‘ಬ್ರಹ್ಮದೇವ ಯಾಕಿಂಗೆ ಮಾಡಿದೆ, ಇನ್ನು ಈ ತಪ್ಪು ಮಾಡಲ್ಲ’; ನೆಲದಮೇಲೆ ಬಿದ್ದು ಬಿಕ್ಕಿ ಬಿಕ್ಕಿ ಅತ್ತ ಆರ್ಯವರ್ಧನ್ – Aryavardhan Guruji cried in bigg Boss House after BBK Punishment


ನಿಯಮ ಮುರಿದಿದ್ದಕ್ಕೆ  ಬಿಗ್ ಬಾಸ್ ಶಿಕ್ಷೆ ನೀಡಿದ್ದಾರೆ. ಮನೆಯಲ್ಲಿರುವ ಎಲ್ಲಾ ಈರುಳ್ಳಿ, ಮೆಣಸು ಹಾಗೂ ಕೊತ್ತುಂಬರಿ ಸೊಪ್ಪನ್ನು ಬಿಗ್ ಬಾಸ್ ಮರಳಿ ಪಡೆದುಕೊಂಡಿದ್ದಾರೆ.

‘ಬ್ರಹ್ಮದೇವ ಯಾಕಿಂಗೆ ಮಾಡಿದೆ, ಇನ್ನು ಈ ತಪ್ಪು ಮಾಡಲ್ಲ’; ನೆಲದಮೇಲೆ ಬಿದ್ದು ಬಿಕ್ಕಿ ಬಿಕ್ಕಿ ಅತ್ತ ಆರ್ಯವರ್ಧನ್

ಆರ್ಯವರ್ಧನ್

ಆರ್ಯವರ್ಧನ್ (Aryvardhan Guruji) ಅವರು ಬಿಗ್ ಬಾಸ್ ಒಟಿಟಿಯಿಂದ ಟಿವಿ ಸೀಸನ್​ವರೆಗೆ ಸಾಕಷ್ಟು ಗಮನ ಸೆಳೆಯುತ್ತಾ ಬರುತ್ತಿದ್ದಾರೆ. ಅವರು ನಡೆದುಕೊಳ್ಳುವ ರೀತಿ ಕೆಲವರಿಗೆ ಇಷ್ಟ ಆಗುವುದಿಲ್ಲ. ಕೆಲವೊಮ್ಮೆ ಅವರು ಬಾಯಿಗೆ ಬಂದಂತೆ ಮಾತನಾಡಿದ್ದೂ ಇದೆ. ಈಗ ಆರ್ಯವರ್ಧನ್ ಅವರು ಬಿಗ್ ಬಾಸ್ ಮನೆಯಲ್ಲಿ ತಪ್ಪೊಂದನ್ನು ಮಾಡಿದ್ದರು. ಈ ತಪ್ಪಿನಿಂದ ಬಿಗ್ ಬಾಸ್ (Bigg Boss) ಮನೆಯ ಎಲ್ಲಾ ಸದಸ್ಯರಿಗೆ ಶಿಕ್ಷೆ ನೀಡಲಾಗಿದೆ. ಇದರಿಂದ ಆರ್ಯವರ್ಧನ್ ಅವರು ಸಾಕಷ್ಟು ನೊಂದುಕೊಂಡಿದ್ದಾರೆ.

ಕಳೆದ ವಾರ ಅನುಪಮಾ ಗೌಡ ಅವರು ಕಳಪೆ ಪಟ್ಟ ಪಡೆದು ಜೈಲಿನಲ್ಲಿದ್ದರು. ಬಿಗ್ ಬಾಸ್ ನಿಯಮಗಳ ಪ್ರಕಾರ ಜೈಲಿನಲ್ಲಿರುವ ವ್ಯಕ್ತಿಗಳೇ ಮನೆಯಲ್ಲಿ ತರಕಾರಿ ಕತ್ತರಿಸಬೇಕು. ಒಂದೊಮ್ಮೆ ನಿಯಮ ಮುರಿದು ಮನೆ ಮಂದಿ ತರಕಾರಿ ಕತ್ತರಿಸಿದರೆ ಅದಕ್ಕೆ ಶಿಕ್ಷೆ ನೀಡಲಾಗುತ್ತದೆ. ಅನುಪಮಾಗೆ ಈರುಳ್ಳಿ ಕತ್ತರಿಸಲು ಕೊಡದೆ ಆರ್ಯವರ್ಧನ್​ ಅವರೇ ಈ ಕೆಲಸ ಮಾಡಿದ್ದಾರೆ. ರೂಪೇಶ್ ರಾಜಣ್ಣಗೆ ಆಮ್ಲೆಟ್ ಮಾಡಿಕೊಡಲು ಆರ್ಯವರ್ಧನ್ ಈರುಳ್ಳಿ ಕತ್ತರಿಸಿದ್ದರು.

ನಿಯಮ ಮುರಿದಿದ್ದಕ್ಕೆ  ಬಿಗ್ ಬಾಸ್ ಶಿಕ್ಷೆ ನೀಡಿದ್ದಾರೆ. ಮನೆಯಲ್ಲಿರುವ ಎಲ್ಲಾ ಈರುಳ್ಳಿ, ಮೆಣಸು ಹಾಗೂ ಕೊತ್ತುಂಬರಿ ಸೊಪ್ಪನ್ನು ಬಿಗ್ ಬಾಸ್ ಮರಳಿ ಪಡೆದುಕೊಂಡಿದ್ದಾರೆ. ಇದರಿಂದ ಈ ತರಕಾರಿ, ಸೊಪ್ಪು ಇಲ್ಲದೆ ಅಡುಗೆ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಇದು ಆರ್ಯವರ್ಧನ್​ಗೆ ಬೇಸರ ಮೂಡಿಸಿದೆ. ಅವರು ನಿರಂತರವಾಗಿ ಈರುಳ್ಳಿ ನೀಡಿ ಎಂದು ಕೋರುತ್ತಿದ್ದಾರೆ.

ಸೆಪ್ಟೆಂಬರ್ 8ರ ಎಪಿಸೋಡ್​ನಲ್ಲಿ ಮುಂಜಾನೆಯೇ ಆರ್ಯವರ್ಧನ್​ ಅವರು ಅಡುಗೆ ಮನೆಗೆ ಬಂದಿದ್ದರು. ನೆಲೆದ ಮೇಲೆ ಅವರು ಮಲಗಿದ್ದರು. ಈ ವೇಳೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ‘ಬ್ರಹ್ಮದೇವ ಯಾಕಿಂಗೆ ಮಾಡಿದೆ, ಇನ್ನು ಈ ತಪ್ಪು ಮಾಡಲ್ಲ. ದಯವಿಟ್ಟು ಈರುಳ್ಳಿ ಕೊತ್ತುಂಬರಿ ಸೊಪ್ಪು ಹಾಗೂ ಮೆಣಸು ಹಿಂದಿರುಗಿಸಿ. ಎಲ್ಲರಿಗೂ ತೊಂದರೆ ಆಗುತ್ತಿದೆ’ ಎಂದು ಕೋರಿದರು ಅವರು. ಈ ವೇಳೆ ನಿರಂತರವಾಗಿ ಕಣ್ಣೀರು ಬರುತ್ತಲೇ ಇತ್ತು.

TV9 Kannada


Leave a Reply

Your email address will not be published.