ವಿಜಯಪುರ: ಚಲಿಸುತ್ತಿರುವ ಬೈಕ್ ಮೇಲಿಂದ ಬಿದ್ದು ಆಶಾ ಕಾರ್ಯಕರ್ತೆಯೊಬ್ಬರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಾರನಾಳ ಕ್ರಾಸ್ ಬಳಿ ನಡೆದಿದೆ.
ಬೋರಮ್ಮ ಡೋರನಳ್ಳಿ (48) ಮೃತ ಆಶಾ ಕಾರ್ಯಕರ್ತೆ. ಮಡಿಕೇಶ್ವರ ಗ್ರಾಮದಿಂದ ತಾರನಾಳ ಕ್ರಾಸ್ ವರೆಗೆ ಅಪರಿಚಿತನ ಬೈಕ್ ನಲ್ಲಿ ಹೊರಟಿದ್ದ ವೇಳೆ ಬೈಕ್ ಮೇಲಿಂದ ಬಿದ್ದು ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಅಪಘಾತ ನಡೆದ ನಂತರ ಬೈಕ್ ಸವಾರ ಪರಾರಿಯಾಗಿದ್ದು ಪೊಲೀಸರು ಶೋಧ ಆರಂಭಿಸಿದ್ದಾರೆ.