ಬೇಕಾಗುವ ಪದಾರ್ಥಗಳು

 • ಹೆಸರುಬೇಳೆ – ಒಂದು ಸಣ್ಣ ಬಟ್ಟಲು
 • ಉದ್ದಿನಬೇಳೆ – ಒಂದು ಸಣ್ಣ ಬಟ್ಟಲು
 • ಕಡಲೆಬೇಳೆ- ಒಂದು ಸಣ್ಣ ಬಟ್ಟಲು
 • ತೊಗರಿಬೇಳೆ – ಒಂದು ಸಣ್ಣ ಬಟ್ಟಲು
 • ಅಕ್ಕಿ- ಒಂದು ಸಣ್ಣ ಬಟ್ಟಲು
 • ಜೀರಿಗೆ- ಒಂದು ಚಮಚ
 • ಒಣಗಿದ ಮೆಣಸಿನ ಕಾಯಿ -4-5

ಮಾಡುವ ವಿಧಾನ…

 • ಹೆಸರುಬೇಳೆ, ಉದ್ದಿನಬೇಳೆ, ಕಡಲೆಬೇಳೆ, ತೊಗರಿಬೇಳೆ, ಅಕ್ಕಿ, ಜೀರಿಗೆ, ಒಣಗಿದ ಮೆಣಸಿನ ಕಾಯಿ ಎಲ್ಲವನ್ನೂ 1 ಗಂಟೆ ಕಾಲ ನೆನೆಸಿಟ್ಟುಕೊಳ್ಳಬೇಕು.
 • ನಂತರ ನೆನೆಸಿದ ಬೇಳೆ, ಅಕ್ಕಿ ಎಲ್ಲವನ್ನೂ ಮಿಕ್ಸಿ ಜಾರ್'ಗೆ ಹಾಕಿ ರುಬ್ಬಿಕೊಳ್ಳಬೇಕು.
 • ನಂತರ ರುಬ್ಬಿಕೊಂಡ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಅಡುಗೆ ಸೋಡವನ್ನು ಹಾಕಿ ಮಿಶ್ರಣ ಮಾಡಿಕೊಳ್ಳಬೇಕು.
 • ನಂತರ ಒಲೆಯ ಮೇಲೆ ತವಾ ಇಟ್ಟು ಕಾದ ನಂತರ ಹಿಟ್ಟನ್ನು ಹಾಕಿ ಎರಡೂ ಬದಿಯಲ್ಲೂ ಕೆಂಪಗೆ ಸುಟ್ಟರೆ ರುಚಿಕರವಾದ ಬೇಳೆ ದೋಸೆ ಸವಿಯಲು ಸಿದ್ಧ.

Kannadaprabha – ಆಹಾರ-ವಿಹಾರ – https://www.kannadaprabha.com/food/
Read More

Leave a comment