ಬೈಕ್​ನಲ್ಲಿ ಹಿಂಬಾಲಿಸಿ, ಹಾಸನ ನಗರಸಭೆಯ JDS ಸದಸ್ಯನ ಭೀಕರ ಹತ್ಯೆ, ಜಿಲ್ಲೆಯಲ್ಲಿ ಪೊಲೀಸ್ ವ್ಯವಸ್ಥೆ ಹದಗೆಟ್ಟಿದೆ ಎಂದು ಗರಂ ಆದ ರೇವಣ್ಣ | Miscreants killed city municipal member in hassan


ಬೈಕ್​ನಲ್ಲಿ ಹಿಂಬಾಲಿಸಿ, ಹಾಸನ ನಗರಸಭೆಯ JDS ಸದಸ್ಯನ ಭೀಕರ ಹತ್ಯೆ, ಜಿಲ್ಲೆಯಲ್ಲಿ ಪೊಲೀಸ್ ವ್ಯವಸ್ಥೆ ಹದಗೆಟ್ಟಿದೆ ಎಂದು ಗರಂ ಆದ ರೇವಣ್ಣ

ನಗರ ಸಭೆ ಸದಸ್ಯ ಪ್ರಶಾಂತ್

ಹಾಸನ ನಗರದ 16ನೇ ವಾರ್ಡ್ನಿಂದ ಜೆಡಿಎಸ್ ಅಭ್ಯರ್ಥಿಯಾಗಿ ಪ್ರಶಾಂತ್ ಆಯ್ಕೆಯಾಗಿದ್ದರು. ಇಂದು ಸಂಜೆ ಕೆಲಸ ಮುಗಿಸಿ ಮನೆಗೆ ತೆರಳೋ ವೇಳೆ ಅಟ್ಯಾಕ್ ಮಾಡಿ ಹತ್ಯೆ ಮಾಡಲಾಗಿದೆ. ಭೀಕರವಾಗಿ ಕೊಚ್ಚಿ ಹಂತಕರು ಕೊಲೆ ಮಾಡಿದ್ದಾರೆ.

ಹಾಸನ: ಹಾಸನ ನಗರ ಸಭೆ ಸದಸ್ಯ ಪ್ರಶಾಂತ್ ಭೀಕರ ಹತ್ಯೆ ನಡೆದಿದೆ. ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ಪ್ರಶಾಂತ್ನನ್ನು ಹಿಂಬಾಲಿಸಿ ಅಟ್ಟಾಡಿಸಿ ಕೊಲೆ ಮಾಡಲಾಗಿದೆ. ಹಾಸನ ನಗರದ ಲಕ್ಣ್ಮಿಪುರ ಬಡಾವಣೆಯಲ್ಲಿ ಹತ್ಯೆ ನಡೆದಿದೆ. ಹಾಸನ ನಗರದ 16ನೇ ವಾರ್ಡ್ನಿಂದ ಜೆಡಿಎಸ್ ಅಭ್ಯರ್ಥಿಯಾಗಿ ಪ್ರಶಾಂತ್ ಆಯ್ಕೆಯಾಗಿದ್ದರು. ಇಂದು ಸಂಜೆ ಕೆಲಸ ಮುಗಿಸಿ ಮನೆಗೆ ತೆರಳೋ ವೇಳೆ ಅಟ್ಯಾಕ್ ಮಾಡಿ ಹತ್ಯೆ ಮಾಡಲಾಗಿದೆ. ಭೀಕರವಾಗಿ ಕೊಚ್ಚಿ ಹಂತಕರು ಕೊಲೆ ಮಾಡಿದ್ದಾರೆ. ಹಾಸನ ಪೆನ್ಷನ್ ಮೊಹಲ್ಲಾ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಳೆದ 13 ವರ್ಷದಗಳ ಹಿಂದೆ ಇದೇ ರೀತಿ ಪ್ರಶಾಂತ್ ಅವರ ತಂದೆಯನ್ನೂ ಸಹ ಕೊಲೆ ಮಾಡಲಾಗಿತ್ತು. ಪ್ರಶಾಂತ್ ತಂದೆ ಡಾ.ರಾಜ್​ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾಗಿದ್ದರು. ಪ್ರಶಾಂತ್ ಕೂಡ ಡಾ.ರಾಜ್​ ಕುಮಾರ್ ಅಭಿಮಾನಿಗಳ ಸಂಘದಲ್ಲಿ ಆಕ್ಟಿವ್ ಆಗಿದ್ದರು. ಪ್ರಶಾಂತ್ ಕೊಲೆಗೆ ಹಳೇ ವೈಷಮ್ಯದ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಹಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಮೃತದೇಹ ಶಿಫ್ಟ್ ಮಾಡಲು ನಕಾರ ಎದ್ದಿದೆ. ಆಸ್ಪತ್ರೆ ಆವರಣಕ್ಕೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಆಗಮಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಶವಾಗಾರಕ್ಕೆ ಶವ ಕಳಿಸಲು ಬಿಡುವುದಿಲ್ಲ ಎಂದು ರೇವಣ್ಣ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ಅಂಬ್ಯುಲೆನ್ಸ್ ನಲ್ಲಿ ಮೃತದೇಹ ಇಟ್ಟುಕೊಂಡು ಪ್ರತಿಭಟನೆ ನಡೆಸಲಾಗುತ್ತಿದೆ.

TV9 Kannada


Leave a Reply

Your email address will not be published. Required fields are marked *