ಬೇಸಿಗೆಯಲ್ಲಿ ಹನಿಮೂನ್​ಗೆ ತೆರಳಬಹುದಾದ ರೊಮ್ಯಾಂಟಿಕ್​ ತಾಣಗಳಿವು | Best Honeymoon Destinations In India In Summer 2022


ಬೇಸಿಗೆಯಲ್ಲಿ ಹನಿಮೂನ್​ಗೆ ತೆರಳಬಹುದಾದ ರೊಮ್ಯಾಂಟಿಕ್​ ತಾಣಗಳಿವು

ರೊಮ್ಯಾಂಟಿಕ್ ತಾಣಗಳು

ವಿವಾಹವೆಂಬುದು ಪ್ರತಿಯೊಬ್ಬರ ಜೀವನದಲ್ಲೂ ನಡೆಯುವ ಸುಂದರ ಘಟನೆ, ಹಾಗೂ ಅತಿ ಮುಖ್ಯ ಘಟ್ಟ ಎಂದೇ ಹೇಳಬಹುದು. ವಿವಾಹವಾದ ಬಳಿಕ ಸಂಗಾತಿ ಏಕಾಂತವನ್ನು ಬಯಸುತ್ತಾರೆ, ಒಬ್ಬರನ್ನೊಬ್ಬರು ಪರಸ್ಪರ ಅರ್ಥಮಾಡಿಕೊಳ್ಳಲು ಮುಂದಾಗುತ್ತಾರೆ.

ವಿವಾಹವೆಂಬುದು ಪ್ರತಿಯೊಬ್ಬರ ಜೀವನದಲ್ಲೂ ನಡೆಯುವ ಸುಂದರ ಘಟನೆ, ಹಾಗೂ ಅತಿ ಮುಖ್ಯ ಘಟ್ಟ ಎಂದೇ ಹೇಳಬಹುದು. ವಿವಾಹವಾದ ಬಳಿಕ ಸಂಗಾತಿ ಏಕಾಂತವನ್ನು ಬಯಸುತ್ತಾರೆ, ಒಬ್ಬರನ್ನೊಬ್ಬರು ಪರಸ್ಪರ ಅರ್ಥಮಾಡಿಕೊಳ್ಳಲು ಮುಂದಾಗುತ್ತಾರೆ. ಇನ್ನು ಬೇಸಿಗೆ(Summer)ಯಲ್ಲಿ ಮನೆಯಿಂದ ಹೊರಗೆ ಕಾಲಿಡಲಾರದ ಪರಿಸ್ಥಿತಿಯಲ್ಲಿ ಹನಿಮೂನ್​(Honeymoon)ಗೆ ಹೋಗುವ ಕುರಿತು ಆಲೋಚನೆ ಮಾಡುವುದಾದರೂ ಹೇಗೆ? ಆದರೆ ಬೇಸರ ಪಡುವ ಅಗತ್ಯವೇ ಇಲ್ಲ ಭಾರತದಲ್ಲಿ ಬೇಸಿಗೆಯ ಸಮಯದಲ್ಲೂ ತಂಪಾಗಿಸುವ ಹಲವು ಹನಿಮೂನ್ ಡೆಸ್ಟಿನೇಷನ್​ಗಳಿವೆ, ಅವು ಎಲ್ಲಿವೆ ಅದರ ವಿಶೇಷತೆ ಏನು ಎಂಬುದರ ಕುರಿತ ಮಾಹಿತಿ ಇಲ್ಲಿದೆ.

