‘ಬೈರಾಗಿ’ ಸಿನಿಮಾ ಬಗ್ಗೆ ಹೊಸ ಅಪ್​ಡೇಟ್ ನೀಡಿದ ಶಿವಣ್ಣ | Shivarajkumar Starrer bairaagi movie Will not release as pan india Movieದೊಡ್ಡ ಬಜೆಟ್​ನ ಚಿತ್ರಗಳು ಬೇರೆ ಭಾಷೆಗೆ ಡಬ್ ಆಗಿ ತೆರೆಕಾಣುತ್ತಿದೆ. ‘ಬೈರಾಗಿ’ ಕೂಡ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಬಹುದು ಎಂಬುದು ಅನೇಕರ ಊಹೆ ಆಗಿತ್ತು. ಈ ಬಗ್ಗೆ ಶಿವಣ್ಣ ಅಪ್​ಡೇಟ್ ನೀಡಿದ್ದಾರೆ.

TV9kannada Web Team


| Edited By: Rajesh Duggumane

May 26, 2022 | 7:33 PM
ಶಿವರಾಜ್​ಕುಮಾರ್ ಅವರು (Shivarajkumar) ‘ಬೈರಾಗಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಸದ್ಯ ಪ್ಯಾನ್ ಇಂಡಿಯಾ ಟ್ರೆಂಡ್ ಜೋರಾಗಿದೆ. ದೊಡ್ಡ ಬಜೆಟ್​ನ ಚಿತ್ರಗಳು ಬೇರೆ ಭಾಷೆಗೆ ಡಬ್ ಆಗಿ ತೆರೆಕಾಣುತ್ತಿದೆ. ‘ಬೈರಾಗಿ’ (Bairagi Movie) ಕೂಡ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಬಹುದು ಎಂಬುದು ಅನೇಕರ ಊಹೆ ಆಗಿತ್ತು. ಈ ಬಗ್ಗೆ ಶಿವಣ್ಣ ಅಪ್​ಡೇಟ್ ನೀಡಿದ್ದಾರೆ. ‘ಇಡೀ ಸಿನಿಮಾದ ಕಥೆ ಹುಲಿ ವೇಷದ ಮೇಲೆ ಸಾಗುತ್ತದೆ. ಈ ಚಿತ್ರ ಕನ್ನಡದಲ್ಲಿ ಮಾತ್ರ ತೆರೆಗೆ ಬರುತ್ತಿದೆ. ಇದು ಪ್ಯಾನ್ ಇಂಡಿಯಾ ಅಲ್ಲ’ ಎಂದಿದ್ದಾರೆ ಶಿವಣ್ಣ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಖಾಸಗಿ ಹೋಟೆಲ್ ಒಂದರ ಉದ್ಘಾಟನೆ ಕಾರ್ಯಕ್ರಮಕ್ಕೆ ಶಿವಣ್ಣ ತೆರಳಿದ್ದರು. ಈ ವೇಳೆ ಅವರು ಈ ವಿಚಾರ ಹಂಚಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published. Required fields are marked *