ಕೋಲಾರ: ಬೇಟೆಗೆ ಹೋದಾಗ ಗನ್ ಮಿಸ್​ಫೈರ್ ಆಗಿ ವ್ಯಕ್ತಿ ಸಾವನ್ನಪ್ಪಿರೋ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಸೀಗೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಶಂಕರ್ ಮೃತಪಟ್ಟ ವ್ಯಕ್ತಿ.  ಕಳೆದ ರಾತ್ರಿ ನಾಲ್ವರು ಸ್ನೇಹಿತರು ಬೇಟೆಗೆಂದು ಹೋದಾಗ ಈ ಘಟನೆ ನಡೆದಿದೆ.

ಕೋದಂಡಪ್ಪ, ಶ್ರೀನಿವಾಸ್, ಚೌಡಪ್ಪ ಹಾಗೂ ಶಂಕರ್ ಬೇಟೆಗೆ ಹೋಗಿದ್ದರು. ಈ ವೇಳೆ ಗನ್ ಲೈಸೆನ್ಸ್ ಹೊಂದಿದ್ದ ಕೋದಂಡಪ್ಪನ ಗನ್​ನಿಂದ ಮಿಸ್​ಫೈರ್ ಆಗಿ ಶಂಕರ್​ಗೆ ಗುಂಡೇಟು ತಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

The post ಬೇಟೆಗೆ ಹೋದಾಗ ಸ್ನೇಹಿತನ ಗನ್​ನಿಂದ ಮಿಸ್​​ಫೈರ್ ಆಗಿ ವ್ಯಕ್ತಿ ಸಾವು appeared first on News First Kannada.

Source: newsfirstlive.com

Source link