕ್ ಗಣರಾಜ್ಯದ ಜಾನಪದ ಗಾಯಕಿ ಸಾವು

ಕೊವಿಡ್​ನಿಂದ ಮೃತಪಟ್ಟ ಜಾನಪದ ಗಾಯಕ ಹನ ಹೊರ್ಕಾ

ಲಸಿಕೆ ಪಡೆಯದ ನನಗೆ ಕೊವಿಡ್ ಸೋಂಕು ತಗುಲಿದೆ, ಚೇತರಿಸಿಕೊಳ್ಳುತ್ತಿದ್ದೇನೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದ ಜೆಕ್ ಗಣರಾಜ್ಯದ ಜಾನಪದ ಗಾಯಕಿ ಹನ ಹೊರ್ಕಾ ನಿಧನರಾಗಿದ್ದಾರೆ. ತನ್ನ ತಾಯಿಯ ಕುರಿತು ಪ್ರತಿಕ್ರಿಯಿಸಿರುವ ಹನ ಹೊರ್ಕಾರ ಮಗ, ‘ನನಗೆ ಮತ್ತು ನನ್ನ ತಂದೆಗೆ ಕೊರೊನಾ ಸೋಂಕು ತಗುಲಿತ್ತು. ಕೆಲ ಸ್ಥಳಗಳಿಗೆ ಪ್ರವೇಶಿಸಲು ಚೇತರಿಕೆ ಪಾಸ್ ಸಿಗುತ್ತದೆ ಎನ್ನುವ ಕಾರಣಕ್ಕೆ ನನ್ನ ತಾಯಿ ಬೇಕೆಂದೇ ಸೋಂಕು ತಗುಲಿಸಿಕೊಂಡರು’ ಎಂದು ಹೇಳಿದ್ದಾರೆ. ಜೆಕ್ ಗಣರಾಜ್ಯದಲ್ಲಿ ಬುಧವಾರ (ಜ.19) ದಾಖಲೆ ಪ್ರಮಾಣದ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ.

ಹನ ಹೊರ್ಕಾರ ಮಗ ರೆಕ್ ಮತ್ತು ಅವನ ತಂದೆ ಲಸಿಕೆ ಪಡೆದಿದ್ದರು. ಆದರೂ ಅವರಿಗೆ ಕಳೆದ ಕ್ರಿಸ್​ಮಸ್ ವೇಳೆ ಕೊರೊನಾ ಸೋಂಕು ಬಂದಿತ್ತು. ಆದರೆ ನನ್ನ ತಾಯಿ ನಮ್ಮಿಂದ ಇರಲು ಒಪ್ಪಲಿಲ್ಲ. ಬೇಕೆಂದೇ ಕೊರೊನಾ ಸೋಂಕಿಗೆ ತೆರೆದುಕೊಂಡರು. ಜೆಕ್ ಗಣರಾಜ್ಯದಲ್ಲಿ ಕೆಫೆ, ಬಾರ್, ಸಿನಿಮಾ ಮಂದಿರಾ ಸೇರಿದಂತೆ ಹಲವು ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರದೇಶಗಳಿಗೆ ಪ್ರವೇಶ ಪಡೆಯಲು ಲಸಿಕೆ ಪಡೆದಿರುವ ಅಥವಾ ಇತ್ತೀಚೆಗೆ ಕೊರೊನಾದಿಂದ ಚೇತರಿಸಿಕೊಂಡ ವಿವರ ಅತ್ಯಗತ್ಯ.

ಜಾನಪದ ಗಾಯಕಿ ಹೊನಾ ಬರ್ಕಾ ಜೆಕ್ ಗಣರಾಜ್ಯದ ಅತಿ ಹಳೆಯ ಜಾನಪದ ಗಾಯನ ತಂಡ ಅಸೊನಾನ್ಸ್​ನ ಸದಸ್ಯೆಯಾಗಿದ್ದರು. ಒಮ್ಮೆ ಕೊವಿಡ್ ಬಂದು ಚೇತರಿಸಿಕೊಂಡರೆ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ಸುಲಭವಾಗಲಿದೆ ಎನ್ನುವ ಕಾರಣ ಸೋಂಕಿತೆಯಾಗಲು ಹೊನಾ ಬರ್ಕಾ ನಿರ್ಧರಿಸಿದರು ಎಂದು ಅವರ ಮಗನ ಹೇಳಿಕೆ ಉಲ್ಲೇಖಿಸಿ ಬಿಬಿಸಿ ಜಾಲತಾಣ ವರದಿ ಮಾಡಿದೆ.

ಯೂರೋಪಿನಲ್ಲಿ ಶೇ 65ರಷ್ಟು ಜನರಿಗೆ ಪೂರ್ಣಪ್ರಮಾಣದಲ್ಲಿ ಲಸಿಕಾಕರಣ ನಡೆದಿದೆ. ಜೆಕ್ ಗಣರಾಜ್ಯದಲ್ಲಿ ಶೇ 63ರಷ್ಟು ಜನಸಂಖ್ಯೆಗೆ ಲಸಿಕೆ ನೀಡಲಾಗಿದೆ.

TV9 Kannada


Leave a Reply

Your email address will not be published. Required fields are marked *