ಕೇವಲ ನವ ಜೋಡಿ ಮಾತ್ರವಲ್ಲದೆ ಕುಟುಂಬ ಸಮೇತರಾಗಿಯೂ ಈ ಪ್ರದೇಶಗಳಿಗೆ ಹೋಗಬಹುದು

 1. ಡಾರ್ಜಿಲಿಂಗ್ : ಡಾರ್ಜಿಲಿಂಗ್ ಪಶ್ಚಿಮ ಬಂಗಾಳದ ಒಂದು ಗಿರಿಧಾಮವಾಗಿದ್ದು, ಸಂಗಾತಿಗಳಿಗೆ ಎಂದೂ ನೆನಪಿನಲ್ಲಿಡುವಂತಹ ಅನುಭವವನ್ನು ನೀಡುತ್ತದೆ. ಡಾರ್ಜಿಲಿಂಗ್‌ ತನ್ನ ಬ್ರಿಟಿಷ್‌ ಪಾರಂಪರಿಕ ಕಟ್ಟಡಗಳಿಂದ ಮತ್ತು ರಮಣೀಯವಾದ ಕಾಂಚನಚುಂಗಾದೊಂದಿಗೆ ಹೆಚ್ಚು ಜನಪ್ರಿಯವಾಗಿದೆ. ಇಂತಹ ಪರಿಸರವನ್ನು ಯಾರು ತಾನೆ ಇಷ್ಟಪಡುವುದಿಲ್ಲ ಹೇಳಿ.
  ಈ ರಮಣೀಯವಾದ ಡಾರ್ಜಿಲಿಂಗ್‌ ಸಮುದ್ರ ಮಟ್ಟದಿಂದ ಸುಮಾರು 2050 ಮೀಟರ್‌ ಎತ್ತರದಲ್ಲಿದೆ. ಡಾರ್ಜಿಲಿಂಗ್‌ನಲ್ಲಿರುವ ಅದ್ಭುತ ಹಿಮಾಲಯನ್‌ ರೈಲ್ವೆಯನ್ನು ‘ಡಾರ್ಜಿಲಿಂಗ್‌ ಟಾಯ್‌ ಟ್ರೈನ್‌’ ಎಂದು ಕರೆಯಲಾಗುತ್ತದೆ. ಇದರ ಮೂಲಕ ನೀವು ಹಿಮಾಲಯದ ಸಂಪೂರ್ಣವಾದ ಸೌಂದರ್ಯವನ್ನು ಆಸ್ವಾದಿಸುತ್ತೀರಿ.
 2. ಊಟಿ: ಸಾಮಾನ್ಯವಾಗಿ ಮದುವೆಯಾದ ಎಲ್ಲಾ ಜೋಡಿಗಳು ಹನಿಮೂನ್​ಗಾಗಿ ಊಟಿಗೆ ಬಂದೇ ಬರುತ್ತಾರೆ, ಇದು ತಮಿಳುನಾಡಿನ ಸುಂದರ ಗಿರಿಧಾಮವಾಗಿದ್ದು, ನವ ಜೋಡಿಗಳಿಗೆ ಬೆಸ್ಟ್​ ಪ್ಲೇಸ್​ ಎನ್ನಬಹುದು. ಇಲ್ಲಿನ ಚಹಾದ ತೋಟಗಳು, ಬೊಟಾನಿಕಲ್‌ ಗಾರ್ಡನ್ಸ್‌ಗಳಂತ ಆಕರ್ಷಣೀಯ ಪ್ರೇಕ್ಷಣೀಯ ಸ್ಥಳಗಳಿವೆ. ಆ ಎಲ್ಲಾ ಪ್ರವಾಸಿ ತಾಣಗಳಿಗೆ ನಿಮ್ಮ ಸಂಗಾತಿಯ ಕೈಯನ್ನು ಹಿಡಿದು ಅನ್ವೇಷಿಸಬಹುದು.
  ಜನರು ಹೆಚ್ಚಾಗಿ ಬೇಸಿಗೆ ಕಾಲದಲ್ಲಿಯೇ ಊಟಿಗೆ ಭೇಟಿ ನೀಡಲು ಇಷ್ಟ ಪಡುತ್ತಾರೆ. ಇಲ್ಲಿನ ಆಹ್ಲಾದಕರವಾದ ತಾಣವು ಎಂಥವರನ್ನು ಮೈಮರೆಯುವಂತೆ ಮಾಡುತ್ತದೆ.
 3. ಔಲಿ: ವಿವಾಹವಾದ ನವ ದಂಪತಿಗಳಿಗೆ ಔಲಿ ಅತ್ಯಾಕರ್ಷಕ ಪ್ರಯಾಣದ ಅನುಭವವನ್ನು ನೀಡುತ್ತದೆ. ಉತ್ತರಾಖಂಡ ರಾಜ್ಯದ ಔಲಿ ಬೇಸಿಗೆ ತಿಂಗಳಲ್ಲಿ ತುಂಬಾ ವಿಶೇಷವಾಗಿರುತ್ತದೆ.
