ಬೌಲಿಂಗ್ ವಿಭಾಗಕ್ಕೆ ಹೊಸ ಟಚ್ ಕೊಡಲು ತಂಡದಿಂದ ಇಬ್ಬರನ್ನ ಕೈಬಿಡಲೇಬೇಕಂತೆ..!


ಟಿ20 ಫಾರ್ಮೆಟ್​​ನ ಟೀಮ್ ಇಂಡಿಯಾ ಬೌಲಿಂಗ್ ವಿಭಾಗಕ್ಕೆ ಹೊಸ ರೂಪಬೇಕಿದೆ. ಪ್ರಮುಖವಾಗಿ ಇಬ್ಬರು ಬೌಲರ್​ಗಳ ಸ್ಥಾನಕ್ಕೆ ಸರ್ಜರಿ ಮಾಡಬೇಕಿದೆ. ಅಷ್ಟೇ ಅಲ್ಲ, ಇದು ಸಕಾಲ ಕೂಡ. ಹಾಗಾದ್ರೆ, ಟಿ20 ಫಾರ್ಮೆಟ್​ನಿಂದ ದೂರ ಉಳಿಯಬೇಕಿರುವ ಆ ಇಬ್ಬರು ಯಾರು..? ಆ ಸ್ಥಾನಗಳಿಗೆ ಕಣ್ಣಿಟ್ಟಿರೋದ್ಯಾರು..?

ಟೀಮ್ ಇಂಡಿಯಾ ವಿಶ್ವ ಕ್ರಿಕೆಟ್​ನ ಶ್ರೇಷ್ಠ ತಂಡ. ಪ್ರತಿಯೊಂದು ಫಾರ್ಮೆಟ್​ನಲ್ಲಿ ಅಪಾಯಕಾರಿಯಾಗಿ ಕಾಣ್ತಿದೆ. ಟೆಸ್ಟ್​ ಫಾರ್ಮೆಟ್​ನಲ್ಲಿ ಶ್ರೇಷ್ಠ​ ಬೌಲಿಂಗ್ ಅಟ್ಯಾಕ್ ಹೊಂದಿರುವ ಪ್ರಖ್ಯಾತಿಯನ್ನೂ ಟೀಮ್ ಇಂಡಿಯಾ ಗಳಿಸಿದೆ. ಆದ್ರೆ, ವಿಶ್ವಕಪ್​​ ಪ್ರದರ್ಶನ ಟಿ20 ಫಾರ್ಮೆಟ್​ನ ಬೌಲಿಂಗ್ ಡಿಪಾರ್ಟ್​ಮೆಂಟ್​ ಪ್ರಶ್ನಿಸುವಂತೆ ಮಾಡಿದೆ. ಅಷ್ಟೇ ಅಲ್ಲ, ಇಬ್ಬರು ಎಕ್ಸ್​​ಪೀರಿಯನ್ಸ್​ ವೇಗಿಗಳ ಅವಶ್ಯಕತೆ, ಟಿ20 ಫಾರ್ಮೆಟ್​​ಗೆ ಇದ್ಯಾ ಎಂದು ಪ್ರಶ್ನಿಸುವಂತಿದೆ.

ಟಿ20 ಫಾರ್ಮೆಟ್​​​ಗಿಲ್ವಾ ಭುವನೇಶ್ವರ್, ಮಹಮ್ಮದ್ ಅವಶ್ಯಕತೆ..?
ಟೀಮ್ ಇಂಡಿಯಾದ ಸ್ಪೀಡ್​ಸ್ಟರ್ಸ್​​ ಮಹಮ್ಮದ್ ಶಮಿ ಮತ್ತು ಭುವನೇಶ್ವರ್ ಕುಮಾರ್, ಇಬ್ಬರೂ ಶ್ರೇಷ್ಠ ಬೌಲರ್​ಗಳು ಎಂಬುವುದರಲ್ಲಿ ಎರಡು ಮಾತಿಲ್ಲ. ಆದರೆ ಈ ಇಬ್ಬರ ಅವಶ್ಯಕತೆ ಟಿ20 ಫಾರ್ಮೆಟ್​ನಲ್ಲಿ ಎಷ್ಟಿದೆ ಅನ್ನೋದು ಪ್ರಶ್ನೆಯಾಗಿದೆ. ಯಾಕಂದ್ರೆ, ಟೆಸ್ಟ್​, ಏಕದಿನ ಫಾರ್ಮೆಟ್​ನಲ್ಲಿ ಶಮಿ ಅನುಭವಿಯೇ​ ಆಗಿದ್ದರೂ, ಟಿ20 ಫಾರ್ಮೆಟ್​ನಲ್ಲಿ ಹೇಳಿಕೊಳ್ಳುವಂತ ಪ್ರದರ್ಶನ ನೀಡಿಲ್ಲ. ಟಿ-20 ಎಂಬ ಫಾಸ್ಟ್ ಗೇಮ್​ನಲ್ಲಿ ಮೊದಲೆರಡು ಓವರ್​ಗಳ ಸ್ಥಿರತೆ ಕಾಯ್ದುಕೊಳ್ಳಲು 31ರ ಶಮಿಗೆ ಹರಸಾಹಸವನ್ನೇ ಪಡ್ತಿದ್ದಾರೆ.

