ನೀಲಿ ಚಿತ್ರಗಳ ಮಾಜಿ ಸ್ಟಾರ್​ ನಟಿ ಸನ್ನಿ ಲಿಯೋನ್ ಬಗ್ಗೆ ತಿಳಿಯದವರು ಯಾರು ಇರೋದಿಲ್ಲ. ಆಕೆಯ ಹಿಂದಿನ ಜೀವನ ಹೇಗಿದ್ದರೂ.. ಮನಸ್ಸು ಮಾತ್ರ ಬೆಣ್ಣೆಯಂತೆ. ಆದ್ದರಿಂದಲೇ ಏನೋ ಯುವಕರಿಗೆ ಆಕೆಯ ವ್ಯಕಿತ್ವ ಎಂದರೇ ಎಷ್ಟೋ ಇಷ್ಟ. ಸದ್ಯ ಸನ್ನಿ ಲಿಯೋನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರೋ ಫೋಟೋ ಸಖತ್​ ವೈರಲ್​ ಆಗುತ್ತಿದೆ.

ಫೋಟೋದಲ್ಲಿ ಪಿಂಕ್ ಬಣ್ಣದ ಹ್ಯಾಟ್​​ ಕೈಯಲ್ಲಿ ಹಿಡಿರುವ ಸನ್ನಿ ಲಿಯೋನ್​, ತಮ್ಮ ದೇಹವನ್ನ ಮುಂಚ್ಚಿಕೊಂಡಿದ್ದಾರೆ. ಫೇಸ್​ಬುಕ್​​ನಲ್ಲಿ ಫೋಟೋ ಶೇರ್ ಮಾಡಿರುವ ಸನ್ನಿ ಲಿಯೋನ್ ಬೇಸಿಗೆ ಇಲ್ಲಿದೆ ಎಂಬ ಕ್ಯಾಪ್ಷನ್ ನೀಡಿದ್ದಾರೆ. ಹಲವು ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯ ಫೋಟೋಗೆ ಪ್ರತಿಕ್ರಿಯೆ ನೀಡಿ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೇ ಈ ಫೋಟೋ ಕಂಡ ಅವರ ಅಭಿಮಾನಿಗಳು ‘ಬೇಸಿಗೆ ಬಂತು’ ಅಂತಾ ಇಷ್ಟು ಹಿಟ್​ ಕ್ರಿಯೇಟ್​ ಮಾಡೋಡಿದ್ರೆ ಹೇಗೆ? ಸನ್ನಿ ಇದು ನ್ಯಾಯನಾ? ಅತಾ ಪ್ರಶ್ನಿಸ್ತಿದ್ದಾರೆ.

ಅಂದಹಾಗೇ, ಈ ಫೋಟೋವನ್ನು ಬಾಲಿವುಡ್​​ನ ಖ್ಯಾತ ಫೋಟೋಗ್ರಾಫರ್​​ ಡಬ್ಬು ರತ್ನಾನಿಯವರ ಕ್ಯಾಲೆಂಡರ್​​ಗಾಗಿ ಸೆರೆ ಹಿಡಿಯಲಾಗಿದ್ದು, ಮತ್ತೊಮ್ಮೆ ಡಬ್ಬು ರತ್ನಾನಿರ ಕ್ಯಾಲೆಂಡರ್ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. 2021ರ ಕ್ಯಾಲೆಂಡರ್​ ಶೀಘ್ರವೇ ಬಿಡುಗಡೆಯಾಗಲಿದ್ದು, ಬಾಲಿವುಡ್​​ನ ಹಲವು ಸೆಲೆಬ್ರೆಟಿಗಳು ಕೂಡ ಕ್ಯಾಲೆಂಡರ್​​ಗಾಗಿ ಫೋಟೋ ಶೂಟ್​ ನಡೆಸಿದ್ದು, ನಟಿ ವಿದ್ಯಾಬಾಲನ್​, ಅಭಿಷೇಕ್​ ಬಚ್ಚನ್, ಕಾರ್ತಿಕ್​ ಆರ್ಯನ್, ಶ್ರದ್ಧಾ ಕಪೂರ್​, ವಿಕ್ಕಿ ಕೌಶಲ್​, ವರುಣ್ ಧವನ್​ ಸೇರಿದಂತೆ ಹಲವು ಸ್ಟಾರ್ ನಟ-ನಟಿಯರು ಫೋಟೋಗೆ ಫೋಸ್​ ಕೊಟ್ಟಿದ್ದಾರೆ.

ಇನ್ನು ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ಬಡವರ ಪಾಲಿಗೆ ನೆರವು ನೀಡಿದ್ದ ಸನ್ನಿ ಲಿಯೋನ್ ಅವರು, ಹಲವು ಜನರಿಗೆ ಊಟ ನೀಡಿ ಮಾನವೀಯತೆ ಮೆರೆದಿದ್ದರು. ಈ ಕುರಿತ ಫೋಟೋಗಳನ್ನು ಸನ್ನಿ ಲಿಯೋನ್ ತಮ್ಮ ಇನ್​​ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

The post ‘ಬೇಸಿಗೆ ಬಂತು’ ಅಂತಾ ಇಷ್ಟು ಹಿಟ್​ ಕ್ರಿಯೇಟ್​ ಮಾಡೋಡಿದ್ರೆ ಹೇಗೆ? ಸನ್ನಿ ಇದು ನ್ಯಾಯನಾ? appeared first on News First Kannada.

Source: newsfirstlive.com

Source link