ಉಡುಪಿ: ಚಂಡ ಮಾರುತದಿಂದ ಪ್ರಕ್ಷುಬ್ಧಗೊಂಡಿರುವ ಕಡಲಿನಲ್ಲಿ ದುರ್ಘಟನೆಯೊಂದು ನಡೆದು ಹೋಗಿದೆ. ಅಲಾಯನ್ಸ್ ಹೆಸರಿನ ಹಡಗು ಸಮುದ್ರದಲ್ಲಿ ಮುಗುಚಿಬಿದ್ದು 7 ಮಂದಿ ಕಣ್ಮರೆಯಾಗಿರುವ ಘಟನೆ ಮಂಗಳೂರು ಹೊರವಲಯದ ಸುರತ್ಕಲ್​ನಿಂದ 17 ನಾಟೆಕಲ್ ದೂರದಲ್ಲಿ ದುರ್ಘಟನೆ ನಡೆದಿದೆ.

ಇದೀಗ ಕಣ್ಮರೆಯಾಗಿರುವ 7 ಜನರಿಗಾಗಿ ಆಳ ಸಮುದ್ರದಲ್ಲಿ ಕೋಸ್ಟ್ ಗಾರ್ಡ್ ಸಿಬ್ಬಂದಿ ಹುಡುಕಾಟ ನಡೆಸುತ್ತಿದೆ. ಇನ್ನು ಬೋಟ್​ನಲ್ಲಿದ್ದ ಇಬ್ಬರು ಬರೋಬ್ಬರಿ 8 ಕಿಲೋ ಮೀಟರ್ ಈಜಿ ಜೀವವನ್ನ ಉಳಿಸಿಕೊಂಡಿದ್ದಾರೆ.

ಎಂಆರ್ ಪಿಎಲ್ ಕಚ್ಛಾ ತೈಲ ಹಡಗಿನ ಪೈಪ್ ಲೈನ್ ನಿರ್ವಹಣೆ ಮಾಡುತ್ತಿದ್ದ ಬೋಟ್ ಇದಾಗಿದೆ. ಮಂಗಳೂರಿನ ತೈಲ ಶುದ್ದೀಕರಣ ಘಟಕದಲ್ಲಿ ಗುತ್ತಿಗೆ ಆಧಾರದ ಮೇಲೆ ಬೋಟ್ ಕಾರ್ಯ ನಿರ್ವಹಿಸುತ್ತಿತ್ತು. ಎಂಆರ್​ಪಿಎಲ್​ಗೆ ತೈಲ ಹೊತ್ತು ತರುವ ಹಡಗಿನಲ್ಲಿ ನಿನ್ನೆ ಸಂಜೆ 9 ಕಾರ್ಮಿಕರು ಆಳ ಸಮುದ್ರಕ್ಕೆ ತೆರಳಿದ್ದರು. ಚಂಡಮಾರುತದ ಎಚ್ಚರಿಕೆ ಇದ್ದರೂ ಆಳ ಸಮುದ್ರಕ್ಕೆ ಬೋಟ್ ತೆರಳಿತ್ತು.

ಇದನ್ನೂ ಓದಿ: ಸೈಕ್ಲೋನ್​ನಿಂದ ಮುಗುಚಿದ ದೋಣಿ.. ಹಲವರು ಕಣ್ಮರೆ.. 8 ಗಂಟೆ ಈಜಿ ಇಬ್ಬರು ಪಾರು

The post ಬೋಟ್ ಮಗುಚಿ 7 ಮಂದಿ ಕಣ್ಮರೆ; ರಕ್ಷಣೆಗೆ ದೌಡಾಯಿಸಿದ ಕೋಸ್ಟ್​ಗಾರ್ಡ್​ ಸಿಬ್ಬಂದಿ appeared first on News First Kannada.

Source: newsfirstlive.com

Source link