ಬೆಂಗಳೂರು: ಮೈಸೂರಿನ ಖಾಸಗಿ ಹೋಟೆಲ್​​ ಸಿಬ್ಬಂದಿಯ ವಿರುದ್ಧ ನಟ ದರ್ಶನ್ ಹಲ್ಲೆ ಮಾಡಿದ್ದಾರೆ ಎಂಬ ಆಡಿಯೋಗೆ ಸಂಬಂಧಿಸಿದಂತೆ ನಿನ್ನೆ ಬಿಡುಗಡೆಯಾಗಿದ್ದ ಆಡಿಯೋ ಭಾರೀ ಚರ್ಚೆಗೆ ಕಾರಣವಾಗಿತ್ತು. ಸದ್ಯ ವಿಡಿಯೋವನ್ನು ನಿರ್ದೇಶಕ ಇಂದ್ರಜಿತ್ ಲಂಕೇಶ್​ ಅವರೇ ಬೇರೆ ವ್ಯಕ್ತಿಯ ಮೂಲಕ ಆಡಿಯೋ ಬಿಡುಗಡೆ ಮಾಡಿಸಿ ನಟ ದರ್ಶನ್​​ ಮತ್ತು ಸ್ನೇಹಿತರಿಗೆ ಟಾಂಗ್​ ಕೊಟ್ಟಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿವೆ.

ಇದನ್ನೂ ಓದಿ: ಮೇರುನಟ ಅಂದ್ರೆ ರಾಜ್​ಕುಮಾರ್.. ಇವರು​ ಅಣ್ಣಾವ್ರನ್ನ ನೋಡಿ ಕಲಿಬೇಕು -ಇಂದ್ರಜಿತ್ ಲಂಕೇಶ್

ಆಡಿಯೋದಲ್ಲಿ ಸಂದೇಶ್​ ಅವರೇ ಇಂದ್ರಜಿತ್ ಅವರೊಂದಿಗೆ ಮಾತನಾಡಿದ್ದಾರೆ ಎನ್ನಲಾಗಿದ್ದು, ಈ ವೇಳೆ ನಟ ದರ್ಶನ್, ಹೋಟೆಲ್​​ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾದ ಬಳಿಕ ವಕೀಲರ ಜೊತೆ ಅಖಾಡಕ್ಕಿಳಿದಿದ್ದ ಇಂದ್ರಿಜಿತ್ ಅವರು, ಸಂದೇಶ್​ ಹಾಗೂ ದರ್ಶನ್​ ಅವರು ಈಗಲಾದರೂ ನಡೆದ ಘಟನೆ ಬಗ್ಗೆ ಒಪ್ಪಿಕೊಂಡು ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸಿ, ಕ್ಷಮೆ ಕೇಳಿ ಎಂದು ಸಲಹೆ ನೀಡಿದ್ದರು.

ಆಡಿಯೋ ವೈರಲ್​ ಬೆನ್ನಲ್ಲೇ ಬೆಂಗಳೂರಿಗೆ ಸಂದೇಶ್​ ಬಂದಿದ್ದೇಕೆ..?
ಆದರೆ ವಿಡಿಯೋ ಬಿಡುಗಡೆಯಾದ ಬಳಿಕ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದ ಸಂದೇಶ್ ನಾಗರಾಜ್ ಅವರು, ತಮ್ಮ ಮಗ ಇಂದ್ರಿಜಿತ್​ ಅವರೊಂದಿಗೆ ಮಾತನಾಡಿಯೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಆದರೆ ಸಂದೇಶ್​ ಅವರು ಇದುವರೆಗೂ ಆಡಿಯೋ ಬಗ್ಗೆ ಎಲ್ಲೂ ಪ್ರತಿಕ್ರಿಯೆ ನೀಡಿಲ್ಲ. ಇತ್ತ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ತಿದಂತೆ ಹೋಟೆಲ್ ಮಾಲೀಕ ಸಂದೇಶ್ ಅವರು ಮೈಸೂರಿನಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇಂದ್ರಜಿತ್ ಜೊತೆ ಸಂಧಾನಕ್ಕಾಗಿ ಬೆಂಗಳೂರಿಗೆ ಸಂದೇಶ್​​ ಬಂದರ ಎಂಬ ಪ್ರಶ್ನೆಯೂ ಉದ್ಭವವಾಗಿದೆ. ಸದ್ಯ ಇಂದ್ರಜಿತ್ ಅವರು ಸಂದೇಶ್ ಅವರೊಂದಿಗೆ ಮಾತುಕತೆ ಮೂಲಕ ಇತ್ಯರ್ಥ ಮಾಡಿಕೊಳ್ಳುತ್ತಾರಾ..? ಇಲ್ಲ ಕಾನೂನು ಹೋರಾಟಕ್ಕೆ ಮುಂದಾಗುತ್ತಾರಾ ಎಂಬ ಕುತೂಹಲ ಮೂಡಿದೆ.

ಇದನ್ನೂ ಓದಿ: ದರ್ಶನ್ ವಿರುದ್ಧ ಹಲ್ಲೆ ಆರೋಪ; ‘ಬಡವರೆಲ್ಲ ದಲಿತರು ಅಂತ ಹೇಳಿದ್ದೆ’ ಇಂದ್ರಜಿತ್ ‘U’ ಟರ್ನ್

ಇದನ್ನೂ ಓದಿ: ದರ್ಶನ್ ಹಲ್ಲೆ ಆರೋಪಕ್ಕೆ ಸ್ಫೋಟಕ ಟ್ವಿಸ್ಟ್; ಅನಾಮಧೇಯ-ಸಂದೇಶ್ ಮಾತಾಡಿರೋ ಆಡಿಯೋದಲ್ಲಿ ಏನಿದೆ..?

The post ಬೇರೋಬ್ಬರ ಮೂಲಕ ಆಡಿಯೋ ರಿಲೀಸ್; ದರ್ಶನ್​ & ಟೀಂಗೆ ಟಾಂಗ್ ಕೊಟ್ರಾ ಇಂದ್ರಜಿತ್? appeared first on News First Kannada.

Source: newsfirstlive.com

Source link