ಚಾಮರಾಜನಗರ: ಪಿಎಫ್​ಐ ಸಂಘಟನೆಯ ಕಾರ್ಯಕರ್ತರು ಮೃತ ವೃದ್ಧರೊಬ್ಬರ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ. ಕೊಳ್ಳೇಗಾಲ ತಾಲೂಕಿನ‌ ಆಲದಹಳ್ಳಿಯಲ್ಲಿ ಮೃತಪಟ್ಟಿದ್ದ ವೃದ್ಧನ ಶವವನ್ನು ಬೈಕ್​ನಲ್ಲಿ ಸಾಗಿಸಿ ಅಂತ್ಯಕ್ರಿಯೆ ಮಾಡಿದ್ದಾರೆ.

ಹೆಂಡತಿ- ಮಕ್ಕಳಿಲ್ಲದ ಮಾದೇವ(65) ಎಂಬವರು ನಿನ್ನೆ ತಮ್ಮ ಮನೆಯಲ್ಲಿ ಮೃತಪಟ್ಟಿದ್ದರು. ಅವರು ಕೊರೊನಾದಿಂದ  ಸಾವನ್ನಪ್ಪಿರಬಹುದು ಎಂದು ಶಂಕಿಸಿ ಗ್ರಾಮಸ್ಥರು ಅಂತ್ಯಕ್ರಿಯೆ ನಡೆಸಲು ಮುಂದೆ ಬರಲಿಲ್ಲ. ಮೃತರಿಗೆ ಕರೊನಾ ಪರೀಕ್ಷೆಯನ್ನು ನಡೆಸದೆಯೇ ಸೋಂಕು ತಗುಲಿರಬಹುದು ಎಂದು ಗ್ರಾಮಸ್ಥರು ನಿರ್ಧರಿಸಿ ಶವ ಸಂಸ್ಕಾರಕ್ಕೆ ಸಹಾಯ ಮಾಡಿಲ್ಲ.

ನಂತರ ಪಿಎಫ್​ಐ ಕಾರ್ಯಕರ್ತರು PPE  ಕಿಟ್​ ಧರಿಸಿ ಬಂದು ಮಣ್ಣು ಮಾಡಲು ಸ್ಮಶಾನ ತೋರಿಸಿ ಎಂದಾಗ ಯಾರೊಬ್ಬರು ಸಹ ಮುಂದೆ ಬರದೆ, ನಮ್ಮ ಊರಿನಲ್ಲಿ ಮಣ್ಣು ಮಾಡಬೇಡಿ ಅಂತ ಆಕ್ಷೇಪ ವ್ಯಕ್ತಪಡಿಸಿದ್ರು. ಮಾದೇವ ಅವರ ಜಮೀನಿನಲ್ಲೂ‌ ಮಣ್ಣು‌ ಮಾಡಲು ಅವಕಾಶ ನೀಡಲಿಲ್ಲ ಎನ್ನಲಾಗಿದೆ.

ಶವ ಸಾಗಿಸಲು ಯಾರೂ ಸಹ ತಮ್ಮ ವಾಹನವನ್ನೂ ನೀಡಲಿಲ್ಲ, ತಾಲೂಕು ಆಡಳಿತದಿಂದಲೂ ನೆರವು ದೊರೆಯಲಿಲ್ಲ ಎಂದು ಹೇಳಲಾಗಿದೆ. ಈ ಹಿನ್ನೆಲೆ ಕಾರ್ಯಕರ್ತರು ತಾವು ಹೋಗಿದ್ದ ದ್ವಿಚಕ್ರ ವಾಹನದಲ್ಲಿ ಒಂದು ಏಣಿ ಹಾಕಿ ಅದರ ಸಹಾಯದಿಂದ ಶವವನ್ನು ಸಾಗಿಸಿದ್ದಾರೆ. ವಿಚಾರ ತಿಳಿದ ನಂತರ ಗ್ರಾಮಾಂತರ ಠಾಣೆಯ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ, ಶವ ಹೂಳಲು ಗೋಮಾಳದಲ್ಲಿ ಜಾಗ‌ ತೊರಿಸಿದ್ರು. ಬಳಿಕ ಕಾರ್ಯಕರ್ತರು ಶವ ಸಂಸ್ಕಾರ ನೆರವೇರಿಸಿದ್ದಾರೆ.

The post ಬೈಕ್​​ನಲ್ಲಿ‌ ಶವ ಸಾಗಿಸಿ ವೃದ್ಧನ ಅಂತ್ಯಕ್ರಿಯೆ..ಮಾನವೀಯತೆ ಮೆರೆದ ಪಿಎಫ್‌ಐ ಕಾರ್ಯಕರ್ತರು appeared first on News First Kannada.

Source: newsfirstlive.com

Source link