ಬೈಕ್​​ ಮೇಲೆ ಕೊಂಡೊಯ್ಯುತ್ತಿದ್ದ ಪಟಾಕಿ ದಿಢೀರ್​​ ಸ್ಫೋಟ; ಸ್ಥಳದಲ್ಲೇ ತಂದೆ, ಮಗು ಸಾವು


ಬೈಕ್​ ಮೇಲೆ ಕೊಂಡೊಯ್ಯುತ್ತಿದ್ದ ಪಟಾಕಿ ದಿಢೀರ್​​ ಸ್ಫೋಟಗೊಂಡ ಪರಿಣಾಮ 7 ವರ್ಷದ ಮಗು ಜತೆ ತಂದೆ ಕೂಡ ಮೃತಪಟ್ಟಿರುವ ಘಟನೆ ಪುದುಚೆರಿಯಲ್ಲಿ ನಡೆದಿದೆ.

ತಂದೆ ಕಲೈನೇಸನ್ (32), ಪ್ರದೀಶ್​​ (7) ಎಂಬುವರು ಮೃತ ದುರ್ದೈವಿಗಳು. ಎರಡು ಬ್ಯಾಗ್​​ಗಳಲ್ಲಿ ಪಟಾಕಿ ತೆಗೆದುಕೊಂಡುತ್ತಿದ್ದಾಗ ವಿಲ್ಲುಪುರಂ ಜಿಲ್ಲೆಯ ಕೊಟ್ಟಕುಪ್ಪಮ್ ಬಳಿ ಈ ಸ್ಫೋಟ ಸಂಭವಿಸಿದೆ. ಇದರ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇನ್ನು, ಈ ಘಟನೆಯಿಂದ ಮತ್ತೆ ಮೂವರು ತೀವ್ರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಪಟಾಕಿ ಸ್ಫೋಟಗೊಂಡ ದೃಶ್ಯವೀಗ ಸಿಸಿಟಿವಿ ಕ್ಯಾಮಾರದಲ್ಲಿ ಸೆರೆಯಾಗಿದೆ.

News First Live Kannada


Leave a Reply

Your email address will not be published. Required fields are marked *