ಟಿ20 ವಿಶ್ವಕಪ್ನಲ್ಲಿ ಸತತ ಎರಡು ಪಂದ್ಯ ಸೋತ ಬೆನ್ನಲ್ಲೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕೋಪಗೊಂಡಿದ್ದಾರೆ. ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ಧ ಹೀನಾಯವಾಗಿ ಸೋಲು ಕಾಣುತ್ತಿದ್ದಂತೆ, ಹಿಗ್ಗಾಮುಗ್ಗಾ ಜಾಡಿಸುತ್ತಿದ್ದಾರೆ. ಅಷ್ಟೆ ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಐಪಿಎಲ್ ಬಗ್ಗೆ ಪ್ರಶ್ನೆಗಳನ್ನ ಎತ್ತುತ್ತಿದ್ದಾರೆ.
ಐಪಿಎಲ್ನಿಂದಲೇ ಭಾರತ ಸೋಲಿರುವುದು. ಹಾಗಾಗಿ ಐಪಿಎಲ್ ಅನ್ನೇ ಬ್ಯಾನ್ ಮಾಡಿ ಎಂಬ ಘೋಷಣೆ ಕೂಗುತ್ತಿದ್ದಾರೆ. ಇದೀಗ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಐಪಿಎಲ್ ಬೆಂಬಲಕ್ಕೆ ನಿಂತಿದ್ದಾರೆ. ಐಪಿಎಲ್ ಆಟಗಾರರಿಗೆ ಹೆಚ್ಚು ಪ್ರಯೋಜನ ಇದೆ. ಇದೊಂದು ಅಭ್ಯಾಸದಂತೆ ಅನುಕೂಲವಾಗಲಿದೆ ಎಂದು ಗಂಭೀರ್ ಹೇಳಿದ್ದಾರೆ.
ಟೀಮ್ ಇಂಡಿಯಾ ಸೋತರೆ ಐಪಿಎಲ್ ಅನ್ನು ದೂಷಿಸಲು ಸಾಧ್ಯವಿಲ್ಲ. ರಾಷ್ಟ್ರೀಯ ತಂಡದಲ್ಲಿ ತಪ್ಪಾದರೆ, IPLನತ್ತ ಬೊಟ್ಟು ಮಾಡುವುದು ಎಷ್ಟು ಸರಿ. ಭಾರತ ತಂಡಕ್ಕಿಂತ ಉಳಿದ ತಂಡಗಳು, ಅದ್ಭುತ ಪ್ರದರ್ಶನ ನೀಡುತ್ತಿದ್ರೆ ಅದನ್ನ ಒಪ್ಪಿಕೊಳ್ಳಬೇಕಾಗುತ್ತೆ ಎಂದು ತಿಳಿಸಿದ್ದಾರೆ.
The post ಬ್ಯಾನ್ ಆಗುತ್ತಾ ಐಪಿಎಲ್? ಈ ಬಗ್ಗೆ ಗೌತಮ್ ಗಂಭೀರ್ ಹೇಳಿದ್ದೇನು? appeared first on News First Kannada.