ಬೇಲ್ ರಾಜಕಾರಣ: ರಾಹುಲ್ ಗಾಂಧಿಯಾವರಿಗೆ ದೇಶ ಭಕ್ತಿ, ದೇಶ ಪ್ರೇಮ ಇದೆಯೇ ಎಂದು ಪ್ರಶ್ನಿಸಿದ ರವಿಕುಮಾರ್ | Karnataka politics BJP leader N Ravikumar hits out at Congress


ರಾಜ್ಯ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಜೈಲು ಮತ್ತು ಬೇಲ್ ವಿಚಾರದಲ್ಲಿ ಆರೋಪ ಪ್ರತ್ಯಾರೋಪ ಮಾಡುವುದರಲ್ಲಿ ತೊಡಗಿಕೊಂಡಿವೆ. ಇದೀಗ ವಿಪಕ್ಷಗಳ ವಿರುದ್ಧ ಹರಿಹಾಯ್ದ ಬಿಜೆಪಿ ನಾಯಕ ರವಿಕುಮಾರ್, ರಾಹುಲ್ ಗಾಂಧಿ ಸೇರಿದಂತೆ ಕೈ ನಾಯಕರಿಗೆ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ.

ಬೇಲ್ ರಾಜಕಾರಣ: ರಾಹುಲ್ ಗಾಂಧಿಯಾವರಿಗೆ ದೇಶ ಭಕ್ತಿ, ದೇಶ ಪ್ರೇಮ ಇದೆಯೇ ಎಂದು ಪ್ರಶ್ನಿಸಿದ ರವಿಕುಮಾರ್

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಮತ್ತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ

ಬೆಂಗಳೂರು: ರಾಜ್ಯ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಜೈಲು ಮತ್ತು ಬೇಲ್ ವಿಚಾರದಲ್ಲಿ ಆರೋಪ ಪ್ರತ್ಯಾರೋಪ ಮಾಡುವುದರಲ್ಲಿ ತೊಡಗಿಕೊಂಡಿವೆ. ಇದೀಗ ಸುದ್ದಿಗೋಷ್ಠಿ ಮೂಲಕ ವಿಪಕ್ಷ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ (N.Ravikumar), ಪ್ರಧಾನಿ ನರೇಂದ್ರ ಮೋದಿ (Narendra modi)ಯವರಿಗೆ ದೇಶಭಕ್ತಿಯ ಪಾಠ ಹೇಳಿಕೊಡುವುದು ಬೇಡ ಎಂದು ತಿರುಗೇಟು ನೀಡಿದ್ದಾರೆ. ಅಲ್ಲದೆ ರಾಹುಲ್ ಗಾಂಧಿಯಾವರಿಗೆ ದೇಶ ಭಕ್ತಿ, ದೇಶ ಪ್ರೇಮ ಇದೆಯೇ ಎಂದು ಪ್ರಶ್ನಿಸಿ ರಾಹುಲ್ ಗಾಂಧಿ (Rahul Gandhi)ಯವರೇ ನಿಮ್ಮ ತಾತನವರು ದೇಶವನ್ನು ಒಡೆಯುವ ಕೆಲಸ ಮಾಡಿದ್ದರು. ಹೀಗಾಗಿ ನಿಮ್ಮದು ಭಾರತ್ ಜೋಡೋ ಯಾತ್ರೆಯಲ್ಲ. ಇದು ಪ್ರಾಯಶ್ಚಿತದ ಯಾತ್ರೆ ಎಂದು ತಿರುಗೇಟು ನೀಡಿದರು.

ಬಿಜೆಪಿ ಕಛೇರಿಯಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ನ್ಯಾಷನಲ್ ಹೆರಾಲ್ಡ್ ಹಗರಣ ಮಾಡಿ 20 ಸಾವಿರ ಕೋಟಿ‌‌ ಲೂಟಿ ಹೊಡಿದ್ದೀರಾ, ಜನರ, ದೇಶದ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದಿರಾ, ಹೆರಾಲ್ಡ್ ಕೇಸ್​ನಲ್ಲಿ ನೀವು ಬೇಲ್​ನಲ್ಲಿ ಇದ್ದೀರಾ, ಬೇಲ್​ನಲ್ಲಿ ಇರುವವರು ದೇಶ ಭಕ್ತಿ ಬಗ್ಗೆ ಮತನಾಡುತ್ತಿರಾ ಎಂದು ಪ್ರಶ್ನಿಸಿದರು.

