ರಶ್ಮಿಕಾ ಮಂದಣ್ಣ ಸ್ಟಾರ್​ ಚೇಂಜ್​ ಆಯ್ತು.. ರಶ್ಮಿಕಾ ಲೆವೆಲ್ಲೇ ಬೇರೆ, ಅವರ ಸಿನಿಮಾಗಳೇ ಬೇರೆ.. ಸಣ್ಣ ಹೀರೋಗಳ ಜೊತೆ ಇನ್ಮುಂದೆ ರಶ್ಮಿಕಾ ನಟಿಸೊಲ್ಲ, ಚಿಕ್ಕಪುಟ್ಟವರಿಗೆಲ್ಲ ರಶ್ಮಿಕಾ ಕಾಲ್ ಶೀಟ್​​​​ ಸಿಗೊಲ್ಲ ಅಂತ ಸಾಕಷ್ಟು ಮಂದಿ ಮಾತನಾಡಿಕೊಂಡಿದ್ದೇ ಮಾತನಾಡಿಕೊಂಡಿದ್ದು.. ಆದ್ರೆ ಈ ರೀತಿ ಮಾತನಾಡಿಕೊಳ್ಳೋರಿಗೆಲ್ಲ ನ್ಯಾಷನಲ್ ಕ್ರಶ್​​ ಶಾಕಿಂಗ್​ ನ್ಯೂಸ್​ ಕೊಟ್ಟಿದ್ದಾರೆ.

ರಶ್ಮಿಕಾ ಮಂದಣ್ಣ.. ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್​ ಸಿನಿ ಲೋಕದಲ್ಲೂ ಬ್ಯುಸಿಯೋ ಬ್ಯುಸಿ. ತನ್ನ ಸಿನಿಮಾಗಳಿಗಾಗಿ ಹೈದ್ರಾಬಾದ್​​ನಲ್ಲಿ ಮುಂಬೈನಲ್ಲಿ ಮನೆ ಕೊಂಡುಕೊಂಡು ಸಿನಿಮಾ ಮಾಡುವಷ್ಟು ಯಶಸ್ಸು ಗಳಿಸಿರುವ ನಟಿಮಣಿ.. ರಶ್ಮಿಕಾ ಎಲ್ಲಿರ್ತಾರೋ ಅಲ್ಲಿ ಲಕ್ಕು ಪ್ರೇಕ್ಷಕರಿಗೆ ಕಿಕ್ಕು ಎನ್ನುವಂತಾಗಿದೆ.. ಬಿಟೌನ್​​ನಿಂದ ಅಮಿತಾಭ್ ಬಚ್ಚನ್ ಜೊತೆ ಗುಡ್​​​ಡೇ ಸಿನಿಮಾದಲ್ಲಿ ಬ್ಯೂಸಿಯಾಗಿರೋ ನ್ಯಾಷನಲ್ ಕ್ರಶ್ ಥಟ್ಟನೇ ಟಾಲಿವುಡ್​​ನಲ್ಲಿ ಪ್ರತ್ಯಕ್ಷವಾಗಿದ್ದಾರೆ.. ಅದು ಹೊಸ ಸಿನಿಮಾದ ಮೂಲಕ..

 

ರಶ್ಮಿಕಾ ಸ್ಟಾರ್​ ಚೇಂಜ್​ ಆಯ್ತು, ಇನ್ನು ಅವರ ಲೆವೆಲ್ಲೇ ಬೇರೆ, ಸಣ್ಣ ಹೀರೋಗಳ ಜೊತೆ ಅವರೆಲ್ಲ ನಟಿಸೊಲ್ಲ, ನಮಗೆಲ್ಲಾ ಸಿಗೊಲ್ಲ ಅಂತ ಸಾಕಷ್ಟು ಮಂದಿ ನಿರ್ದೇಶಕರು ಹಾಗೂ ನಿರ್ಮಾಪಕರು ಮಾತಾಡುವಾಗಲೇ, ಅವರಿಗೆಲ್ಲಾ ಶಾಕಿಂಗ್​ ನ್ಯೂಸ್​ ಕೊಟ್ಟಿದ್ದಾರೆ. ತೆಲುಗಿನ ಹೀರೋ ಶರ್ವಾನಂದ್​ ಜೊತೆ ‘ಆಡವಾಳು ಮೀಕು ಜೋಹಾರ್ಲು’ ಸಿನಿಮಾದ ಮೂಲಕ ನಾನು ಎಲ್ಲರ ಜೊತೆ ಸಿನಿಮಾ ಮಾಡುತ್ತೇನೆ ಆದ್ರೆ ಕಥೆ ಮುಖ್ಯ ಪಾತ್ರ ಪ್ರಾಮುಖ್ಯ ಎಂದು ಸಾರಿದ್ದಾರೆ..

ನಾಯಕ ಶರ್ವಾನಂದ್​ ಕೂಡ ತೆಲುಗು ಸಿನಿಮಾ ರಂಗಕ್ಕೆ ಹೊಸಬರೇನು ಅಲ್ಲ. ಪ್ರಭಾಸ್​ ಜೊತೆ ಸಿನಿ ರಂಗಕ್ಕೆ ಕಾಲಿಟ್ಟ ಶರ್ವಾನಂದ್​ ಮಾಡಿದ ಮೊದಲ ಸಿನಿಮಾ ‘ಗಮ್ಯಂ’. ಮೊದಲ ಸಿನಿಮಾಲ್ಲೇ ಶರ್ವಾನಂದ್​ ತೆಲುಗು ಪ್ರೇಕ್ಷಕ ಮನಗೆದ್ದಿದ್ದರು. ಅಂದಹಾಗೆ ‘ಗಮ್ಯಂ’ ಸಿನಿಮಾ ಕನ್ನಡದಲ್ಲಿ ‘ಸವಾರಿ’ ಹೆಸರಿನಲ್ಲಿ ಬಿಡುಗಡೆಯಾಗಿತ್ತು. ಈಗ ಶರ್ವಾನಂದ್ ಜೊತೆ ರಶ್ಮಿಕಾ ಸ್ಕ್ರೀನ್ ಶೇರ್ ಮಾಡಲಿದ್ದಾರೆ..

ಇನ್ನು ರಶ್ಮಿಕಾ ಮತ್ತು ಶರ್ವಾನಂದ್​ ನಟಿಸುತ್ತಿರೋ ‘ಆಡವಾಳು ಮೀಕು ಜೋಹಾರ್ಲು’ ಹೆಸರಿನಲ್ಲಿ ಈ ಹಿಂದೆ ಮೆಗಾಸ್ಟಾರ್​ ಚಿರಂಜೀವಿ ಸಿನಿಮಾ ಮಾಡಿ ಗೆದ್ದು ಬೀಗಿದ್ದರು. ಅದೇ ಹೆಸರಿನಲ್ಲಿ ಬಿಡುಗಡೆ ಯಾಗುತ್ತಿರೋ ಈ ಹೊಸ ಹೆಸರಿನಲ್ಲಿ ಶರ್ವಾನಂದ್​ ಹಾಗೂ ರಶ್ಮಿಕಾ ಜೋಡಿ ಮೋಡಿ ಮಾಡುತ್ತಾ ಕಾದು ನೋಡಬೇಕು.

The post ಬ್ಯಾಕ್​ ಟು ಟಾಲಿವುಡ್​; ತೆಲುಗಿನಲ್ಲಿ ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ಮುಂದಿನ ಸಿನಿಮಾ appeared first on News First Kannada.

Source: newsfirstlive.com

Source link