ಬೈಂದೂರು ಬಳಿ ಭಾರೀ ಗುಡ್ಡ ಕುಸಿತ: ತಪ್ಪಿದ ಅನಾಹುತ

ಬೈಂದೂರು ಬಳಿ ಭಾರೀ ಗುಡ್ಡ ಕುಸಿತ: ತಪ್ಪಿದ ಅನಾಹುತ

ಉಡುಪಿ: ಬೈಂದೂರು ಬಳಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಭಾರೀ ಗುಡ್ಡಕುಸಿತ ಸಂಭವಿಸಿದೆ. ಬೈಂದೂರು ತಾಲೂಕು ವ್ಯಾಪ್ತಿಯ ಒತ್ತಿನೆಣೆಯ ಬಳಿಯ ಗುಡ್ಡ ಕುಸಿದಿದ್ದು ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ವೇಳೆ ಗುಡ್ಡ ಕೊರೆಯಲಾಗಿತ್ತು ಎನ್ನಲಾಗಿದೆ.

ಸತತವಾಗಿ ಸುರಿದ ಮಳೆಯ ಹಿನ್ನಲೆಯಲ್ಲಿ ಗುಡ್ಡದ ಕೆಲವು ಭಾಗ ಕುಸಿತಗೊಂಡಿದ್ದು ಇದರಿಂದ ರಸ್ತೆ ಸಂಚಾರಕ್ಕೆ ಕೊಂಚ ಅಡಚಣೆಯಾಗಿದೆ. ಕಳೆದ ಬಾರಿ ಮಳೆಗಾಲದಲ್ಲೂ ಕೂಡ ಇದೇ ಭಾಗದಲ್ಲಿ ರಸ್ತೆ ಪಕ್ಕದ ಗುಡ್ಡ ಕುಸಿದಿತ್ತು. ಬಳಿಕ ಅಪಾಯಕಾರಿ ಸ್ಥಿತಿಯಲ್ಲಿದ್ದ ಗುಡ್ಡದ ಬದುಗಳಿಗೆ ರಿವಿಟ್ಮೆಂಟ್ ಮಾಡಲಾಗಿತ್ತು. ಸದ್ಯ ಗುತ್ತಿಗೆದಾರ ಐಆರ್ ಬಿ ಕಂಪೆನಿಯಿಂದ ಕುಸಿದ ಗುಡ್ಡದ ಮಣ್ಣು ತೆರವು ಕಾರ್ಯ ಆರಂಭವಾಗಿದೆ.

The post ಬೈಂದೂರು ಬಳಿ ಭಾರೀ ಗುಡ್ಡ ಕುಸಿತ: ತಪ್ಪಿದ ಅನಾಹುತ appeared first on News First Kannada.

Source: newsfirstlive.com

Source link