ಬೈ ಎಲೆಕ್ಷನ್‌ ಗೆಲ್ಲೋಕೆ ಬಿಜೆಪಿ ‘ತ್ರಿಮೂರ್ತಿ’ ಸೂತ್ರ -ಏನದು..?

ಬೆಂಗಳೂರು: ಎರಡು ವಿಧಾನಸಭಾ ಕ್ಷೇತ್ರಗಳ ಬೈ ಎಲೆಕ್ಷನ್​ಗೆ​ ಅಖಾಡ ರೆಡಿಯಾಗಿದೆ. ಈ ಸಂಬಂಧ ಮಾಜಿ ಸಿಎಂ ಬಿ ಎಸ್​ ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಅಖಾಡ ಎದುರಿಸುವ ತಂತ್ರ ರೂಪಿಸಿಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಸಿಎಂ ಬಸವರಾಜ್​ ಬೊಮ್ಮಾಯಿ ಹಾಗೂ ಬಿಎಸ್‌ವೈ, ಈ ತ್ರಿಮೂರ್ತಿಗಳ ನೇತೃತ್ವದಲ್ಲಿ ಚುನಾವಣೆ ಎದುರಿಸಲು ತಂತ್ರ ರೂಪಿಸಲಾಗಿದೆ.

ಈ ಸಂಬಂಧ 3 ತಂಡಗಳನ್ನ ಸಿದ್ಧಪಡಿಸಿಕೊಂಡು ಬಿಜೆಪಿ ಚುನಾವಣೆ ಎದುರಿಸಲು ಸಜ್ಜಾಗಿದೆ. ಈ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ರ ಪಡೆ ಒಂದು ಕಡೆ ಗೆಲ್ಲಲು ತಂತ್ರ ರೂಪಿಸಿದ್ರೆ, ಮತ್ತೊಂದು ಕಡೆ ಬಿಎಸ್​ವೈ ಮಾರ್ಗದರ್ಶನದಲ್ಲಿ ಗೆಲುವಿನ ತಂತ್ರ ರೆಡಿಯಾಗಿದೆ. ಸಿಎಂ ಬೊಮ್ಮಾಯಿ ನೇತೃತ್ವದ ಕ್ಯಾಬಿನೆಟ್ ಸಚಿವರ ದಂಡು ಮತ್ತೊಂದೆಡೆ ಪ್ರಚಾರ ಮಾಡಲು ಸಿದ್ಧವಾಗಿದೆ.

ಈಗಾಗಲೇ ಸಿಂದಗಿ ಹಾಗೂ ಹಾನಗಲ್ ಎರಡು ಕ್ಷೇತ್ರಗಳಲ್ಲಿ ಪ್ರಮುಖ ಮೂರು ಪಕ್ಷಗಳು ಟಿಕೆಟ್​​ ಘೋಷಣೆ ಮಾಡಿದ್ದು, ಬಿಜೆಪಿಯಿಂದ ಸಿಂದಿಯಲ್ಲಿ ಅಶೋಕ್​​ ಮನಗೂಳಿ, ಹಾನಗಲ್​ನಲ್ಲಿ ಶಿವರಾಜ್​ ಸಜ್ಜನರ್​ ಅವರಿಗೆ ಟಿಕೆಟ್​​ ನೀಡಲಾಗಿದೆ. ಇಂದು ನಾಮಪತ್ರ ಸಲ್ಲಿಕೆ ಮಾಡಲು ಕೊನೆಯ ದಿನವಾಗಿರೋ ಕಾರಣ ಇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡ್ತಿದ್ದಾರೆ.

ಅಕ್ಟೋಬರ್ 11 ರಂದು ನಾಮಪತ್ರಗಲ ಪರಿಶೀಲನೆ ನಡೆಯಲಿದ್ದು, ಅಕ್ಟೋಬರ್ 13 ನಾಮಪತ್ರ ವಾಪಸ್​ ಪಡೆಯಲು ಅಂತಿಮ ದಿನವಾಗಿದೆ. ಸಿಎಂ ಬಿಎಸ್​​ ಯಡಿಯೂರಪ್ಪ ಅವರು ರಾಜೀನಾಮೆ ನೀಡಿ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರಿಗೆ ಉಪಚುನಾವಣೆ ಮೊದಲ ಅಗ್ನಿ ಪರೀಕ್ಷೆಯಾಗಿದೆ.

News First Live Kannada

Leave a comment

Your email address will not be published. Required fields are marked *