ನರೇಂದ್ರ ಮೋದಿ ಅವರು ಚಾಹಾ ಮಾರಿಕೊಂಡು, ಪೋಸ್ಟರ್ ಅಂಟಿಸಿ ಪ್ರಧಾನಿ ಆದವರು. ಅವರಿಗೆ ದೇಶದ ಬಗ್ಗೆ ಗೌರವ, ಸಂಸ್ಕೃತಿ ಗೋತ್ತು. ರಾಹುಲ್ ಗಾಂಧಿಯಾವರಿಗೆ ದೇಶ ಭಕ್ತಿ, ದೇಶ ಪ್ರೇಮ ಇದೆಯಾ? ರಾಹುಲ್ ಗಾಂಧಿಯವರೆ ನಿಮ್ಮ ತಾತನವರು ದೇಶವನ್ನು ಒಡೆಯುವ ಕೆಲಸ ಮಾಡಿದ್ದರು. ಹೀಗಾಗಿ ನಿಮ್ಮದು ಭಾರತ್ ಜೋಡೋ ಯಾತ್ರೆಯಲ್ಲ. ಬದಲಾಗಿ ಪ್ರಾಯಶ್ಚಿತದ ಯಾತ್ರೆಯಾಗಿದೆ. ಮೊದಲು ಕಾಂಗ್ರೆಸ್ ಜೋಡೋ ಯಾತ್ರೆ ಮಾಡಿ ಎಂದು ಭಾರತ್ ಜೋಡೋ ಯಾತ್ರೆ ಮಾಡುತ್ತಿರುವ ರಾಹುಲ್ ಗಾಂಧಿಯನ್ನು ಕುಟುಕಿದರು.

ಬಿಜೆಪಿ ಸರ್ಕಾರವನ್ನು ರಾಹುಲ್ ಗಾಂಧಿ 40 ಪರ್ಸೆಂಟ್ ಎಂದಿದ್ದಾರೆ. 40 ಪರ್ಸೆಂಟ್​ಗೆ ಆಧಾರ ಇದ್ದರೆ ಲೋಕಯುಕ್ತಕ್ಕೆ ದೂರು ಕೊಡಿ ಎಂದು ಸಿಎಂ ಹೇಳಿದ್ದಾರೆ. ಆದರೂ ಯಾವುದೇ ಪುರಾವೆಗಳಿಲ್ಲದೇ ಮಾತಾಡಿದ್ದಾರೆ. ಬೀದಿಯಲ್ಲಿ ಮಾತಾಡುವ ರಾಮಣ್ಣ ಕಾಮಣ್ಣನ ತರ ರಾಹುಲ್ ಗಾಂಧಿ ಮಾತನಾಡುತ್ತಿದ್ದಾರೆ. ರಾಹುಲ್ ಗಾಂಧಿಗೆ ಕನಿಷ್ಠ ಜ್ಞಾನವೂ ಇಲ್ಲ. ಹೀಗಾಗಿ ಬಿಜೆಪಿ ಇದನ್ನು ಬಲವಾಗಿ ಖಂಡಿಸುತ್ತದೆ. ರಾಹುಲ್ ಗಾಂಧಿಯವರು ಸ್ವಲ್ಪ ಯೋಚನೆ ಮಾಡಿ ಮಾತನಾಡಬೇಕಿತ್ತು ಎಂದರು.

