ಚೆನ್ನೈ: ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದ ಸೆಲೆಬ್ರಿಟಿ ಜೋಡಿ ಭಾರತೀಯ ಬ್ಯಾಡ್ಮಿಂಟನ್ ಡಬಲ್ ವಿಭಾಗದ ತಾರೆ ಜ್ವಾಲಾಗುಟ್ಟಾ ಹಾಗೂ ನಟ ವಿಷ್ಣು ವಿಶಾಲ್ ಇದೀಗ ತಮ್ಮ ಮದುವೆ ದಿನಾಂಕ ಪ್ರಕಟಿಸಿದ್ದಾರೆ. ಇದೇ ಏಪ್ರಿಲ್ 22 ರಂದು ಇವರಿಬ್ಬರು ಸತಿ-ಪತಿಗಳಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಜ್ವಾಲಾಗುಟ್ಟಾ ಹಾಗೂ ನಟ ವಿಷ್ಣು ವಿಶಾಲ್ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ ವರ್ಷ (2020) ಸೆಪ್ಟೆಂಬರ್ ವೇಳೆ ಶಾಸ್ತ್ರೋಕ್ತವಾಗಿ ಎಂಗೇಜ್‍ಮೆಂಟ್ ಮಾಡಿಕೊಂಡಿದ್ದರು. ಇದೀಗ ಹಸೆಮಣೆ ಏರಲು ಮುಹೂರ್ತ ನಿಗದಿಯಾಗಿದ್ದು, ಈ ತಿಂಗಳು ಗುರು-ಹಿರಿಯರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಅಡಿ ಇಡಲಿದ್ದಾರೆ.

 

View this post on Instagram

 

A post shared by Jwala Gutta (@jwalagutta1)

ಮತ್ತೊಂದು ವಿಶೇಷ ಏನಂದರೆ ಈ ಜೋಡಿಗೆ ಇದು ಎರಡನೇ ಮದುವೆ. ನಟ ವಿಷ್ಣು ವಿಶಾಲ್ ಈ ಮುಂಚೆ ರಜಿನಿ ನಟರಾಜ್ ಎಂಬುವರ ಜತೆ ಮದುವೆಯಾಗಿದ್ದರು. ಇವರಿಗೆ ಅರ್ಯನ್ ಹೆಸರಿನ ಮಗು ಕೂಡ ಇದೆ. ಕೌಟುಂಬಿಕ ಕಲಹದ ಹಿನ್ನೆಲೆ 2018 ರಲ್ಲಿ ಪರಸ್ಪರ ವಿಚ್ಛೇದನ ಪಡೆದು ದೂರವಾಗಿದ್ದಾರೆ. ಇತ್ತ ಜ್ವಾಲಾ ಗುಟ್ಟಾ ಅವರದು ಅದೇ ಕಥೆ, ಇವರು ಚೇತನ್ ಆನಂದ್ ಎಂಬುವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, 2011ರಲ್ಲಿ  ಇವರ ವೈವಾಹಿಕ ಜೀವನ ಮುರಿದು ಬಿದ್ದಿತು.

 

View this post on Instagram

 

A post shared by Jwala Gutta (@jwalagutta1)

ಇನ್ನು ಇದೀಗ ಈ ತಾರೆಯರು ಎರಡೂ ಕುಟುಂಬಗಳ ಆಶೀರ್ವಾದದೊಂದಿಗೆ ಆಪ್ತರ ಸಮ್ಮುಖದಲ್ಲಿ ಇದೇ 22ರಂದು ನಾವು ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಸಂತಸವನ್ನು ಹಂಚಿಕೊಂಡಿರುವ ಅವರು, ನಮಗೆ ನೀವು ತೋರಿಸಿದ ಪ್ರೀತಿಗೆ ಚಿರಋಣಿ. ನಿಮ್ಮ ಆಶೀರ್ವಾದ ಮತ್ತು ಹಾರೈಕೆ ನಮ್ಮ ಮೇಲಿರಲಿ. ಪ್ರೀತಿ, ನಿಷ್ಠೆ, ಸ್ನೇಹದೊಂದಿಗೆ ಒಂದಾಗಿ ನಮ್ಮ ಜೀವನದ ಹೊಸ ಪ್ರಯಾಣ ಆರಂಭಿಸುತ್ತಿದ್ದೇವೆ ಎಂದು ಆಮಂತ್ರಣ ಪತ್ರಿಕೆಯಲ್ಲಿ ಬರೆಸಿದ್ದಾರೆ.

 

View this post on Instagram

 

A post shared by Jwala Gutta (@jwalagutta1)

ಕ್ರೀಡೆ – Udayavani – ಉದಯವಾಣಿ
Read More