ಉಡುಪಿ: ಬೈಕ್ ಸ್ಕಿಡ್ ಆಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಉಡುಪಿಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಉದ್ಯಾವರ ನಿವಾಸಿ ಸರಿತಾ ಪಿಂಟೊ ಎಂದು ಗುರುತಿಸಲಾಗಿದ್ದು, ಅನಿಲ್ ಕಿರಣ್ ಪಿಂಟೊ ಅವರು ತನ್ನ ಹೋಂಡಾ ಆಕ್ಟೀವಾ ವಾಹನದಲ್ಲಿ ಪತ್ನಿ ಸರಿತಾ ಹಾಗೂ ಮಗ ಅಡ್ರೀಲ್ ನನ್ನು ಕರೆದುಕೊಂಡು ಹೋಗುತ್ತಿದ್ದರು.
ಈ ವೇಳೆಯಲ್ಲಿ ಬ್ರಹ್ಮಾವರ ಹೇರೂರು ಬಳಿ ಬೈಕ್ ಸ್ಕಿಡ್ ಆಗಿ ನೆಲಕ್ಕೆ ಬಿದ್ದಿದೆ. ಪರಿಣಾಮ ಸರಿತಾ ಅವರು ಗಂಭೀರವಾಗಿ ಗಾಯಗೊಂಡು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.