  ಔಲಿಯು ಹಿಮದಿಂದ ಆವೃತವಾದ ಪರ್ವತಗಳ ಅದ್ಭುತ ನೋಟವನ್ನು ಸಂಗಾತಿಯೊಂದಿಗೆ ಆನಂದಿಸಬಹುದು. ಇಲ್ಲಿ ಸೇಬಿನ ತೋಟಗಳು, ಪೈನ್‌ ಮರಗಳಿಂದ ಕೂಡಿದ ಶ್ರೀಮಂಂತ ನೈಸರ್ಗಿಕ ಸಂಪತ್ತನ್ನು ಕಣ್ತುಂಬಿಕೊಳ್ಳಬಹುದು.
 4. ಗುಲ್ಮಾರ್ಗ್‌: ಗುಲ್ಮಾರ್ಗ್ ಸಮುದ್ರ ಮಟ್ಟದಿಂದ 2370 ಮೀಟರ್ ಎತ್ತರದಲ್ಲಿದೆ. ಭೂ ಲೋಕದ ಸ್ವರ್ಗ ಕಾಶ್ಮೀರದಲ್ಲಿ . ಹಾಗಾಗಿ ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ ಅನ್ನು ನೀವು ಆಯ್ಕೆ ಮಾಡಿಕೊಳ್ಳಿ. ನೀವು ಜಮ್ಮು ಮತ್ತು ಕಾಶ್ಮೀರದ ಪ್ರವಾಸ ಕೈಗೊಂಡಾಗ ತಪ್ಪದೇ ಈ ಗುಲ್ಮಾರ್ಗ್‌ಗೆ ಭೇಟಿ ನೀಡಲೇಬೇಕು ಇಲ್ಲವಾದಲ್ಲಿ ಒಂದು ಉತ್ತಮ ತಾಣವನ್ನು ನೀವು ಮಿಸ್ ಮಾಡಿಕೊಂಡಂತಾಗುತ್ತದೆ.
 5. ಮನಾಲಿ: ಮನಾಲಿಯು ಹಿಮಾಚಲಪ್ರದೇಶದಲ್ಲಿದ್ದು, ಹನಿಮೂನ್​ಗೆ ತೆರಳುವವರಿಗೆ ಹೇಳಿ ಮಾಡಿಸಿದ ತಾಣವಾಗಿದೆ, ಅಲ್ಲದೆ, ಈ ಪ್ರದೇಶಕ್ಕೆ ಮಾತ್ರ ವರ್ಷದ ಯಾವುದೇ ಸಮಯದಲ್ಲಾದರೂ ಭೇಟಿ ನೀಡಬಹುದು.
  ಒಂದು ವೇಳೆ ನೀವು ಟ್ರೆಕ್ಕಿಂಗ್‌ ಮಾಡಲು ಉತ್ಸಾಹ ಹೊಂದಿದ್ದರೆ ಮನಾಲಿಯಲ್ಲಿನ ಕೆಲವು ತಾಣಗಳು ನಿಮಗೆ ರೋಮಾಂಚಕಾರಿಯಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಸೋಲಾಂಗ್‌ ಕಣಿವೆಗೆ ಭೇಟಿ ನೀಡುವುದನ್ನು ಮರೆಯದಿರಿ. ನಿಮ್ಮ ಜೀವನವನ್ನು ಪ್ರಾರಂಭ ಮಾಡಲು ಇಂತಹ ಆಹ್ಲಾದಕರವಾದ ತಾಣಕ್ಕೆ ಭೇಟಿ ನೀಡಿ.
 6. ಆಗ್ರಾ : ತಾಜ್​ಮಹಲ್ ಸಂಗಾತಿಗಳ ನಡುವೆ ಪ್ರೀತಿಯನ್ನು ಮತ್ತಷ್ಟು ಇಮ್ಮಡಿಗೊಳಿಸುತ್ತದೆ. ಬೇಸಿಗೆ ಕಾಲದಲ್ಲಿ ಆಗ್ರಾದ ಹವಾಮಾನ ಕೊಂಚ ಬಿಸಿ ಎನಿಸಿದರೂ ತಾಜ್​ಮಹಲ್​ನ ಅಂದ ನಿಮ್ಮನ್ನು ಯಾವುದೋ ಲೋಕಕ್ಕೆ ಕೊಂಡೊಯ್ಯುತ್ತದೆ. ಆಗ್ರಾದಲ್ಲಿ ಹಲವು ರೆಸಾರ್ಟ್​ಗಳಿದ್ದು, ಅಲ್ಲಿಯೇ ಉಳಿದುಕೊಂಡು ಆಗ್ರಾದ ಸುತ್ತಮುತ್ತಲಿನ ಸ್ಥಳಗಳಿಗೂ ಬೇಟಿ ನೀಡಬಹುದು.

ಜೀವಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *