ಬ್ಯಾಂಕಾಕ್​ನಲ್ಲಿ ಅತಿ ಎತ್ತರದ ಬುದ್ಧನ ಮೂರ್ತಿ ನಿರ್ಮಾಣ  ಕಾಮಗಾರಿ ಕೊನೆಯ ಹಂತಕ್ಕೆ ತಲುಪಿದೆ.

ಥೈಲ್ಯಾಂಡ್​ನ ದೇವಾಲಯದ ಭಾಗವಾಗಿ 69 ಮೀಟರ್​(230 ಅಡಿ) ಎತ್ತರದ ಈ ಪ್ರತಿಮೆಯನ್ನ ನಿರ್ಮಾಣ ಮಾಡಲಾಗಿದೆ. ಬ್ಯಾಂಕಾಕ್​​ನಾದ್ಯಂತ ಎಲ್ಲಿಂದ ನೋಡಿದ್ರೂ ಈ ಮೂರ್ತಿ ಕಾಣುತ್ತದೆ. ಇಷ್ಟು ದೈತ್ಯ ಸ್ಯಾಚ್ಯೂ ನಿರ್ಮಾಣ ಬಹುತೇಕ ಮುಕ್ತಾಯವಾಗಿದೆ. ಆದ್ರೆ ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ 2022ಕ್ಕೆ ಲೋಕಾರ್ಪಣೆ ಆಗಲಿದೆ.

ಬ್ಯಾಂಕಾಕ್ ಹೊರವಲಯದಲ್ಲಿರುವ ಈ ರಾಯಲ್ ವಾಟ್ ಪಕ್ನಮ್ ಫಾಸಿ ಚರೋಯೆನ್ ದೇವಾಲಯ 1610ರ ಕಾಲದ್ದು. ಇದು ಚಾವೊ ಫ್ರೇಯಾ ನದಿಯಿಂದ ಹರಿಯುವ ಕಾಲುವೆಗಳಿಂದ ರಚಿಸಲ್ಪಟ್ಟ ದ್ವೀಪದಲ್ಲಿದೆ. ಸುಮಾರು 20 ಅಂತಸ್ತಿನ ಕಟ್ಟಡದಷ್ಟು ಎತ್ತರವಿರುವ ಈ ಪ್ರತಿಮೆಯ ಕಾಮಗಾರಿ 2017ರಲ್ಲಿ ಪ್ರಾರಂಭವಾಗಿದ್ದು, ಈ ವರ್ಷ ಪೂರ್ಣಗೊಳ್ಳಬೇಕು. ಆದರೆ ಕೊರೊನಾ  ಸಾಂಕ್ರಾಮಿಕದ ಅಧಿಕೃತ ತೆರೆಯುವಿಕೆಯನ್ನು 2022 ಕ್ಕೆ ಹಿಂದಕ್ಕೆ ತಳ್ಳಬಹುದು ಎಂದು ದೇವಾಲಯದ ವಕ್ತಾರ ಪಿಸಾನ್ ಸಾಂಕಪಿನಿಜ್ ಹೇಳಿದ್ದಾರೆ.

ತಾಮ್ರದ ಪ್ರತಿಮೆ, ಚಿನ್ನದ ಲೇಪನ
ಕಮಲದ ಹೂವಿನ ಮೇಲೆ ಬುದ್ಧ ಕುಳಿತಿರುವಂತೆ ಈ ಮೂರ್ತಿಯ ವಿನ್ಯಾಸ ಮಾಡಲಾಗಿದೆ. ತಾಮ್ರದಿಂದ ಪ್ರತಿಮೆ ನಿರ್ಮಿಸಿ ಅದರ ಮೇಲೆ ಚಿನ್ನದ ಲೇಪನ ಮಾಡಲಾಗಿದೆ. ಇದರ ಭಾಗಗಳನ್ನ ಚೀನಾದಲ್ಲಿ ಉತ್ಪಾದನೆ ಮಾಡಲಾಗಿದ್ದು, ಬಳಿಕ ಥೈಲ್ಯಾಂಡ್​ಗೆ ತಂದು ಜೋಡಿಸಲಾಗಿದೆ. ರಾಜಧಾನಿ ಬ್ಯಾಂಕಾಕ್​ನಲ್ಲಿ ವ್ಯಾಪಿಸಿರುವ ರೈಲು ಮಾರ್ಗದ ಎಲ್ಲಾ ಭಾಗಗಳಿಂದ ಇದು ಗೋಚರಿಸುತ್ತದೆ ಅಂತ ಪಿಸಾನ್ ಹೇಳಿದ್ದಾರೆ.

16 ಮಿಲಿಯನ್ ಡಾಲರ್ ಮೌಲ್ಯದ ದೇಣಿಗೆಗಳನ್ನು ಬಳಸಿಕೊಂಡು ಈ ಮೂರ್ತಿ ನಿರ್ಮಿಸಲಾಗಿದೆ. ಬೌದ್ಧಧರ್ಮವನ್ನು ಗೌರವಿಸಲು ಮತ್ತು ಈ ದೇವಾಲಯವನ್ನು ಒಂದು ಪ್ರಸಿದ್ಧ ಧ್ಯಾನ ಕೇಂದ್ರವಾಗಿ  ಅಭಿವೃದ್ಧಿಪಡಿಸಲು ಸಹಾಯ ಮಾಡಿದ ಮಾಜಿ ಮಠಾಧೀಶ ಲುವಾಂಗ್ ಪು ಸೋಧ್ ಕ್ಯಾಂಡಸಾರೊ ಅವರಿಗೆ ಗೌರವ ಸಲ್ಲಿಸಲು ದೇಗುಲವು, ಪ್ರತಿಮೆ ನಿರ್ಮಿಸಲು ನಿರ್ಧರಿಸಿತು ಅಂತ ತಿಳಿಸಿದ್ದಾರೆ.

 

The post ಬ್ಯಾಂಕಾಕ್​ನಲ್ಲಿ ಎಲ್ಲಿಂದ ನೋಡಿದ್ರೂ ಕಾಣುತ್ತೆ ಈ ಅತಿ ಎತ್ತರದ ಬುದ್ಧನ ಮೂರ್ತಿ appeared first on News First Kannada.

Source: newsfirstlive.com

Source link