ನ್ಯಾಷನಲ್ ಹೆರಾಲ್ಡ್ ವಿಚಾರವಾಗಿ ರಾಹುಲ್ ಗಾಮಧಿಯನ್ನು ತರಾಟೆಗೆ ತೆಗೆದುಕೊಂಡ ರವಿಕುಮಾರ್, 20 ಸಾವಿರ ಕೋಟಿಗಿಂತಲೂ ಹೆಚ್ಚು ಆಸ್ತಿ ಮಾಡಿದ್ದೀರಿ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಅಕ್ರಮ ಆಸ್ತಿ ಮಾಡಿದ್ದೀರಿ. ನ್ಯಾಷನಲ್ ಹೆರಾಲ್ಡ್​ನಲ್ಲಿ ರಾಹುಲ್ ಹಾಗೂ ಸೋನಿಯಾ ಬೇಲ್ ಮೇಲೆ ಇದ್ದಾರೆ. ಇವರಿಬ್ಬರಿಗೂ ಬೇಲ್ ಸಿಕ್ಕಿಲ್ಲ. ಇಲ್ಲಾಂದಿದ್ದರೆ ಜೈಲಿನಲ್ಲಿ ಇರಬೇಕಿತ್ತು. ಇಂತಹವರು ದೇಶ ಭಕ್ತಿಯ ಬಗ್ಗೆ ಮಾತನಾಡುತ್ತಾರೆ ಎಂದು ಕಿಡಿಕಾರಿದರು.

ಡಿಕೆಶಿ-ಸಿದ್ದುರನ್ನು ಜೋಡಿಸಲಾಗದವರಿಂದ ಭಾರತ ಜೋಡೋ ಯಾತ್ರೆ

ಕರ್ನಾಟಕದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರನ್ನು ಜೋಡಿಸಲು ಆಗದ ನೀವು (ರಾಹುಲ್ ಗಾಂಧಿ) ಭಾರತವನ್ನು ಹೇಗೆ ಜೋಡಿಸುತ್ತೀರಿ? ಇಬ್ಬರನ್ನು ಅಪ್ಪಿಕೊಳ್ಳಿ ಅಂತೀರಾ? ಮೊನ್ನೆ ನೀವು ಬಂದಾಗ ಡಿ.ಕೆ.ಸಿವಕುಮಾರ್ ಅವರಿಗಿಂತ ಮೊದಲೇ ಸಿದ್ದರಾಮಯ್ಯ ಕಾಡಿಗೆ ಹೋಗಿ ರಾಹುಲ್ ಗಾಂಧಿಯನ್ನು ಸ್ವಾಗತ ಮಾಡಿದ್ದರು. ಆ ನಂತರ ಕಾರ್ಯಕ್ರಮದಲ್ಲಿ ಇಬ್ಬರ ಕೈ ಹಿಡಿದು ಡೋಲು ಬಾರಿಸಿದ್ದರು. ಕೇವಲ ಬಲವಂತದ ಅಪ್ಪುಗೆ ಮಾಡಿಸುವ ನೀವು ಅವರನ್ನು ಜೋಡಿಸುವಿರಾ? ಎಂದು ರಾಹುಲ್ ಗಾಂಧಿಯನ್ನು ರವಿಕುಮಾರ್ ಪ್ರಶ್ನಿಸಿದರು.

ರಾಹುಲ್ ಗಾಂಧಿಗೆ ಹಲವು ಪ್ರಶ್ನೆಗಳನ್ನ ಕೇಳಿದ ರವಿಕುಮಾರ್

1. ಹಿಂದುಗಳಿಗೆ ಹಿಂದೂ ದೇಶ ಕೊಡದಿರುವುದು ಯಾಕೆ? ಇದು ಪ್ರಾಯಶ್ಚಿತ್ತ ಯಾತ್ರೆಯೇ?
2. ದೇಶ ಛಿದ್ರವಾಗಿರುವುದು ನಿಮ್ಮಿಂದ ಅಲ್ಲವೇ?
3. ಒಳಗೆ ಭಾರತ ತೋಡೋ, ಹೊರಗೆ ಭಾರತ ಜೋಡೋ
4. ಒಳಗೆ ಭ್ರಷ್ಟಾಚಾರ, ಹೊರಗೆ ಭ್ರಷ್ಟಾಚಾರದ ಆರೋಪ
5. ಕಾಂಗ್ರೆಸ್​ನ ಸಿದ್ದರಾಮಯ್ಯ-ಡಿಕೆಶಿ ಜೋಡಿಸಲಾಗದವರು ದೇಶ ಜೋಡಿಸಲು ಸಾಧ್ಯವೇ?
6. ಕಾಂಗ್ರೆಸ್ ಜೋಡೋ ಯಾತ್ರೆಯನ್ನ ಭಾರತ ಜೋಡೋ ಅಂತ ಕರೆದಿದ್ದು ಸರಿಯೇ?
7. ಹಿಂದು ಮುಸ್ಲಿಮ್ ಸಮಾನ ಕಾನೂನು ತರುವ ಭರವಸೆ ನೀಡುತ್ತೀರಾ?
8. ಕಾಂಗ್ರೆಸ್​ನ ನಾಯಕರೇ ಕಾಂಗ್ರೆಸ್ ತೋಡೋ ಮಾಡ್ತಿದ್ದಾರೆ
9. ದೇಶ ವಿಭಜನೆ ಹೇಳಿಕೆ ಕೊಟ್ಟಿದ್ದ ಕನ್ಹಯ್ಯ ಕುಮಾರ್ ಜೊತೆ ಭಾರತ ಜೋಡೋ ಸರಿಯೇ?

