ಬೇಸಿಗೆಯಲ್ಲಿ ಸೂರ್ಯನ ತಾಪಕ್ಕೆ ಹಲವು ಕಾಯಿಲೆಗಳು ಒಕ್ಕರಿಸಿಕೊಳ್ಳುತ್ತವೆ. ಅವುಗಳಲ್ಲಿ ಬಾಯಿ ಹುಣ್ಣು ಕೂಡ ಒಂದು. ಮುಖ್ಯವಾಗಿ ಬಿಸಿಲಿನ ತಾಪಮಾನ ಹೆಚ್ಚಾಗುವುದರಿಂದ ನಮ್ಮ ಬಾಯಿಗಳಲ್ಲಿ ಹುಣ್ಣುಗಳಾಗುತ್ತವೆ. ಈ ಸಮಸ್ಯೆಗೆ ಪರಿಹಾರ ಏನು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಬಾಯಿ ಹುಣ್ಣಿಗೆ ಕಾರಣಗಳು :

ದೇಹದಲ್ಲಿನ ಉಷ್ಣತೆ.

ಕಡಿಮೆ ನೀರು ಕುಡಿಯುವುದು.

ಸೂಕ್ಷ್ಮಾಣುಜೀವಿಗಳಿ೦ದಾಗುವ ಸೋ೦ಕು,

ಮಸಾಲೆಯುಕ್ತ ಆಹಾರ ಸೇವನೆ.

ಆಯಸಿಡಿಕ್‌ ಆಹಾರ ಸೇವನೆ.

ಹಲ್ಲನ್ನು ಸರಿಯಾಗಿ ಶುಚಿಗೊಳಿಸದ ಕಾರಣ.

ವಿಟಮಿನ್ C ಯ ಕೊರತೆಯಿ೦ದ ಬಾಯಲ್ಲಿ ಉಂಟಾಗುವ ಸಣ್ಣ ಗಾಯ ಹುಣ್ಣು ಉ೦ಟಾಗಲು ಕಾರಣವಾಗುತ್ತದೆ.

ವಿಟಮಿನ್ B12, ಜಿ೦ಕ್‌ಗಳ ಕೊರತೆಯೂ ಸಹ ನೇರವಾಗಿ ಹುಣ್ಣಿಗೆ ಎಡೆಮಾಡಿಕೊಡುತ್ತದೆ.

ಬಾಯಿ ಹುಣ್ಣಿಗೆ ಮನೆ ಮದ್ದು :

ದೇಹದಲ್ಲಿನ ಉಷ್ಣತೆ ಕಡಿಮೆ ಮಾಡುವುದರಿಂದ ಈ ಸಮಸ್ಯೆ ನಿವಾರಿಸಬಹುದು. ಹೆಚ್ಚು ಹೆಚ್ಚು ನೀರು ಕುಡಿಯುವುದು, ಎಳನೀರು, ಮಜ್ಜಿಗೆ ಹೀಗೆ ದೇಹಕ್ಕೆ ತಂಪು ನೀಡುವ ಆಹಾರ ಸೇವನೆಯಿಂದ ಹಣ್ಣು ಕಡಿಮೆಯಾಗುತ್ತದೆ.

ದನಿಯಾ ನೀರು, ಜೀರಿಗೆ ನೀರು, ಕೂಡ ಬಾಯಿ ಹುಣ್ಣು ನಿವಾರಿಸಬಲ್ಲದು. ಬಿಸಿ ನೀರಿಗೆ ಕಲ್ಲುಪ್ಪು ಸೇರಿಸಿ ಬಾಯಿ ಮುಕ್ಕಳಿಸುವುದರಿಂದ ಬಾಯಿ ಹುಣ್ಣಿನ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.

ಹುಣ್ಣಿನ ಮೇಲೆ ಸ್ವಲ್ಪ ಪ್ರಮಾಣದಲ್ಲಿ ವಿನೇಗರ್ ಅನ್ನು ಹಚ್ಚುವುದರಿ೦ದ ಅಲ್ಪ ಪ್ರಮಾಣದ ನೋವು ನಿವಾರಣೆಯಾಗುತ್ತದೆ.

ತಣ್ಣನೆಯ ನೀರಿಗೆ ಎರಡು ಚಮಚ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸುವುದರಿಂದ ಎರಡು ದಿನದೊಳಗೆ ಬಾಯಿ ಹುಣ್ಣು ಸಮಸ್ಯೆ ನಿವಾರಣೆಯಾಗುತ್ತದೆ. ದಿನದಲ್ಲಿ ಎರಡರಿಂದ ಮೂರು ಬಾರಿ ಹೀಗೆ ಮಾಡುವುದು ಒಳ್ಳೆಯದು.

ಬಾಯಿ ಹುಣ್ಣು ಆದ ಜಾಗಕ್ಕೆ ಜೇನನ್ನು ಸವರುವುದರಿಂದ ನೋವು ಕಡಿಮೆಯಾಗುತ್ತದೆ. ಗಂಟೆಗೊಮ್ಮೆ ಹೀಗೆ ಮಾಡುವುದರಿಂದ ಉತ್ತಮ ಪ್ರಯೋಜನ ಪಡೆಯಬಹುದು.

ಲೋಳೆರಸವನ್ನು, ಇಲ್ಲವೇ ಪರಿಶುದ್ಧವಾದ ತೆಂಗಿನೆಣ್ಣೆಯನ್ನು ನೋವಿರುವ ಜಾಗಕ್ಕೆ ಹಚ್ಚುವುದರಿಂದ ಹುಣ್ಣು ಒಣಗುತ್ತದೆ. ನೋವು ಕಡಿಮೆಯಾಗುತ್ತದೆ.

ಆರೋಗ್ಯ – Udayavani – ಉದಯವಾಣಿ
Read More

By

Leave a Reply