ನವದೆಹಲಿ: ದೇಶದ ವಿವಿಧ ಬ್ಯಾಂಕುಗಳಿಗೆ ಕನ್ನಹಾಕಿ ವಿದೇಶಕ್ಕೆ ಪಲಾಯನಗೈದಿರುವ ಮೋಸ್ಟ್​​ ವಾಂಟೆಡ್​ ಉದ್ಯಮಿಗಳಾದ ವಿಜಯ್ ಮಲ್ಯಾ, ನೀರವ್ ಮೋದಿ ಹಾಗೂ ಮೆಹುಲ್​ ಚೋಕ್ಸಿ ಪ್ರಕರಣದ ವಿಚಾರಣೆ ನಡೆಸ್ತಿರುವ ಜಾರಿ ನಿರ್ದೇನಾಲಯ ಇದುವರೆಗೆ ಮೂವರಿಂದ ಬರೋಬ್ಬರಿ 18,170 ಕೋಟಿ ಮೌಲ್ಯದ ಆಸ್ತಿಯನ್ನ ಜಪ್ತಿ ಮಾಡಿತ್ತು. ಜಪ್ತಿ ಮಾಡಿರುವ ಒಟ್ಟು ಆಸ್ತಿಯ ಮೌಲ್ಯವು ವಿವಿಧ ಬ್ಯಾಂಕ್​ಗಳು ಅನುಭವಿಸಿದ ನಷ್ಟದಲ್ಲಿ ಶೇಕಡಾ 80 ರಷ್ಟು ಮಾತ್ರವಾಗಿದೆ.

ಇದೀಗ ಜಾರಿ ನಿರ್ದೇಶನಾಲಯ ಜಪ್ತಿ ಮಾಡಿರುವ ಆಸ್ತಿಗಳಲ್ಲಿ ಶೇಕಡಾ ಅರ್ಧದಷ್ಟು ಕೇಂದ್ರ ಹಾಗೂ ವಿವಿಧ ಬ್ಯಾಂಕ್​​ಗಳಿಗೆ ವರ್ಗಾವಣೆ ಮಾಡಿದೆ. ವಿಜಯ್​ ಮಲ್ಯ, ಮೆಹುಲ್ ಚೋಕ್ಸಿ, ನೀರವ್ ಮೋದಿಗೆ ಸೇರಿದ 9,371.17 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನ ಕೇಂದ್ರ ಸರ್ಕಾರಕ್ಕೆ ಹಾಗೂ ಬ್ಯಾಂಕ್​ಗಳಿಗೆ ಜಾರಿ ನಿರ್ದೇಶನಾಲಯ ಹಸ್ತಾಂತರ ಮಾಡಿದೆ. ಈ ಮೂವರು ಉದ್ಯಮಿಗಳು ಒಟ್ಟು 22,585.83 ಕೋಟಿ ಹಣವನ್ನ ವಂಚಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ಅದರಲ್ಲಿ 18,170 ಕೋಟಿ ಮೌಲ್ಯದ ಆಸ್ತಿಯನ್ನ ಅಧಿಕಾರಿಗಳು ಸೀಜ್ ಮಾಡಿದ್ದರು.

ಇಂದು 8,441 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನ ಬ್ಯಾಂಕ್​ಗಳಿಗೆ ವರ್ಗಾಯಿಸಲಾಗಿದೆ. ಇನ್ನುಳಿದ 800 ಕೋಟಿಯನ್ನ ಜೂನ್​ 25 ರಂದು ವರ್ಗಾಯಿಸುವ ಸಾಧ್ಯತೆ ಇದೆ. ಪಿಎಂಎಲ್​​ಎ ಕೋರ್ಟ್​​ ಆದೇಶದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆಸ್ತಿಯನ್ನ ಇಂದು ವರ್ಗಾಯಿಸಿದೆ. ಇಲ್ಲಿ ಉದ್ಯಮಿಗಳ ಆಸ್ತಿ ಜೊತೆಗೆ ಷೇರುಗಳನ್ನು ಸಹ ಟ್ರಾನ್ಸ್​​ಫರ್​ ಮಾಡಿದೆ. ಅವುಗಳ ಮೌಲ್ಯ ಸುಮಾರು 6,600 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ.

The post ಬ್ಯಾಂಕ್​​ಗಳಿಗೆ ಕೊಂಚ ನಿರಾಳ.. ಮಲ್ಯ, ನೀರವ್, ಚೋಕ್ಸಿಗೆ ಸೇರಿದ ₹9,000 ಕೋಟಿ ಆಸ್ತಿ ಹಸ್ತಾಂತರ appeared first on News First Kannada.

Source: newsfirstlive.com

Source link