ಉಡುಪಿ: ಬೈಕ್​ನಲ್ಲಿ ಹೋಗುವಾಗ ವಿದ್ಯುತ್ ತಂತಿ ಕುತ್ತಿಗೆಗೆ ಸಿಲುಕಿ ಸವಾರ ಸಾವನ್ನಪ್ಪಿರುವ ದಾರುಣ ಘಟನೆ ಬೈಂದೂರು ತಾಲೂಕು ಹೇರೂರು ಗ್ರಾಮದ ಹೇರೂರು-ಅರೆಹೊಳೆ ರಸ್ತೆಯಲ್ಲಿ ನಡೆದಿದೆ. ಈ ದುರ್ಘಟನೆಗೆ ವಿದ್ಯುತ್ ಗುತ್ತಿಗೆದಾರರ ನಿರ್ಲಕ್ಷ್ಯವೇ ಕಾರಣ ಅನ್ನೋ ಆರೋಪ ಕೇಳಿಬಂದಿದೆ.

ಆಲಗದ್ದೆ ಯರುಕೋಣಿ ನಿವಾಸಿ ಶೇಖರ್ ಶೆಟ್ಟಿ (68) ಮೃತಪಟ್ಟವರು. ಗಾಳಿ-ಮಳೆಗೆ ಬಿದ್ದಿದ್ದ ವಿದ್ಯುತ್ ತಂತಿಗಳ ದುರಸ್ತಿಕಾರ್ಯ ನಡೆಸುತ್ತಿದ್ದಾಗ ಈ ಅಚಾತುರ್ಯ ನಡೆದಿದೆ. ದುರಸ್ತಿ ಸಂದರ್ಭ ಯಾವುದೇ ಸೂಚನ ಫಲಕ ಅಳವಡಿಸದೇ ಗುತ್ತಿಗೆದಾರ ಕೆಲಸ ಮಾಡಿಸುತ್ತಿದ್ದ ಎನ್ನಲಾಗಿದೆ.

ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ತಂತಿ ತಂತಿ ಕೆಳಗೆ ಬಂದಿದೆ. ಇದೇ ವೇಳೆ ಬೈಕ್​ನಲ್ಲಿ ಸಾಗುತ್ತಿದ್ದ ಶೇಖರ್ ಶೆಟ್ಟಿ ಕುತ್ತಿಗೆಗೆ ತಂತಿ ಸಿಲುಕಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The post ಬೈಕ್ ಸವಾರನ ಜೀವ ತೆಗೆದ ವಿದ್ಯುತ್ ತಂತಿ; ಗುತ್ತಿಗೆದಾರನ ವಿರುದ್ಧ ಆಕ್ರೋಶ appeared first on News First Kannada.

Source: newsfirstlive.com

Source link