ಬೈಕ್ ಹಿಂದೆ ಗರ್ಲ್​ಫ್ರೆಂಡ್ ಕೂರಿಸಿ​ ಬೆಂಗಳೂರು-ಹೈದರಾಬಾದ್ ಹೆದ್ದಾರಿಯಲ್ಲಿ ರೇಸ್​ – Chikkaballapur Luxury bikes race on the highway Motorists fed up with the misadventure of youth Chikkaballapur news in kannada


ಬೆಂಗಳೂರು-ಹೈದರಾಬಾದ್ ಮಹಾ ನಗರಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಯುವಕರು ಐಷಾರಾಮಿ ಬೈಕ್​ಗಳಲ್ಲಿ ರೇಸ್ ಮಾಡುತ್ತಿದ್ದಾರೆ. ಅತಿವೇಗದ ಚಾಲಾಯಿಸುತ್ತಿರುವುದರಿಂದ ಇತರೆ ವಾಹನಸವಾರರಿಗೆ ಜೀವಭಯ ಕಾಡುತ್ತಿದೆ.

ಬೈಕ್ ಹಿಂದೆ ಗರ್ಲ್​ಫ್ರೆಂಡ್ ಕೂರಿಸಿ​ ಬೆಂಗಳೂರು-ಹೈದರಾಬಾದ್ ಹೆದ್ದಾರಿಯಲ್ಲಿ ರೇಸ್​

ಬೈಕ್ ಹಿಂದೆ ಗರ್ಲ್​ಫ್ರೆಂಡ್ ಕೂರಿಸಿ​ ಹೆದ್ದಾರಿಯಲ್ಲಿ ರೇಸ್

ಚಿಕ್ಕಬಳ್ಳಾಪುರ: ಬಿಸಿರಕ್ತದ ಯುವಕರು ತಮ್ಮತಮ್ಮ ಗೆಳತಿಯರನ್ನು ಬೈಕ್ ಹಿಂಬದಿ ಕೂರಿಸಿಕೊಂಡು ಬೆಂಗಳೂರು-ಹೈದರಾಬಾದ್ ಮಹಾ ನಗರಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ರೇಸ್ (Bike Race) ಮಾಡಿ ವೀಕೆಂಡ್​ ಮಸ್ತಿ ಮಾಡುತ್ತಿದ್ದಾರೆ. ಯುವಕರ ಈ ದುಸ್ಸಾಹಸಕ್ಕೆ ಇತರೆ ವಾಹನ ಸವಾರರು ಹೆದ್ದಾರಿಯಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಿದ್ದಾರೆ. ತಮಗೆಲ್ಲಾದರೂ ಬಂದು ಡಿಕ್ಕಿ ಹೊಡೆದರೆ ಏನಪ್ಪಾ ಗತಿ ಅಂತ ಒಂದಷ್ಟು ಮಂದಿ ಜೀವಭಯದಿಂದಲೇ ವಾಹನ ಚಲಾಯಿಸುತ್ತಿದ್ದಾರೆ. ಯುವಕರ ಇಂತಹ ದುಸ್ಸಾಹಸದಿಂದ ಬೇಸತ್ತಿರುವ ಸಾರ್ವಜನಿಕರು, ಹೆದ್ದಾರಿಯಲ್ಲಿ ಬೈಕ್​ ರೇಸ್​ಗಳಿಗೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

“ಹೆದ್ದಾರಿಯಲ್ಲಿ ಬೈಕ್​ಗಳನ್ನು ವೇಗವಾಗಿ ಚಲಾಯಿಸಲಾಗುತ್ತಿದೆ. ವಾರಂತ್ಯ ಬಂದರೆ ಸಾಕು ಹೆದ್ದಾರಿಯಲ್ಲಿ ದ್ವಿಚಕ್ರ ವಾಹನಗಳನ್ನು ಅತಿವೇಗವಾಗಿ ಚಲಾಯಿಸಲಾಗುತ್ತದೆ. ನಾನ ನೀನ ಎಂದು ಪೈಪೋಟಿಯಲ್ಲಿ ಬೈಕ್​ಗಳನ್ನು ಚಲಾಯಿಸಲಾಗುತ್ತಿದೆ. ಇದರಿಂದಾಗಿ ಇತರೆ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ” -ಮಂಜುನಾಥ್, ಸ್ಥಳಿಯ ವಾಹನ ಸವಾರ

TV9 Kannada


Leave a Reply

Your email address will not be published.