ಕಾಂಗ್ರೆಸ್ ಅಂದರೆ ದೇಶದ್ರೋಹದ ಪಕ್ಷ

ಭ್ರಷ್ಟಾಚಾರದ ಪಕ್ಷ ಆಗಿರುವ ಕಾಂಗ್ರೆಸ್ ಭಯೋತ್ಪಾದನೆ ಸೃಷ್ಟಿ ಮಾಡುತ್ತಿದೆ. ಕಾಂಗ್ರೆಸ್ ಅಂದರೆ ದೇಶದ್ರೋಹದ ಪಕ್ಷ. ಇಡೀ ದೇಶದಲ್ಲಿ ರಾಹುಲ್ ಗಾಂಧಿ ಬಂದ ಕಡೆಯಲ್ಲೆಲ್ಲಾ ಕಾಂಗ್ರೆಸ್ ಸೋತಿದೆ. ಕಬ್ಬಿಣ ಕಾಲಿನ ನಾಯಕ ರಾಹುಲ್ ಗಾಂಧಿ ಆಗಿದ್ದಾರೆ ಎಂದರು. ಪಿಎಫ್​ಐ ಸಂಘಟನೆಯ 140 ಪ್ರಕರಣಗಳನ್ನು ಸಿದ್ದರಾಮಯ್ಯ ತೆಗೆದು ಹಾಕಿದರು. ಪಿಎಫ್​ಐ ಸಂಘಟನೆ ದೇಶ ದ್ರೋಹಿ ಸಂಘಟನೆ. ಹಲವು ‌ಉಗ್ರ ಸಂಘಟನೆ ಜೊತೆ ಆ ಸಂಘಟನೆ ಭಾಗಿಯಾಗಿದೆ. ಅಂತಹ ಸಂಘಟನೆಯಲ್ಲಿದ್ದವರ ಪ್ರಕರಣವನ್ನು ತೆಗೆದು ಹಾಕಿದ್ದೀರಿ. ಇದು ನಿಮ್ಮ ದೇಶ ಪ್ರೇಮನಾ ಎಂದು ಪ್ರಶ್ನಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಸಮನ್ಸ್ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಇದರಲ್ಲಿ ನಮ್ಮದು ಯಾವುದೇ ಅಭಿಪ್ರಾಯ, ಕಾಮೆಂಟ್ ಇಲ್ಲ. ಅವರು ನೋಟಿಸ್ ಕೊಟ್ಟಿದ್ದಾರೆ. ಹೀಗಾಗಿ ಅವರು ವಿಚಾರಣೆಗೆ ಹೋಗಬೇಕು. ಬಿಜೆಪಿಯಲ್ಲಿ ಬಡವರು, ಶ್ರೀಮಂತರೂ ಇದ್ದಾರೆ. ಆದರೆ ಡಿ.ಕೆ ಶಿವಕುಮಾರ್​ಅವರಂತೆ ಅತಿವೇಗವಾಗಿ ಆಸ್ತಿ ಮಾಡಿದವರು ಯಾರು ಇಲ್ಲ. ಎಲ್ಲರ ಕಣ್ಣು ಕುಕ್ಕುವ ರೀತಿಯಲ್ಲಿ ಆಸ್ತಿ ಮಾಡಿದ್ದೀರಲ್ಲ, ಈ ಟೆಕ್ನಾಲಜಿ ಯಾವುದು ಎಂದು ಪ್ರಶ್ನಿಸಿದರು.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.