ಬೆಂಗಳೂರು: ನಟಿ ಮೇಘನಾ ರಾಜ್ ಸರ್ಜಾ ತಾಯಿಯಾದ ಬಳಿಕ ಮೊದಲ ಬಾರಿಗೆ ಕ್ಯಾಮೆರಾ ಫೇಸ್ ಮಾಡಿರುವ ಸಂತಸದ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಕ್ಯಾಮೆರಾ ಮುಂದೆ ಸ್ಕ್ರಿಪ್ಟ್ ಓದುತ್ತಿರುವ ಫೋಟೋ ಶೇರ್ ಮಾಡಿಕೊಂಡಿರುವ ಮೇಘನಾ ಸರ್ಜಾಗೆ ಆಪ್ತರು ಸೇರಿದಂತೆ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ.

ಮೇಘನಾ ಸರ್ಜಾ ತಾಯಿಯಾದ ಬಳಿಕ ಶೀಘ್ರದಲ್ಲೇ ಬಣ್ಣದ ಲೋಕಕ್ಕೆ ಹಿಂದಿರುಗುವ ಸುಳಿವನ್ನು ಕೆಲ ದಿನಗಳ ಹಿಂದೆಯೇ ನೀಡಿದ್ದರು. ಇದೀಗ ಕ್ಯಾಮೆರಾ ಫೇಸ್ ಮಾಡಿ, ಮತ್ತೆ ಹಳೆಯ ಜೀವನದ ಲಯಕ್ಕೆ ಮರಳುತ್ತಿದ್ದಾರೆ. ಇವತ್ತು ಜೂನಿಯರ್ ಚಿರುಗೆ ಒಂಬತ್ತು ತಿಂಗಳು. ವರ್ಷದ ಬಳಿಕ ಕ್ಯಾಮೆರಾ ಫೇಸ್ ಮಾಡುತ್ತಿದ್ದೇನೆ ಎಂದು ಬರೆದು ಹಾರ್ಟ್ ಎಮೋಜಿ ಹಾಕಿ, ಬ್ಯಾಕ್ ಟು ಬೇಸಿಕ್ಸ್ ಎಂದು ಹ್ಯಾಶ್ ಟ್ಯಾಗ್ ಹಾಕಿದ್ದಾರೆ. ಇದನ್ನೂ ಓದಿ: ಅಪ್ಪ ಚಿರುವನ್ನು ಗುರುತಿಸುತ್ತಿರೋ ನನ್ನ ಮಗನನ್ನು ನೋಡಲು ಹೆಮ್ಮೆಯಾಗ್ತಿದೆ: ಮೇಘನಾ

 

View this post on Instagram

 

A post shared by Meghana Raj Sarja (@megsraj)

ಇನ್ನು ಮೇಘನಾ ಸರ್ಜಾ ಪೋಸ್ಟ್ ಗೆ ರಾಗಿಣಿ ಪ್ರಜ್ವಲ್, ಸಂಯುಕ್ತಾ ಹೊರನಾಡ, ಸಿಂಪಲ್ ಸುನಿ ಸೇರಿದಂತೆ ತಮ್ಮ ಶುಭ ಹಾರೈಕೆಗಳನ್ನು ತಿಳಿಸಿದ್ದಾರೆ. ಪತಿ ಚಿರಂಜೀವಿ ಸರ್ಜಾ ನಿಧನದ ಬಳಿಕ ಮೇಘನಾ ರಾಜ್ ಮೊಗದಲ್ಲಿ ಜೂನಿಯರ್ ಚಿರು ಮಂದಹಾಸ ತಂದಿದ್ದಾನೆ. ಇದನ್ನೂ ಓದಿ: ಮೇಘನಾ, ಜೂ. ಚಿರುವಿಗೆ ಆಂಜನೇಯನ ದರ್ಶನ ಮಾಡಿಸಿದ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ!

The post ಬ್ಯಾಕ್ ಟು ಬೇಸಿಕ್ಸ್ – ಮೇಘನಾ ಪೋಸ್ಟ್​ಗೆ ಹಿರಿ ಹಿರಿ ಹಿಗ್ಗಿದ ಫ್ಯಾನ್ಸ್ appeared first on Public TV.

Source: publictv.in

Source link