ಬೈಕ್ ನ ಸೈಡ್ ಮಿರರ್​ನಲ್ಲಿ ತನ್ನ ಪ್ರತಿಬಿಂಬ ನೋಡಿದ ಕೋತಿಯೊಂದು ಅದರ ಹಿಂದೆ ಮತ್ತೊಂದು ಕೋತಿ ಹುಡುಕಿದ್ದು ಮೋಜಿನ ದೃಶ್ಯ! | A monkey search for non existing another monkey after watching its image in side mirror of a bike’ಪಾರ್ಕ್ ಮಾಡಿದ್ದ ಬೈಕೊಂದನ್ನು ಹತ್ತಿದ ಕೋತಿಗೆ ಸೈಡ್ ಮಿರರ್ ನಲ್ಲಿ ತನ್ನ ಪ್ರತಿಬಿಂಬ ಕಂಡು ಕನ್ನಡಿ ಹಿಂದೆ ತನ್ನಂಥ ಮತ್ತೊಂದು ಕೋತಿಯಿದೆ ಅಂತ ಭಾಸವಾಗಿ ಅದನ್ನು ಹುಡುಕಾಡುತ್ತಿದೆ. ಕಪಿಚೇಷ್ಟೆಯ ಈ ವಿಡಿಯೋ ವೈರಲ್ ಆಗಿದೆ.

TV9kannada Web Team


| Edited By: Arun Belly

Aug 25, 2022 | 5:22 PM
ದಾವಣಗೆರೆ: ಮಂಗ್ಯಾನ ಮೋರೆಯ ನೋಡು ನರಸಿಂಗಾನ ಮೀಸೆಯ ನೋಡು ನೋಡು ಅಂತ ಹಳೆಯ ಕನ್ನಡ ಸಿನಿಮಾ ಹಾಡು ನಮ್ಮಲ್ಲಿ ಎಷ್ಟು ಜನ ಕೇಳಿದ್ದಾರೋ ಗೊತ್ತಿಲ್ಲ ಮಾರಾಯ್ರೇ. ಆದರೆ ದಾವಣಗೆರೆಯ (Davanagere) ಮಂಗ್ಯಾ (monkey) ಮಾತ್ರ ಪಕ್ಕಾ ಕೇಳಿದೆ. ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಮೆದಗಿನಕೆರೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ (residential school) ಆವರಣದಲ್ಲಿ ಪಾರ್ಕ್ ಮಾಡಿದ್ದ ಬೈಕೊಂದನ್ನು ಹತ್ತಿದ ಕೋತಿಗೆ ಸೈಡ್ ಮಿರರ್ ನಲ್ಲಿ ತನ್ನ ಪ್ರತಿಬಿಂಬ ಕಂಡು ಕನ್ನಡಿ ಹಿಂದೆ ತನ್ನಂಥ ಮತ್ತೊಂದು ಕೋತಿಯಿದೆ ಅಂತ ಭಾಸವಾಗಿ ಅದನ್ನು ಹುಡುಕಾಡುತ್ತಿದೆ. ಕಪಿಚೇಷ್ಟೆಯ ಈ ವಿಡಿಯೋ ವೈರಲ್ ಆಗಿದೆ.

TV9 Kannada


Leave a Reply

Your email address will not be published.