ಬೆಂಗಳೂರ: ಹೈಕಮಾಂಡ್ ನಾಯಕರ ಬುಲಾವ್ ಹಿನ್ನೆಲೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಇಂದು ದಿಢೀರ್ ದೆಹಲಿ ಪ್ರಯಾಣ ಬೆಳೆಸಿದ್ದು ಸಾಕಷ್ಟು ಕೂತಹಲ ಮೂಡಿಸಿದೆ.
ಹೈಕಮಾಂಡ್ ಬುಲಾವ್ ಇಲ್ಲ, ಅಧ್ಯಕ್ಷರು ದೆಹಲಿಯಲ್ಲಿಲ್ಲ. ಉಳಿದಿಬ್ಬರು ಬೆಂಗಳೂರಲ್ಲೇ ಇದ್ದರು. ಜಿಎಸ್ಟಿ ಸಭೆ ಇಲ್ಲ. ಆದ್ರೂ ಸಿಎಂ ಕರೆಯದೇ ದೆಹಲಿಗೆ ಹೋಗಿದ್ದು ಸಾಕಷ್ಟು ಪಿಸುಮಾತುಗಳಿಗೆ ಕಾರಣವಾಗಿತ್ತು. ಇಂದು ಅವರು ವಾಪಸ್ ಬಂದ ಬೆನ್ನಲ್ಲೇ ಜಗದೀಶ್ ಶೆಟ್ಟರ್ ಅವರ ಪಯಣ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಶೆಟ್ಟರ್ ಪ್ರವಾಸದ ಕುರಿತು ಗಮನಿಸೋದಾದ್ರೆ ಸದ್ಯಕ್ಕಂತೂ ಸಂಪುಟ ವಿಸ್ತರಣೆ, ಪುನಾರಚನೆ ಪ್ರಸ್ತಾವ ಇಲ್ಲ. ನಿಗಮ ಮಂಡಳಿಗಳ ಮರು ನೇಮಕದ ಬಗ್ಗೆಯೂ ಚರ್ಚೆಯೂ ಇಲ್ಲ. ಆದರೂ ಹೈಕಮಾಂಡ್ ಬುಲಾವ್ ನೀಡಿದೆ. ಇನ್ನು ಬೊಮ್ಮಾಯಿ ಸಿಎಂ ಗಾದಿ ಏರಿದ ನಂತರ ನನಗೆ ಸಚಿವ ಸ್ಥಾನ ಬೇಡ ಎಂದು ಹೇಳಿ ಕ್ಷೇತ್ರದಲ್ಲಿಯೇ ಉಳಿದುಕೊಂಡಿರುವ ಶೆಟ್ಟರ್ ಸಿಎಂ ಜೊತೆ ಮುನಿಸಿಕೊಂಡರಾ ಎಂಬ ಮಾತುಗಳ ಕೇಳಿ ಬಂದಿದ್ದವು.
ಸದ್ಯ ರಾಜ್ಯದಲ್ಲಿ ವಿಧಾನ ಪರಿಷತ್ ಚುನುವಣೆಗಳು ಘೋಷಣೆಯಾಗಿದ್ದು ಟಿಕೆಟ್ ಫೈನಲ್ ಮಾಡಲು ಬುಲಾವ್ ನೀಡಿದ್ರಾ? ಅಥವಾ ರಾಜ್ಯದಲ್ಲಿ ಗದ್ದಲ ಎಬ್ಬಿಸಿರುವ ಬಿಟ್ ಕಾಯಿನ್ ಪ್ರಕರಣ ಕುರಿತು ವಿವರಣೆ ಪಡೆಯಲು ಶೆಟ್ಟರ್ಗೆ ಕರೆದ್ರಾ ಎಂಬುದನ್ನ ಕಾದು ನೋಡಬೇಕಿದೆ.
The post ಬೊಮ್ಮಾಯಿ ವಾಪಸ್ಸಾದ ಬೆನ್ನಲ್ಲೇ ಶೆಟ್ಟರ್ಗೆ ಹೈಕಮಾಂಡ್ನಿಂದ ಬುಲಾವ್; ಯಾಕೆ? appeared first on News First Kannada.