
ಎಂಡಿ ರೂಪಾ ಮೌದ್ಗಿಲ್
ಎಂಡಿ ರೂಪಾ ಮೌದ್ಗಿಲ್ ವಿರುದ್ಧ ನಿಗಮದ ಅಧ್ಯಕ್ಷ ದೂರು ಹಿನ್ನೆಲೆ, 5 ಪುಟಗಳ ಸ್ಪಷ್ಟೀಕರಣದಲ್ಲಿ 14 ಕಾರಣಗಳನ್ನು ನೀಡಿ ಸಿಎಸ್ಗೆ ಎಂಡಿ ರೂಪಾ ಮೌದ್ಗಿಲ್ ಸ್ಪಷ್ಟೀಕರಣ ನೀಡಿದ್ದಾರೆ.
ಬೆಂಗಳೂರು: ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ, ಕರಕುಶಲ ಅಭಿವೃದ್ಧಿ ನಿಗಮದ ಎಂಡಿ ರೂಪಾ ಮೌದ್ಗಿಲ್ ವಿರುದ್ಧ ಮಾಡಿರುವ ನಿರಾಧಾರ ಹಾಗೂ ಅವರ ಕಾಲ್ಪನಿಕ ಆರೋಪ ಕುರಿತು 5 ಪುಟಗಳ ಸ್ಪಷ್ಟೀಕರಣದಲ್ಲಿ 14 ಕಾರಣಗಳನ್ನು ನೀಡಿ ಸಿಎಸ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ರೂಪಾ ಮೌದ್ಗಿಲ್ ವಿರುದ್ಧ ಬೇಳೂರು ರಾಘವೇಂದ್ರ ಶೆಟ್ಟಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದರು.
ಅಧ್ಯಕ್ಷ ರಾಘವೇಂದ್ರ ಶೆಟ್ಟಿಯು ರೂಪಾ ಮೌದ್ಗಿಲ್ ರೂ. 600 ಕೋಟಿ ಟೆಂಡರ್ ಕರೆದಿರುವುದಾಗಿ ಹೇಳಿರುತ್ತಾರೆ. ಆದರೆ ಈ ಕಛೇರಿಯಿಂದ ಯಾವುದೇ 6.00 ಕೋಟಿ ಟೆಂಡ ಕರೆದಿರುವುದಿಲ್ಲ. ಅಲ್ಲದೆ ಈ ಕಛೇರಿಯಿಂದ ಯಾವುದೇ ಟೆಂಡರ್ ಕರೆದರೂ ಅದನ್ನು ಪಾರದರ್ಶಕವಾಗಿ ಕೆಟಿಪಿಪಿ ಆಕ್ಟ್ ಪಕಾರ ಮಾಡಲಾಗಿದೆ. ree-procurement portal ನಲ್ಲಿ ಹಾಕಲಾಗಿದೆ. ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ ಡಿಡಿಪಿಆರ್ 35 ಎಆರ್ಯು 2003, ದಿನಾಂಕ 07.05.2003 ಪ್ರಕಾರ ಯಾವುದೇ ಟೆಂಡರ್ ಕರೆಯುವುದಕ್ಕೂ ಹಾಗೂ ಎಷ್ಟೇ ಮೊತ್ತದ ಟೆಂಡರ್ ಕರೆಯುವುದಕ್ಕೂ ಅಧ್ಯಕ್ಷರ ಅನುಮತಿ ಬೇಕಾಗಿರುವುದಿಲ್ಲ. ಸರ್ಕಾರದ ಆದೇಶವನ್ನು ಚಾಚೂ ತಪ್ಪದೆ ಪಾಲಿಸಿರುತ್ತೇನೆ. ಅವರು ಆರೋಪಿಸಿರುವಂತೆ ಅವರ ಅನುಮತಿ ತೆಗೆದುಕೊಂಡಿರುವುದಿಲ್ಲ ಏಕೆಂದರೆ ಅದರ ಅಗತ್ಯ ಇರುವುದಿಲ್ಲ.
ರಾಘವೇಂದ್ರ ಶೆಟ್ಟಿಯು ನನಗೆ 75 ಪತ್ರಗಳನ್ನು ಕಳುಹಿಸಿರುತ್ತಾರೆ. ಅದನ್ನು ಅವರು ನೋಟಿಸ್ ಎಂದು ಪತ್ರಿಕೆಗಳಿಗೆ ಹೇಳಿರಬಹುದು. ಅವೆಲ್ಲವೂ ನಿಗಮದ ದೈನಂದಿನ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಕೇಳಿದ ಪತ್ರಗಳು, ಈಗಾಗಲೇ ತಿಳಿಸಿದಂತೆ ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ ಡಿಡಿಪಿಆರ್ 35 ಎಆರ್ಯು 2003, ದಿನಾಂಕ 07.05.2003 ಪ್ರಕಾರ ದೈನಂದಿನ ಚಟುವಟಿಕೆಗಳಲ್ಲಿ ಅಧ್ಯಕ್ಷರ ಹಸ್ತಕ್ಷೇಪ ಸಲ್ಲದು. ಹಾಗಾಗಿ ನಾನು ಅವರ ಯಾವ ಪತ್ರಕ್ಕು ಉತ್ತರ ಕೊಟ್ಟಿರುವುದಿಲ್ಲ. ಹಾಗೂ ಸರ್ಕಾರದ ಆದೇಶ ಪ್ರಕಾರ ನಡೆದುಕೊಂಡಿರುತ್ತೇನೆ. ಸರ್ಕಾರದ ಆದೇಶ ಪ್ರಕಾರ ನಡೆದುಕೊಳ್ಳಲು ತಿಳಿಸಿದರೂ ಅಧ್ಯಕ್ಷರು ಪಾಲಿಸಿರುವುದಿಲ್ಲ.