ಮಹಮ್ಮದ್​ ಶಮಿಗೆ ಮಾತ್ರವೇ ಅಲ್ಲ, ಸ್ವಿಂಗ್ ಮಾಸ್ಟರ್​ ಭುವನೇಶ್ವರ್​​​ ಕುಮಾರ್​​ಗೂ ಅನ್ವಯವಾಗುತ್ತದೆ. ಹೀಗಾಗಿ ಈ ಇಬ್ಬರ ಟಿ20 ತಂಡದ ಸ್ಥಾನ ಸಂಕಷ್ಟಕ್ಕೆ ಸಿಲುಕಿದೆ. ಇನ್ನು ಈ ಇಬ್ಬರ ಸೇವೆ ಏಕದಿನ ಕ್ರಿಕೆಟ್ ಆ್ಯಂಡ್ ಟೆಸ್ಟ್​ಗೆ ಸೀಮಿತಗೊಂಡರೆ ಬೆಸ್ಟ್​ ಎಂಬ ವಿಶ್ಲೇಷಣೆಗಳು, ಕ್ರಿಕೆಟ್ ವಲಯದಲ್ಲಿ ಕೇಳಿ ಬರ್ತಿವೆ.

ಇದು ಹೊಸ ಆಟಗಾರರನ್ನ ಕಾಣುವ ಸಮಯ..!
‘T20 ಫಾರ್ಮೆಟ್​ನಲ್ಲಿ ಕೆಲ ಹೊಸ ಆಟಗಾರರನ್ನ ಕಾಣುವ ಸಮಯ ಬಂದಿದೆ. ಹೀಗಾಗಿ ಈ ಆಟಗಾರರು, ಅವರಿಗೆ ಸೂಕ್ತವಾಗೋ ಫಾರ್ಮೆಟ್​ನಲ್ಲಿ ಆಡಿದರೆ ಉತ್ತಮ. ಇದರಿಂದಾಗಿ T20 ಫಾರ್ಮೆಟ್​​ನ ಮೌಲ್ಯ ಹೊಂದಿರುವ ಆಟಗಾರರು ಸೇರ್ಪಡೆಗೊಳ್ಳಬಹುದಾಗಿದೆ. ಈ ವಿಚಾರದಲ್ಲಿ ನಾನು ಮೊಹಮ್ಮದ್ ಶಮಿ ಹಾಗೂ ಭುವನೇಶ್ವರ್​ ಬಗ್ಗೆಯೇ ಯೋಚಿಸುತ್ತಿದ್ದೇನೆ.’
ಸಂಜಯ್ ಮಂಜ್ರೇಕರ್​, ಮಾಜಿ ಕ್ರಿಕೆಟರ್

ಸಂಜಯ್​ ಮಂಜ್ರೇಕರ್ ಹೇಳಿದಂತೆ ಮೊಹಮ್ಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್, ಟಿ20 ಫಾರ್ಮೆಟ್​ ಬದಲಿಗೆ ​ಏಕದಿನ, ಟೆಸ್ಟ್​ ಫಾರ್ಮೆಟ್​ಗೆ ಸೀಮಿತಗೊಳ್ಳುವುದು ಬೆಸ್ಟ್​ ಆಗಿದೆ. ಯಾಕಂದ್ರೆ ಇದು ಟೀಮ್ ಇಂಡಿಯಾದ ಭವಿಷ್ಯದ ದೃಷ್ಟಿಯಿಂದ ಹಾಗೂ ಬೆಳವಣಿಗೆ ದೃಷ್ಟಿಯಿಂದ ಉತ್ತಮವೇ ಆಗಿದೆ.

ಶಮಿ, ಭುವಿ ಸ್ಥಾನ ತುಂಬಲು ಕಾಯ್ತಿದ್ದಾರೆ ಯಂಗ್ ಸ್ಟಾರ್ಸ್​..!
ಅನುಭವಿಗಳಾದ ಮೊಹಮ್ಮದ್ ಶಮಿ, ಭುವನೇಶ್ವರ್ ಸ್ಥಾನವನ್ನ ತುಂಬಲು ಬಹುತೇಕ ಮಂದಿ ಸಾಲುಗಟ್ಟಿ ನಿಂತಿದ್ದಾರೆ. ಈ ಪೈಕಿ 13 ಮಂದಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ ಅನ್ನೋದು ವಿಶೇಷ. ಅದರಲ್ಲೂ ಪ್ರಮುಖವಾಗಿ ದೀಪಕ್ ಚಹರ್, ಶಾರ್ದೂಲ್ ಠಾಕೂರ್, ಮಹಮ್ಮದ್ ಸಿರಾಜ್, ನವದೀಪ್ ಸೈನಿ, ನಟರಾಜನ್, ಉಮೇಶ್ ಯಾದವ್ ಒಂದೆಡೆಯಾದ್ರೆ ಮತ್ತೊಂದೆಡೆ ಐಪಿಎಲ್​ನಲ್ಲಿ ಮಿಂಚಿರುವ ಹರ್ಷಲ್ ಪಟೇಲ್, ಉಮ್ರಾನ್ ಮಲ್ಲಿಕ್, ಅವೇಶ್​ ಖಾನ್, ಶಿವಂ ಮಾವಿ, ಕಮಲೇಶ್​​​​​​ ನಾಗರಕೋಟಿ, ಹರ್ಷ್​ದೀಪ್​ ಸಿಂಗ್, ಚೇತನ್ ಸಕಾರಿಯಾ ಇದ್ದಾರೆ. ಈ ಎಲ್ಲಾ ವೇಗಿಗಳು ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಸಿಕ್ಕ ಅವಕಾಶದಲ್ಲಿ ತಾವೇಷ್ಟು ಪರಿಣಾಮಕಾರಿ ಬೌಲರ್​ಗಳು ಅನ್ನೋದನ್ನ, ಫ್ರೂವ್ ಮಾಡಿದ್ದಾರೆ.

News First Live Kannada


Leave a Reply

Your email address will not be published. Required fields are marked *