Categories
News

ಬ್ರಹ್ಮಾಂಡ ಹಗರಣ ಬಯಲಿಗೆ.. ಮಧ್ಯಾಹ್ನ ಕಾಣೆಯಾಗಿದ್ದ 1,504 ಬೆಡ್​ಗಳು ಪ್ರತ್ಯಕ್ಷ

ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಇಂದು ಬಿಬಿಎಂಪಿಯ ವಾರ್​ ರೂಂನಲ್ಲಿ ನಡೆಯುತ್ತಿದ್ದ ಬೆಡ್​ ಬ್ಲಾಕಿಂಗ್ ಹಗರಣವನ್ನ ಬಯಲಿಗೆಳೆದಿದ್ದಾರೆ. ಸುಮಾರು 4 ಸಾವಿರಕ್ಕೂ ಹೆಚ್ಚು ಬೆಡ್​ಗಳನ್ನು ಈ ಹಗರಣದಲ್ಲಿ ತಮಗೆ ಬೇಕಾದವರಿಗೆ, ಪ್ರಭಾವಿಗಳಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.

ಸದ್ಯ ಹಗರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನ ಬಂಧಿಸಲಾಗಿದ್ದು ಬೆಂಗಳೂರು ಪೊಲೀಸ್ ಆಯುಕ್ತರು ಪ್ರಕರಣವನ್ನ್ ಸಿಸಿಬಿಗೆ ವರ್ಗಾಯಿಸಿದ್ದಾರೆ. ಇತ್ತ ಹಗರಣ ಬಯಲಿಗೆಳೆದ ಪರಿಣಾಮ ಎಂಬಂತೆ ವಾರ್​ರೂಂನಲ್ಲಿ ವ್ಯವಸ್ಥೆ ಸರಿಯಾಗುತ್ತಿದೆ ಎಂದು ತೋರಿಸುವ ಅಂಕಿಅಂಶಗಳನ್ನ ತೇಜಸ್ವಿ ಸೂರ್ಯ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಕೋವಿಡ್ 19 ಬೆಡ್​ಗಳ ಸರ್ಕಾರಿ ಕೋಟಾದ ಅಂಕಿ-ಅಂಶಗಳನ್ನ ತೇಜಸ್ವಿ ಸೂರ್ಯ ಹಂಚಿಕೊಂಡಿದ್ದು ಇಂದು ಬೆಳಗ್ಗೆ ಒಂದೂ ಬೆಡ್ ಖಾಲಿಯಿಲ್ಲ ಎಂದು ತೋರಿಸುತ್ತಿದ್ದ ವೆಬ್​ಸೈಟ್ ಇದೀಗ 1504 ಬೆಡ್​ಗಳನ್ನು ತೋರಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ.

 

The post ಬ್ರಹ್ಮಾಂಡ ಹಗರಣ ಬಯಲಿಗೆ.. ಮಧ್ಯಾಹ್ನ ಕಾಣೆಯಾಗಿದ್ದ 1,504 ಬೆಡ್​ಗಳು ಪ್ರತ್ಯಕ್ಷ appeared first on News First Kannada.

Source: newsfirstlive.com

Source link

Leave a Reply